ನವದೆಹಲಿ: ಭಯೋತ್ಪಾದಕರ ಪೋಷಕರಿಗೆ ಸಿಂಧೂ ನದಿ ನೀರನ್ನು (Indus Water) ಕೊಡಲ್ಲ ಎಂದು ಪಾಕಿಸ್ತಾನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ತೆಲಂಗಾಣ ಬಿಜೆಪಿ ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ‘ಬುದ್ಧಿಜೀವಿಗಳ ಸಭೆ’ಯನ್ನುದ್ದೇಶಿಸಿ ಮಾತನಾಡಿದ ಅವರು, ಶಾಂತಿ ಮತ್ತು ಸಾಮರಸ್ಯದ ಭಾಷೆಯನ್ನು ಅರ್ಥಮಾಡಿಕೊಳ್ಳದವರಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ಆಪರೇಷನ್ ಸಿಂಧೂರ ಮೂಲಕ ನಮ್ಮ ಸರ್ಕಾರ ಜಗತ್ತಿಗೆ ತೋರಿಸಿದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಸಿಂಧೂ ನದಿ ನೀರು ಈಶಾನ್ಯ ರಾಜ್ಯಗಳಿಗೆ ಹರಿಸಲು ಕೇಂದ್ರ ಸರ್ಕಾರ ಪ್ಲ್ಯಾನ್
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ಸ್ಥಗಿತಗೊಳಿಸುವ ಮೂಲಕ, ಕಣ್ಣೀರು ಬತ್ತಿಹೋದವರು ನಮ್ಮಿಂದ ನೀರನ್ನು ನಿರೀಕ್ಷಿಸಬಾರದು ಎಂದು ನಾವು ತಿಳಿಸಿದ್ದೇವೆ. ಸಿಂಧೂ ನದಿಯ ನೀರು ಭಯೋತ್ಪಾದಕರು ಮತ್ತು ಮಾನವೀಯತೆಯ ಶತ್ರುಗಳ ಪೋಷಕರಿಗೆ ತಲುಪಲು ನಾವು ಬಿಡುವುದಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿಯವರು ‘ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ’ ಎಂಬ ಘೋಷಣೆಯನ್ನು ಪುನರುಚ್ಚರಿಸಿದ್ದಾರೆ.
ಸಿಂಧೂ ವ್ಯವಸ್ಥೆಯ ನದಿಗಳ ನೀರಿನ ಬಳಕೆಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ 1960ರ ಸೆಪ್ಟೆಂಬರ್ 19 ರಂದು ಐಡಬ್ಲ್ಯೂಟಿಗೆ ಸಹಿ ಹಾಕಲಾಯಿತು. ಇದನ್ನೂ ಓದಿ: ಸಿಂಧೂ ನದಿ ನೀರು ಹಂಚಿಕೆ ಒಪ್ಪಂದಕ್ಕೆ ಬ್ರೇಕ್ – ಪಾಕಿಸ್ತಾನಕ್ಕೆ ಅಧಿಕೃತ ರಾಜತಾಂತ್ರಿಕ ಟಿಪ್ಪಣಿ ಕಳುಹಿಸಿದ ಭಾರತ
ಪಹಲ್ಗಾಂ ಉಗ್ರ ಕೃತ್ಯದ ನಂತರ ಭಾರತ ಸಿಂಧೂ ನದಿನೀರು ಹಂಚಿಕೆ ಒಪ್ಪಂದವನ್ನು ಅಮಾನತುಗೊಳಿಸಿತ್ತು. ಪಾಕಿಸ್ತಾನದ ಹಲವು ಪ್ರಾಂತ್ಯಗಳಿಗೆ ಭಾರತದ ನಿರ್ಧಾರದಿಂದ, ಕೃಷಿ, ಇಂಧನ ಮತ್ತು ಆರ್ಥಿಕತೆಯ ಮೇಲೆ ಇದು ಗಮರ್ನಾಹ ಪರಿಣಾಮ ಬೀರಿತ್ತು.
