ದಾವಣಗೆರೆ: ಕುಡಿದ ಮತ್ತಲ್ಲಿ ಮಗನೇ ತಾಯಿಯನ್ನು (Mother) ಗೋಡೆಗೆ ಗುದ್ದಿ ಹತ್ಯೆಗೈದ ಪ್ರಕರಣ ದಾವಣಗೆರೆ (Davanagere) ತಾಲೂಕಿನ ಆರನೇಕಲ್ಲು ಗ್ರಾಮದಲ್ಲಿ ನಡೆದಿದೆ.
ಪ್ರೇಮ (60) ಮಗನಿಂದ ಕೊಲೆಯಾದ (Murder) ದುರ್ದೈವಿ. ಆನಂದ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಕಳೆದ ರಾತ್ರಿ ಕುಡಿದ ಮತ್ತಿನಲ್ಲಿ ತಾಯಿಯನ್ನ ಗೋಡೆಗೆ ಗುದ್ದಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಇದನ್ನೂ ಓದಿ: ಪಟಾಕಿ ಕೊಡಿಸೋ ನೆಪದಲ್ಲಿ ಬಾಲಕನ ಕಿಡ್ನ್ಯಾಪ್ – ಮಗುವಿನ ಮುಖದ ಮೇಲೆ ಸಿಮೆಂಟ್ ಸ್ಲ್ಯಾಬ್ ಎತ್ತಾಕಿ ಕೊಲೆ
ಸ್ಥಳಕ್ಕೆ ಹದಡಿ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಎರಡು ಎಟಿಎಂನಲ್ಲಿ ಕಳ್ಳತನ – 14 ಲಕ್ಷ ದೋಚಿದ ಕಳ್ಳರು

