ಬೆಂಗಳೂರು: ಕೆಪಿಎಸ್‌ಸಿ(KPSC) ನೇಮಕಾತಿ ಅಕ್ರಮದಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ ಆರೋಪ ಎದುರಿಸುತ್ತಿರುವ ಐಎಎಸ್ ಅಧಿಕಾರಿ ಗ್ಯಾನೇಂದ್ರ(Gyanendra Kumar) ಅಕ್ರಮ ಸಂಪತ್ತು ಮತ್ತು ಶೋಕಿ ಜೀವನದ ಒಂದೊಂದೇ ಕರಾಳ ಮುಖಗಳು ಸಿಐಡಿ (CID) ತನಿಖೆಯಲ್ಲಿ ಬಯಲಾಗುತ್ತಿವೆ.
ಲೂಟಿ ಮಾಡಿದ ಹಣದಲ್ಲಿ ಗೆಳತಿಗೆ ಬರೋಬ್ಬರಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕೊಡಿಸಿರುವುದು ಹಾಗೂ ಆಪ್ತರಿಂದ ವಿದೇಶ ಪ್ರವಾಸದ ಆಫರ್ ಪಡೆದುಕೊಂಡಿರುವುದು ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಹಿಂದೆ ಜುಲೈ ತಿಂಗಳಲ್ಲಿ ಬೆಂಗಳೂರಿನ ಪ್ರತಿಷ್ಠಿತ ಜ್ಯುವೆಲ್ಲರಿಯೊಂದರಲ್ಲಿ ಖರೀದಿಸಿದ್ದ 26 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು(Gold) ಸಿಐಡಿ ಅಧಿಕಾರಿಗಳು ಈಗಾಗಲೇ ಜಪ್ತಿ ಮಾಡಿದ್ದರು.. ಈಗ ಓಂ ಲಕ್ಷ್ಮಿ ಕೋ-ಆಪರೇಟಿವ್ ಸೊಸೈಟಿಯ ಅನುಮಾನಾಸ್ಪದ ಹಣ ವರ್ಗಾವಣೆ ಪರಿಶೀಲನೆ ನಡೆಸುವಾಗ, ಅದೇ ಗೆಳತಿಗೆ ಮತ್ತೆ 30 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಖರೀದಿಸಿಕೊಟ್ಟಿರುವುದು ಬೆಳಕಿಗೆ ಬಂದಿದೆ.
ಈ ಅಕ್ರಮ ಹಣದ ವಹಿವಾಟನ್ನು ಖಚಿತಪಡಿಸಿಕೊಂಡಿರುವ ಸಿಐಡಿ, ಆ ಚಿನ್ನಾಭರಣಗಳನ್ನು ತಕ್ಷಣವೇ ತನಿಖಾ ಸಂಸ್ಥೆಗೆ ಮರಳಿಸುವಂತೆ ಗೆಳತಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ರಾಜ್ಯದ ಸಿನಿಪ್ರಿಯರಿಗೆ ಬಿಗ್ ಶಾಕ್ – ಇನ್ಮುಂದೆ ಫಿಲ್ಮ್ ಟಿಕೆಟ್ ಮೇಲೆ ಬೀಳಲಿದೆ 2% ಸೆಸ್


