ಬೆಂಗಳೂರು: ತೆಲಂಗಾಣ (Telangana) ಸರ್ಕಾರದ ಒತ್ತುವರಿ ವಿರೋಧಿ ಕಾರ್ಯಪಡೆಯಾದ ಹೈಡ್ರಾ (ಹೈದರಾಬಾದ್ ವಿಪತ್ತು ಮತ್ತು ಆಸ್ತಿ ರಕ್ಷಣೆ ಸಂಸ್ಥೆ) ಹೆಸರಿನ ಹಿಂದೆ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನ ಸ್ಫೂರ್ತಿಯಿದೆ ಎನ್ನುವ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರ ವಿವಾದಾತ್ಮಕ ಹೇಳಿಕೆ ಇದೀಗ ದೇಶದಾತ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಶನಿವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಹೈಡ್ರಾ ಎಂಬ ಪದವು ಹಿಟ್ಲರ್‌ನ ನೆಚ್ಚಿನ ಪದವಾಗಿತ್ತು. ಹಿಟ್ಲರ್‌ನ ಆಪ್ತ ಪಡೆಯನ್ನು ಹೈಡ್ರಾ ಎಂದು ಕರೆಯಲಾಗುತ್ತಿತ್ತು. ಅವರು ಯಾರನ್ನು ಬೇಕಾದರೂ ಹತ್ಯೆ ಮಾಡುವ ಸಾಮರ್ಥ್ಯ ಹೊಂದಿದ್ದರು. ನಾವು ಕೂಡ ಹಿಟ್ಲರ್‌ನಿಂದಲೇ ಸ್ಫೂರ್ತಿ ಪಡೆದು ಈ ಸಂಸ್ಥೆಗೆ ಹೈಡ್ರಾ ಎಂದು ಹೆಸರಿಟ್ಟಿದ್ದೇವೆ ಎಂದಿದ್ದಾರೆ.
ರೇವಂತ್ ರೆಡ್ಡಿಯವರ ಈ ಹೇಳಿಕೆಯನ್ನ ಹಲವರು ತಳ್ಳಿಹಾಕಿದ್ದು, ಹಿಟ್ಲರ್‌ನ ಆಪ್ತ ವಲಯಕ್ಕೂ ಮತ್ತು ಹೈಡ್ರಾ ಪದಕ್ಕೂ ಸಂಬಂಧವಿತ್ತು ಎಂಬುದಕ್ಕೆ ಯಾವುದೇ ಐತಿಹಾಸಿಕ ಪುರಾವೆಗಳಿಲ್ಲ. ವಾಸ್ತವವಾಗಿ ಎರಡನೇ ಜಾಗತಿಕ ಯುದ್ಧದ ಸಮಯದಲ್ಲಿ ನಾಜಿ ಜರ್ಮನಿಯ ವಿರುದ್ಧ ಬ್ರಿಟಿಷ್ ರಾಯಲ್ ಏರ್‌ಫೋರ್ಸ್ ನಡೆಸಿದ ಬಾಂಬ್ ದಾಳಿಯ ಕಾರ್ಯಾಚರಣೆಗೆ ಹೈಡ್ರಾ ಎಂದು ಹೆಸರಿಡಲಾಗಿತ್ತು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಕಾಂಗ್ರೆಸ್ ಪಕ್ಷದ ಅಪಾಯಕಾರಿ ಹಿಟ್ಲರ್ ಮತ್ತು ತುರ್ತು ಪರಿಸ್ಥಿತಿಯ ಮನಸ್ಥಿತಿ ಮತ್ತೊಮ್ಮೆ ಸಾರ್ವಜನಿಕವಾಗಿ ಬಯಲಾಗಿದೆ. ರೇವಂತ್ ರೆಡ್ಡಿ ತಮಗೆ ಹಿಟ್ಲರ್ ಸ್ಫೂರ್ತಿ ಎಂದು ಬಹಿರಂಗವಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಇದು ಕಾಂಗ್ರೆಸ್‌ನ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯಿಂದ ಹಿಡಿದು ತೆಲಂಗಾಣದಲ್ಲಿ ಪತ್ರಕರ್ತರು ಮತ್ತು ವಿದ್ಯಾರ್ಥಿಗಳ ಮೇಲಿನ ರೇವಂತ್ ರೆಡ್ಡಿ ಅವರ ದಮನಕಾರಿ ನೀತಿಯವರೆಗೆ ಕಾಂಗ್ರೆಸ್‌ನ ಅದೇ ರಕ್ತ ಹರಿಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ವೈಭವ್ ಸೂರ್ಯವಂಶಿಯನ್ನ ಹಾಡಿ ಹೊಗಳಿದ ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದ
ಪ್ರಾದೇಶಿಕ ಅಸಮಾನತೆ, ತೆರಿಗೆ ಹಂಚಿಕೆ ಹಾಗೂ ದೇಶದ ಪ್ರಮುಖ ನಾಯಕತ್ವಗಳು ಉತ್ತರ ಭಾರತದ ಕೇಂದ್ರಿತವಾಗಿವೆ. ದಕ್ಷಿಣದ ರಾಜ್ಯಗಳ ಮೇಲೆ ಹೆಚ್ಚಿನ ತೆರಿಗೆಯ ಹೊರೆ ಹೇರಲಾಗುತ್ತಿದೆ. ದೇಶದ ರಾಷ್ಟ್ರಪತಿಗಳು ಮತ್ತು ಪ್ರಧಾನಮಂತ್ರಿಗಳು ಉತ್ತರ ಭಾರತದವರಾಗಿದ್ದಾರೆ. ನಾವು ದೆಹಲಿಗೆ ಸಲಾಂ ಹೊಡೆಯುತ್ತಾ ಮತ್ತು ತೆರಿಗೆ ಕಟ್ಟುತ್ತಾ ಎರಡನೇ ದರ್ಜೆಯ ನಾಗರಿಕರಾಗಿ ಬದುಕಲು ಬಯಸುವುದಿಲ್ಲ ಎಂದು ರೇವಂತ್ ರೆಡ್ಡಿ ಕಿಡಿಕಾರಿದ್ದರು.
“Hitler’s core team was called HYDRA. They could assassinate anyone.
I took inspiration from Hitler and named the organization HYDRAA.”
– #RevanthReddy about HYDRAA pic.twitter.com/nwkBvB4uCp
— Gulte (@GulteOfficial) June 6, 2026
ರೇವಂತ್ ರೆಡ್ಡಿಯವರ ಈ ಹೇಳಿಕೆಯನ್ನು ಖಂಡಿಸಿರುವ ಪೂನಾವಾಲ, ಕಾಂಗ್ರೆಸ್ ನಾಯಕನ ಈ ಹೇಳಿಕೆ ದೇಶವನ್ನು ಒಡೆಯುವ ಮತ್ತು ವಿಭಜನೆಗೊಳಿಸುವ ಮನಸ್ಥಿತಿ ಹೊಂದಿದೆ. ರೇವಂತ್ ರೆಡ್ಡಿ ಅವರಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾ ಅವರ ಪ್ರವೃತ್ತಿ ಕಾಣಿಸುತ್ತಿದೆ ಮತ್ತು ಅವರು ದೇಶವನ್ನು ಉತ್ತರ ಮತ್ತು ದಕ್ಷಿಣವೆಂದು ವಿಭಜನೆ ಮಾಡಲು ಯತ್ನಿಸುತ್ತಿದ್ದಾರೆ. ದೇಶದ ಪ್ರಸ್ತುತ ಪ್ರಧಾನಿ ಗುಜರಾತ್‌ನವರಾಗಿದ್ದಾರೆ. ದೇಶದ ಮೊದಲ ಬುಡಕಟ್ಟು ಸಮುದಾಯದ ಮಹಿಳಾ ರಾಷ್ಟ್ರಪತಿ ಒಡಿಶಾದವರಾಗಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ನೀಡಿದ್ದ ಪ್ರತ್ಯೇಕ ರಾಷ್ಟ್ರದ ಹೇಳಿಕೆಯ ಹಾದಿಯಲ್ಲೇ ಈಗ ರೇವಂತ್ ರೆಡ್ಡಿ ಕೂಡ ದೇಶ ವಿಭಜನೆಯ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ನವರು ದೇಶವನ್ನು ತುಂಡಾಗಿಸುವ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: 6,000 ಕೆಲಸಕ್ಕೆ ಸೇರಿದ್ದ ಇಂಜಿನಿಯರ್ ಬಳಿ 2 ಕೋಟಿ ಕ್ಯಾಶ್, 5 ಬಿಲ್ಡಿಂಗ್, 13 ಸೈಟು – ಬೆಚ್ಚಿಬಿದ್ದ ಅಧಿಕಾರಿಗಳು
