– ಮೊದಲ ಬಾರಿ ಬ್ರೇಕ್ ಮಾಡಿದ್ರೆ 15,000 ರೂ., ಎರಡನೇ ಬಾರಿಗೆ 30,000 ರೂ. ದಂಡ
ಬೆಂಗಳೂರು: ಕಸ ವಿಲೇವಾರಿ ನಿಯಮ ಉಲ್ಲಂಘನೆ ಮಾಡಿದ 50 ಸಾವಿರ ಮಂದಿಗೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಮಂಡಳಿ ನೋಟಿಸ್ (The Bengaluru Solid Waste Management Limited) ನೀಡುತ್ತಿದೆ.
ನಿಯಮ ಉಲ್ಲಂಘಿಸಿದ 50 ಸಾವಿರ ಬೃಹತ್ ತ್ಯಾಜ್ಯ ಉತ್ಪಾದಕರಿಗೆ ನೋಟಿಸ್ ನೀಡಲಾಗುತ್ತಿದ್ದು, 15 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ. ನೋಟಿಸ್ ನೀಡಿದ ಬಳಿಕವೂ ಎರಡನೇ ಬಾರಿಗೆ ಉಲ್ಲಂಘಿಸಿದವರಿಗೆ 30 ಸಾವಿರ ರೂ. ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಗೋಹತ್ಯೆ ನಿಷೇಧ ವಿವಾದ; ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ
ಕೆಲ ಹೋಟೆಲ್, ಮಾಲ್, ಅಪಾರ್ಟ್ಮೆಂಟ್, ಚೌಟರಿ ಮತ್ತು ಐಟಿ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿದ್ದೇವೆ. ತ್ಯಾಜ್ಯವನ್ನ ಸ್ಥಳದಲ್ಲೇ ಸಂಸ್ಕರಿಸಬೇಕು. ಇಲ್ಲವಾದರೆ ಅಧಿಕೃತ ವೆಂಡರ್ಸ್ ಸಂಸ್ಥೆಗೆ ನೀಡಬೇಕು. ಒಂದು ವೇಳೆ ಸ್ಥಳದಲ್ಲೆ ಸಂಸ್ಕರಿಸದೇ, ಅಧಿಕೃತ ವೆಂಡರ್ಸ್‌ಗೆ ನೀಡದಿದ್ದರೆ ಜಿಬಿಎ ಕಸದ ಲಾರಿಗೆ ತ್ಯಾಜ್ಯ ಕೊಡಬೇಕು. ಈ ಮೂರು ನಿಯಮ ಉಲ್ಲಂಘಿಸಿದ್ರೆ ಕಾನೂನು ರೀತಿಯ ಕ್ರಮ ಹಾಗೂ ಕಸದ ಪ್ರಮಾಣ ಆಧರಿಸಿ ದಂಡ ವಿಧಿಸಲಾಗುವುದು ಎಂದಿದೆ.
ಈ ಕುರಿತು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಮಂಡಳಿ ಸಿಇಓ ಕರೀಗೌಡ ಅವರು `ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ಅನಧಿಕೃತವಾಗಿ ಕಸ ಉತ್ಪಾದನೆ, ವಿಲೇವಾರಿ ಮಾಡುವವರ ಪತ್ತೆ ಹಚ್ಚಿ ದಂಡ ಹಾಕಲು ತಯಾರಿ ನಡೆಸುತ್ತಿದ್ದು, ಈ ರೀತಿಯ ಕಸ ವಿಲೇವಾರಿ ನಿಯಮ ಉಲ್ಲಂಘನೆ ಮಾಡಿದ 50 ಸಾವಿರ ಮಂದಿಗೆ ನೋಟಿಸ್ ನೀಡಿ, 15 ಸಾವಿರದವರೆ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದೇವೆ. ನೋಟಿಸ್ ನೀಡಿದ 7 ದಿನಗಳ ಒಳಗಡೆ ತ್ಯಾಜ್ಯ ವಿಲೇವಾರಿ ಹೇಗೆ ಮಾಡ್ತೀರಾ ಎಂದು ಉತ್ತರ ಕೊಡಬೇಕು. ಇಲ್ಲದಿದ್ದರೆ ನಿಯಮಾನುಸಾರ ದಂಡ ಪಕ್ಕಾ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಬಳ್ಳಾರಿಯಲ್ಲಿ ಪುಂಡರಿಗೆ ಖಾಕಿ ಬಿಸಿ: ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಡ್ರಗ್ಸ್ ಸೇವಿಸುತ್ತಿದ್ದ 174 ಮಂದಿ ವಶಕ್ಕೆ
