ತಿರುವನಂತಪುರಂ: ಕೇರಳ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ (Free Bus Womens) ಪ್ರಯಾಣ ಸೇವೆ ಒದಗಿಸುವ ‘ಪ್ರಿಯದರ್ಶಿನಿ ಯೋಜನೆ’ ಜೂನ್ 15 ರಿಂದ ಜಾರಿಗೆ ಬರಲಿದೆ. ಈ ಸಂಬಂಧ ಕೇರಳ ರಾಜ್ಯರಸ್ತೆ ಸಾರಿಗೆ ನಿಗಮವು (KSRTC) ಉಚಿತ ಬಸ್ ಲಭ್ಯವಿರುವ ಬಸ್‌ಗಳ ಪಟ್ಟಿಯನ್ನ ಇಂದು ಮಾಡಿದೆ.
ಕೆಎಸ್‌ಆರ್‌ಟಿಸಿ ಕಾರ್ಯ ನಿರ್ವಹಿಸುವ 7 ವಿಭಾಗಗಳ ಸಾಮಾನ್ಯ ಬಸ್‌ಗಳಲ್ಲಿ ಮಹಿಳೆಯರು ಮತ್ತು ತೃತೀಯ ಲಿಂಗಿಗಳು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಬಲಪಡಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಇದನ್ನೂ ಓದಿ: ಕೇರಳ ಸಿಎಂಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಬಂಧನ

ʻಪ್ರಿಯದರ್ಶಿನಿ ಯೋಜನೆʼ (Priyadarshini Scheme) ಅಡಿಯಲ್ಲಿ ಬರುವ ಸಾಮಾನ್ಯ, ನಗರ, ಸೀಮಿತ ನಿಲುಗಡೆ, ಸ್ಟೇಜ್ ಸ್ಟಾಪ್, ಪಟ್ಟಣದಿಂದ ಪಟ್ಟಣ ಮತ್ತು ಗ್ರಾಮೀಣ ಭಾಗದ ಬಸ್‌ಗಳಲ್ಲಿ ಉಚಿತ ಪ್ರಯಾಣ ಲಭ್ಯವಿರಲಿವೆ. ಈ ಯೋಜನೆ ಅಡಿಯಲ್ಲಿ ಬರುವ ಬಸ್‌ಗಳನ್ನ ಮಹಿಳೆಯರು ಸುಲಭವಾಗಿ ಗುರುತಿಸಲು ಸ್ಟಿಕ್ಕರ್‌ಗಳನ್ನ ಪ್ರದರ್ಶಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.
ನೀವು ತಿಳಿಯಬೇಕಾಗಿದ್ದು…
ʻಪ್ರಿಯದರ್ಶಿನಿ ಯೋಜನೆಯ ಮೊದಲ ಹಂತವು ಜೂನ್ 15 ರಿಂದ ಶುರುವಾಗಲಿದ್ದು, ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಲಾಗುತ್ತದೆ. ಅಂದು ತಿರುವನಂತಪುರದಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ಭಾರತದ ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇಮಕ

ವಾರ್ಷಿಕ 800 ಕೋಟಿ ವೆಚ್ಚ!
‘ಪ್ರಿಯದರ್ಶಿನಿ’ ಯೋಜನೆಗೆ ಪ್ರತಿ ತಿಂಗಳು ಸುಮಾರು 60 ಕೋಟಿ ರೂಪಾಯಿ ವೆಚ್ಚವಾಗಲಿದೆ. ವಾರ್ಷಿಕ ಅಂದಾಜು 800 ಕೋಟಿ ರೂ. ವೆಚ್ಚವಾಗಲಿ. ಇದನ್ನ ರಾಜ್ಯ ಸರ್ಕಾರ ಭರಿಸಲಿದೆ. ಪ್ರಸ್ತುತ ಕೇರಳ ಸರ್ಕಾರವು ಕೆಎಸ್‌ಆರ್‌ಟಿಸಿ ನೌಕರರ ವೇತನ ಮತ್ತು ಪಿಂಚಣಿ ಅಗತ್ಯತೆಗಳನ್ನ ಪೂರೈಸಲು ವಾರ್ಷಿಕ ಸುಮಾರು 1,500 ಕೋಟಿ ರೂ.ಗಳನ್ನ ನೀಡಲಾಗುತ್ತಿದೆ. ಇದರೊಂದಿಗೆ ಹೆಚ್ಚುವರಿ 800 ಕೋಟಿ ರೂ.ಗಳನ್ನು ನೀಡಲಿದೆ ಎಂದು ಸಿಎಂ ಸತೀಶನ್ (VD Satheesan) ತಿಳಿಸಿದ್ದಾರೆ.
ಈ ವರ್ಷದ ಮಾರ್ಚ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ರಾಹುಲ್ ಗಾಂಧಿ ಘೋಷಿಸಿದ 5 ʻಇಂದಿರಾ ಗ್ಯಾರಂಟಿʼಗಳಲ್ಲಿ ಮಹಿಳೆಯರಿಗೆ ಉಚಿತ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ, ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಮಾಸಿಕ ರೂ. 1,000 ಸ್ಟೈಫಂಡ್, ಕಲ್ಯಾಣ ಪಿಂಚಣಿ 3,000 ರೂ.ಗೆ ಹೆಚ್ಚಿಸುವುದು, ಪ್ರತಿ ಮನೆಗೆ 25 ಲಕ್ಷ ರೂ. ವರೆಗೆ ಆರೋಗ್ಯ ವಿಮೆ ಕಲ್ಪಿಸುವುದು & ಯುವ ಉದ್ಯಮಿಗಳಿಗೆ 5 ಲಕ್ಷ ರೂ. ವರೆಗೆ ಬಡ್ಡಿರಹಿತ ಸಾಲ ಕಲ್ಪಿಸುವುದು ಸೇರಿವೆ. ಇದನ್ನೂ ಓದಿ: ಭಯೋತ್ಪಾದಕರ ಪೋಷಕರಿಗೆ ಸಿಂಧೂ ನದಿ ನೀರು ಕೊಡಲ್ಲ: ಪಾಕ್‌ಗೆ ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ
