- ಆರೋಪಿ ವಿರುದ್ಧದ ಚಾರ್ಜ್ ಬದಲಿಸಿದ್ದೇಕೆ?
ನವದೆಹಲಿ: ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಅತ್ಯಾಚಾರ ಆರೋಪವಿದೆ. ತಂದೆ ರೇವಣ್ಣ (H.D Revanna) ವಿರುದ್ಧ ಬೇರೆ ಆರೋಪಗಳಿವೆ. ಈಗ ಒಂದೇ ಕೇಸ್ ಎಂದು ತಂದೆ ಮೇಲೂ ರೇಪ್ ಆರೋಪ ಹೊರಿಸಲು ಆಗುವುದಿಲ್ಲ ಎಂದು ಹೈಕೋರ್ಟ್ (High Court) ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ (Supreme Court) ಅಸಮಾಧಾನ ಹೊರಹಾಕಿದೆ.
ಶಾಸಕ ಹೆಚ್‌ಡಿ ರೇವಣ್ಣ ವಿರುದ್ಧ ಲೈಗಿಂಕ ದೌರ್ಜನ್ಯ, ಬೆದರಿಕೆ, ಹಲ್ಲೆ ಪ್ರಕರಣದಲ್ಲಿ ಹೈಕೋರ್ಟ್ ಹಲ್ಲೆ ಪ್ರಕರಣ ರದ್ದು ಮಾಡಿತ್ತು. ಲೈಗಿಂಕ ದೌರ್ಜನ್ಯ ಪ್ರಕರಣ ತನಿಖೆ ಪುರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇದನ್ನೂ ಓದಿ: ಕೆಲಸದಾಕೆಯ ಮೇಲೆ ರೇಪ್ – ಪ್ರಜ್ವಲ್ ರೇವಣ್ಣ ಅತ್ಯಾಚಾರಿ ಎಂದು ಕೋರ್ಟ್ ತೀರ್ಪು
ಈ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾ. ಪಾರ್ದಿವಾಲ ನೇತೃತ್ವದ ಪೀಠ, ವಿಚಾರಣೆ ವೇಳೆ ಹೈಕೋರ್ಟ್ ಆದೇಶದ ಬಗ್ಗೆ ಅಸಮಧಾನ ಹೊರಹಾಕಿದೆ. ಹಲ್ಲೆ ಪ್ರಕರಣವನ್ನು ರದ್ದುಪಡಿಸಿ, ಲೈಗಿಂಕ ದೌರ್ಜನ್ಯ ಮುಂದುವರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಹೈಕೋರ್ಟ್ ಆರೋಪಿಯ ವಿರುದ್ಧದ ಚಾರ್ಜ್ ಬದಲಾಯಿಸಿದ್ದೇಕೆ ಎಂದು ಪೀಠ ಪ್ರಶ್ನಿಸಿದೆ.
ಮಗ ಪ್ರಜ್ವಲ್ ರೇವಣ್ಣ ಮೇಲೆ ಅತ್ಯಾಚಾರ ಆರೋಪವಿದೆ, ಚಾರ್ಜ್ ಫ್ರೇಮ್ ಆಗಿದೆ. ತಂದೆ ರೇವಣ್ಣ ಮೇಲೆ ಬೇರೆ ಆರೋಪಗಳಿವೆ. ಇಬ್ಬರ ಮೇಲೂ ಬೇರೆ ಬೇರೆ ಆರೋಪಗಳಿವೆ. ಒಂದೇ ಕೇಸ್ ಎಂದು ತಂದೆಗೂ ರೇಪ್ ಆರೋಪ ಹಾಕಲು ಬರುವುದಿಲ್ಲ ಎಂದು ಕೋರ್ಟ್ ಹೇಳಿದೆ. ಈ ಬಗ್ಗೆ ನೋಟಿಸ್‌ಗೆ ಉತ್ತರ ನೀಡುವಂತೆ ಹೆಚ್.ಡಿ ರೇವಣ್ಣಗೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: 70 ಪೆನ್ ಡ್ರೈವ್ ಬಳಕೆ – ಆಪ್ತ ವ್ಯಕ್ತಿಗಳಿಂದಲೇ ಪ್ರಜ್ವಲ್ ರೇವಣ್ಣಗೆ ಖೆಡ್ಡಾ
