– ಕಾಂಗ್ರೆಸ್ ಇಟ್ಟಿರೋ ಹೆಜ್ಜೆಗೆ ತಕ್ಕ ಪಾಠ ಕಲಿಯುತ್ತೆ
ಚಿಕ್ಕಮಗಳೂರು: ರಾತ್ರೋರಾತ್ರಿ ಸಿಎಂ ಬದಲಾದ್ರೆ ಏನಾಗುತ್ತೆ ಅನ್ನೋದು ಕಾಂಗ್ರೆಸ್‌ಗೆ (Congress) ಗೊತ್ತಿದೆ. ಕಾಂಗ್ರೆಸ್ ಇಟ್ಟಿರೋ ಹೆಜ್ಜೆಗೆ ತಕ್ಕ ಪಾಠ ಕಲಿಯಲಿದೆ ಎಂದು ಅಹಿಂದ ಮುಖಂಡ ಪುಟ್ಟೇಗೌಡ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ (Chikkamagaluru) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ರಾತ್ರೋರಾತ್ರಿ ಸಿಎಂ ಬದಲಾವಣೆ ಮಾಡುವ ಕಾಂಗ್ರೆಸ್ ನಡೆಗೆ ನಮ್ಮ ವಿರೋಧವಿದೆ. ರಾತ್ರೋರಾತ್ರಿ ಸಿಎಂ ಬದಲಾದರೆ ಏನಾಗುತ್ತೆ ಅನ್ನೋದು ಕಾಂಗ್ರೆಸ್‌ಗೆ ಗೊತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ವಿರೋಧಿಸಿ ಯಾದಗಿರಿಯಲ್ಲಿ ಪ್ರತಿಭಟನೆ – ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ
ಕಾಂಗ್ರೆಸ್ ಭವಿಷ್ಯ ಭದ್ರವಾಗಿರಬೇಕು ಎಂದರೆ ಸಿದ್ದರಾಮಯ್ಯ ಅವರಿಗೆ ಇನ್ನೂ 2 ವರ್ಷ ಅಧಿಕಾರ ಕೊಡಬೇಕು. ಈ ಮೂಲಕ ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕು. ಇಲ್ಲವಾದರೆ, ಈಗ ಕಾಂಗ್ರೆಸ್ ಇಟ್ಟಿರೋ ಹೆಜ್ಜೆಗೆ ತಕ್ಕ ಪಾಠ ಕಲಿಯುತ್ತೆ.
ಅಹಿಂದ ಕಾಂಗ್ರೆಸ್‌ಗೆ ಬೆಂಬಲ ಕೊಡುತ್ತೋ? ಇಲ್ವೋ? ಅನ್ನೋದು ಕಾಂಗ್ರೆಸ್‌ಗೆ ಗೊತ್ತಿದೆ. ಬಂಗಾರಪ್ಪ, ದೇವರಾಜ ಅರಸು, ವೀರಪ್ಪ ಮೊಯ್ಲಿಯವರನ್ನು ರಾತ್ರೋರಾತ್ರಿ ತೆಗೆದಿದ್ರು. ಆಗ, ಕಾಂಗ್ರೆಸ್ ಏನಾಗಿದೆ ಅನ್ನೋದು ಅದರ ಕಣ್ಮುಂದೆಯೇ ಇತಿಹಾಸ ಇದೆ. ಅದು ಮತ್ತೆ ಪುನಾರವರ್ತನೆ ಆಗಬಾರದು ಅಂತ ಅಹಿಂದ, ಹಿಂದುಳಿದ ವರ್ಗ ಎಚ್ಚರಿಕೆ ನೀಡ್ತಿದೆ.
ನಾವು ಈಗ ಕಾಂಗ್ರೆಸ್ ಪಕ್ಷಕ್ಕೆ ಹೇಳೋ ಅಗತ್ಯವಿಲ್ಲ. ಇಂತಹ ಸಂದರ್ಭದ ಬಳಿಕ ಪಕ್ಷ ಏನಾಗಿದೆ ಅನ್ನೋದು ಅವರಿಗೆ ಗೊತ್ತಿದೆ. ಇನ್ನೂ 2 ವರ್ಷಗಳ ಕಾಲ ಸಿದ್ದರಾಮಯ್ಯನವರನ್ನ ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ – ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿಗೆ ಪತ್ರ ಹಸ್ತಾಂತರ
