DistrictsKarnatakaLatestMain PostMandya

ಕೋರ್ಟ್ ತೀರ್ಪು ಬರುವವರೆಗೂ ಮಗಳು ಮನೆಯಲ್ಲೇ ಇರಲಿ: ಮಂಡ್ಯ ಪೋಷಕರು

ಮಂಡ್ಯ: ಜಿಲ್ಲೆಯಲ್ಲೂ ಹಿಜಬ್ ವಿವಾದ ಮುಂದುವರಿದಿದೆ. ಹಿಜಬ್ ತೆಗೆಸಲು ಪೋಷಕರು ನಿರಾಕರಿಸಿ ವಿದ್ಯಾರ್ಥಿನಿಯರನ್ನು ಮನೆಗೆ ವಾಪಸ್ ಕಡೆದುಕೊಂಡು ಹೋದ ಘಟನೆ ನಡೆದಿದೆ.

ಮಂಡ್ಯದ ನೂರಡಿ ರಸ್ತೆಯಲ್ಲಿರುವ ಗೌಸಿಯಾ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಆಡಳಿತ ಮಂಡಳಿ ಹಿಜಬ್ ತೆಗೆದು ತರಗತಿ ಪ್ರವೇಶಿಸಬೇಕು ಎಂದು ಸೂಚಿಸಿದ್ದಕ್ಕೆ ವಿದ್ಯಾರ್ಥಿನಿ ಅರ್ಫಿಯಾ ವಾಪಸ್ ಮನೆಗೆ ಹೋಗಿದ್ದಾಳೆ.

ಶಾಲೆಗಿಂತ ನಮಗೆ ಧರ್ಮವೇ ಮುಖ್ಯವಾಗಿದೆ. ಕೋರ್ಟ್ ತೀರ್ಪು ಬರುವವರೆಗೂ ಮನೆಯಲ್ಲೇ ಇರಲಿ ಎಂದು ವಿದ್ಯಾರ್ಥಿನಿಯ ಪೋಷಕರು ತಿಳಿಸಿದ್ದಾರೆ. ನಮಗೆ ಮೊದಲು ನಮ್ಮ ಧರ್ಮ ಮುಖ್ಯ ಆ ನಂತರ ಶಾಲೆ, ಈ ಹಿಂದೆ ಕೊರೋನಾದಿಂದ ಶಾಲೆಗಳು ಬಂದ್ ಆಗಿದ್ದಾಗ ಶಿಕ್ಷಣ ಹಾಳಾಗಿಲ್ಲ, ಈಗ ಹಿಜಬ್‍ನಿಂದ ಶಿಕ್ಷಣ ಹಾಳಾಗುತ್ತಾ ಎಂದು ಪೋಷಕರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳು ಭೋಗದ ವಸ್ತುಗಳಲ್ಲ – ಜಮೀರ್ ವಿರುದ್ಧ ಮಾಳವಿಕ ಅವಿನಾಶ್ ಕಿಡಿ

ಹಿಜಬ್ ಹಾಕದಿದ್ದರೆ ಶಿಕ್ಷಣ ಕಲಿಸಯಲು ಸಾಧ್ಯವಿಲ್ಲವಾ? ಇಷ್ಟು ದಿನದಿಂದ ಇಲ್ಲವಾದ ಸಮಸ್ಯೆ ಈಗ ಎಲ್ಲಿಂದ ಬಂತು. ಶಾಲಾ ಶಿಕ್ಷಕರು ವಿದ್ಯಾರ್ಥಿನಿಯ ಹಿಜಬ್‍ನ್ನು ತೆಗೆಯಲು ಹೇಳಿದರು. ಆಗ ವಿದ್ಯಾರ್ಥಿನಿಯ ನಾವು ಹೈಕೋರ್ಟ್ ತೀರ್ಪು ಬಂದ ನಂತರದಲ್ಲೇ ತಮ್ಮ ಮಗಳನ್ನು ಕರೆದುಕೊಂಡು ಬರುತ್ತೇವೆ. ಶಿಕ್ಷಣವು ಮುಖ್ಯವಾಗಿದೆ. ಆದರೆ ಹಿಜಬ್ ಧರಿಸಿಲ್ಲ ಎಂದರೆ ನಮಗೆ ತೊಂದರೆ ಆಗುತ್ತದೆ ಎಂದು ಹೇಳಿ ವಾಪಸ್ ಕರೆದುಕೊಂಡು ಹೋಗಿದ್ದಾರೆ.

ಹಿಜಬ್ ಹಾಗೂ ಕೇಸರಿ ಶಾಲು ವಿವಾದದ ಘರ್ಷಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಳೆದ ವಾರ ಮೂರು ದಿನಗಳ ಕಾಲ ಶಾಲಾ ಕಾಲೇಜಿಗೆ ರಜೆ ನೀಡಿತ್ತು. ಆದರೆ ನಿನ್ನೆಯಿಂದ ಸರ್ಕಾರ 9 ಹಾಗೂ 10ನೇ ತರಗತಿಗೆ ಶಾಲೆ ಆರಂಭ ಮಾಡಿದೆ. ಶಾಲೆ ಆರಂಭದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿತ್ತು. ಇದನ್ನೂ ಓದಿ: ಮುಂದಿನ ವರ್ಷದಿಂದ ಸಮವಸ್ತ್ರ ಗೊಂದಲ ಇಲ್ಲದಂತೆ ಕಾನೂನು : ಬಿ.ಸಿ ನಾಗೇಶ್

Leave a Reply

Your email address will not be published. Required fields are marked *

Back to top button