ರಾಜ್ಯದಲ್ಲಿ ಮುಂಗಾರು ಅಬ್ಬರ ಕೊಂಚ ಕಡಿಮೆಯಾಗಿದ್ದು, ಮಳೆಯ ಪ್ರಮಾಣದಲ್ಲೂ ಇಳಿಕೆಯಾಗಿದೆ. ಮುಂದಿನ ಒಂದು ವಾರ ರಾಜ್ಯದ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಬಹುತೇಕ ಕಡೆ ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಕರಾವಳಿ ಭಾಗಗಳ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 28-22
ಮಂಗಳೂರು: 29-26
ಶಿವಮೊಗ್ಗ: 27-23
ಬೆಳಗಾವಿ: 26-22
ಮೈಸೂರು: 30-22

ಮಂಡ್ಯ: 30-22
ಮಡಿಕೇರಿ: 24-21
ರಾಮನಗರ: 29-22
ಹಾಸನ: 27-21
ಚಾಮರಾಜನಗರ: 30-23
ಚಿಕ್ಕಬಳ್ಳಾಪುರ: 28-21

ಕೋಲಾರ: 29-22
ತುಮಕೂರು: 28-21
ಉಡುಪಿ: 29-25
ಕಾರವಾರ: 29-27
ಚಿಕ್ಕಮಗಳೂರು: 23-19

ದಾವಣಗೆರೆ: 29-23
ಹುಬ್ಬಳ್ಳಿ: 28-23
ಚಿತ್ರದುರ್ಗ: 28-22
ಹಾವೇರಿ: 28-23
ಬಳ್ಳಾರಿ: 32-24
ಗದಗ: 28-22
ಕೊಪ್ಪಳ: 31-23

ರಾಯಚೂರು: 32-25
ಯಾದಗಿರಿ: 32-25
ವಿಜಯಪುರ: 31-24
ಕಲಬುರಗಿ: 31-24
ಬಾಗಲಕೋಟೆ: 31-23

