ಬೆಂಗಳೂರು: ರಾಮ ಮಂದಿರ ದೇಣಿಗೆ ಅಕ್ರಮದಲ್ಲಿ ಆರ್‌ಎಸ್‌ಎಸ್ (RSS) ಅವರು ಬಹಿರಂಗವಾಗಿ ಸಾರ್ವಜನಿಕರ ಕ್ಷಮೆ ಕೇಳಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆಗ್ರಹಿಸಿದ್ದಾರೆ.
ರಾಮ ಮಂದಿರ (Ram mandir) ದೇಣಿಗೆ ಅಕ್ರಮದ ವಿಚಾರಕ್ಕೆ ಆರ್‌ಎಸ್‌ಎಸ್‌ನಿಂದ ವಿಷಾದ ವ್ಯಕ್ತಪಡಿಸಿದ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹಾಗಾದರೆ ಕದ್ದಿದ್ದಾರೆ ಅಂತ ವಿಷಾದ ವ್ಯಕ್ತಪಡಿಸಿದ್ದಾರಾ? ಮೊದಲು ಅವರು ನಮ್ಮಿಂದ ತಪ್ಪಾಗಿದೆ ಅಂತ ಒಪ್ಪಿಕೊಳ್ಳಬೇಕು. ತಪ್ಪು ಒಪ್ಪಿಕೊಂಡು ಸಾರ್ವಜನಿಕರಲ್ಲಿ ಕ್ಷಮೆ ಕೇಳಬೇಕು. ಸುಮ್ಮನೆ ಪ್ರೆಸ್ ನೋಟ್ ಕೊಡೋದು ಅಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಹುಂಡಿ ಹಣ ಎಣಿಕೆಗೆ ಮಾರ್ಗಸೂಚಿ ಬಿಡುಗಡೆ
ಎಲ್ಲಾ ವಿಹೆಚ್‌ಪಿ ಪದಾಧಿಕಾರಿಗಳು, ಕಾರ್ಯಕರ್ತರು ಅಕ್ರಮ ಮಾಡಿದ್ದಾರೆ. ಆರ್‌ಎಸ್‌ಎಸ್‌ದು ಅಧಿಕೃತ ಅಂಗ ಸಂಸ್ಥೆ ವಿಹೆಚ್‌ಪಿ. ಇದನ್ನು ಹುಟ್ಟುಹಾಕಿದ್ದೇ ಆರ್‌ಎಸ್‌ಎಸ್. ಅಧಿಕೃತವಾಗಿ ಆರ್‌ಎಸ್‌ಎಸ್-ವಿಹೆಚ್‌ಪಿಗೆ ನಂಟಿದೆ. ಅವರೆಲ್ಲ ಸಂಬಂಧಿಕರೇ ಇದ್ದಾರೆ. ವಿಷಾದ ವ್ಯಕ್ತಪಡಿಸೋದಲ್ಲ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಮಿಕ್ಕಿದೆಲ್ಲ ಪಬ್ಲಿಕ್‌ನಲ್ಲಿ ಮಾಡ್ತೀರಾ. ಮೋಹನ್ ಭಾಗವತ್ ನಾವು ಮುಚ್ಚಿಮರೆ ಮಾಡಲ್ಲ ಅಂದಿದ್ದಾರೆ. ಹಾಗಾದ್ರೆ ಇದನ್ನ ಯಾಕೆ ಮುಚ್ಚುಮರೆ ಮಾಡಿದ್ರಿ. ಸಾರ್ವಜನಿಕವಾಗಿ ಬಂದು ಸಾರಿ ಕೇಳಿ. ಭಕ್ತರ ಭಾವನೆಗೆ ನೋವಾಗಿದೆ ಎಂದಿದ್ದಾರೆ.ಇದನ್ನೂ ಓದಿ: ಪೌರತ್ವವನ್ನು ನ್ಯಾಯಯುತ ಪ್ರಕ್ರಿಯೆಯ ಮೂಲಕವೇ ನಿರ್ಧರಿಸಬೇಕು: ಅಸ್ಸಾಂನ 27 ಮಂದಿಗೆ ಸುಪ್ರೀಂ ರಿಲೀಫ್
ಪಾಕಿಸ್ತಾನ ಜೊತೆ ಸಂಬಂಧ ಬೆಳೆಸಬೇಕು ಅಂತ ಆರ್‌ಎಸ್‌ಎಸ್‌ನ ಅಭಿಪ್ರಾಯ. ಹಾಗಾದ್ರೆ ನರೇಂದ್ರ ಮೋದಿ ವಿದೇಶಾಂಗ ನೀತಿ ಆರ್‌ಎಸ್‌ಎಸ್‌ಗೆ ಕೊಟ್ಟಿದ್ದಾರಾ? ಆರ್ಥಿಕ ಪರಿಸ್ಥಿತಿ, ಉದ್ಯೋಗದ ಬಗ್ಗೆ ಎಲ್ಲದರ ಬಗ್ಗೆ ಆರ್‌ಎಸ್‌ಎಸ್ ಅಭಿಪ್ರಾಯ ಇದೆ. ಇದರ ಬಗ್ಗೆಯೂ ಆಚೆ ಬಂದು ಜನರ ಮುಂದೆ ಕ್ಷಮೆ ಕೇಳಿ ಎಂದು ಹೇಳಿದ್ದಾರೆ.
ಜನಸಂಖ್ಯಾ ನಿಯಂತ್ರಣದ ಬಗ್ಗೆ ಪ್ರಸ್ತಾಪಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜನಸಂಖ್ಯೆ ಬಗ್ಗೆ ಆರ್‌ಎಸ್‌ಎಸ್ ಅವರು ಮಾತಾಡ್ತಾರೆ. ಅವರು ಬ್ರಹ್ಮಚಾರಿಗಳು ಅಲ್ಲವಾ? ಬೇರೆ ಅವರಿಗೆ 3-4 ಮಕ್ಕಳು ಹುಟ್ಟಿಸಿ, ಅವರನ್ನು ಧರ್ಮ ರಕ್ಷಣೆ, ಗೋರಕ್ಷಣೆಗೆ ಬಿಡಿ ಅಂತ ಹೇಳ್ತಾರೆ. ಇವರು ಬ್ರಹ್ಮಚಾರಿಗಳು ಅಂತ ಓಡಾಡ್ತಾರೆ. ಆರ್‌ಎಸ್‌ಎಸ್ ನೀತಿಯಲ್ಲಿ ಸಾಕಷ್ಟು ಗೊಂದಲ ಇದೆ. ಅವರಿಗೆ ಅವರ ಸಂಸ್ಥೆ ಏನು ಮಾಡ್ತಿದೆ? ಹೇಗೆ ಮಾಡ್ತಿದೆ? ಅವರ ಸಂವಿಧಾನ ಏನಿದೆ? ಅಂತ ಗೊತ್ತೇ ಇಲ್ಲ. ಸಂವಿಧಾನ ತೆಗೆದು ಓದಿ ಎಂದು ಲೇವಡಿ ಮಾಡಿದ್ದಾರೆ.ಇದನ್ನೂ ಓದಿ: ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ: ತನಿಖಾ ವರದಿ ಸಲ್ಲಿಸುವಂತೆ ಸುಪ್ರೀಂ ಆದೇಶ
