ಮಂಗಳೂರು: ಮೊದಲಿನಿಂದಲೂ ದೇವರಲ್ಲಿ ಅಪಾರ ಭಕ್ತಿ, ನಂಬಿಕೆ ಹೊಂದಿರುವ ಸಿಎಂ ಡಿ.ಕೆ ಶಿವಕುಮಾರ್ (DK Shivakumar) ಅವರು ರಾಜ್ಯದ ಒಂದಿಲ್ಲೊಂದು ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಕುಟುಂಬ ಸಮೇತರಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸಿ, ದೇವರಲ್ಲಿ ಪ್ರಾರ್ಥಿಸಿ ಭಕ್ತಿ ಭಾವ ಮೆರೆಯುತ್ತಾರೆ.
ಶಂಭೋ ಗಿರೀಶ ಸುರಪೂಜಿತ ಕಾಮವೈರಿನ್
ಗೌರೀಶ ಶಂಕರ ಮಹೇಶ್ವರ ವಿಶ್ವಹೇತೋಶತಮಾನಗಳಷ್ಟು ಪುರಾತನವಾದ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ತೆರಳಿ, ದೇವರ ದರ್ಶನ ಪಡೆದು ಪುನೀತನಾದೆ. ನಾಡಿನ ಸಮಸ್ತ ಜನರ ಒಳಿತಿಗಾಗಿ, ಮಳೆ- ಬೆಳೆ, ಸಮೃದ್ಧಿಗಾಗಿ ಈ ಸಂದರ್ಭದಲ್ಲಿ ಪ್ರಾರ್ಥಿಸಲಾಯಿತು. pic.twitter.com/qTmlbXcGiN
— DK Shivakumar (@DKShivakumar) September 18, 2026
ಇಂದು ಸಚಿವ ಸಂಪುಟ ಸಭೆ ಹಿನ್ನೆಲೆ ಮಂಗಳೂರಿಗೆ ಆಗಮಿಸಿರುವ ಸಿಎಂ ಡಿಕೆಶಿ, ಶತಮಾನಗಳಷ್ಟು ಪುರಾತನವಾದ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ (Kadri Shree Manjunatha Temple) ಭೇಟಿ ನೀಡಿದ್ದಾರೆ. ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ. ನಾಡಿನ ಸಮಸ್ತ ಜನರ ಒಳಿತಿಗಾಗಿ, ಮಳೆ- ಬೆಳೆ, ಸಮೃದ್ಧಿಗಾಗಿ ಈ ಸಂದರ್ಭದಲ್ಲಿ ಪ್ರಾರ್ಥಿಸಿದ್ದಾರೆ.
ಹೌದು. ಕದ್ರಿ ಮಂಜುನಾಥನ ಸನ್ನಿಧಿಗೆ ತೆರಳಿದ ಸಿಎಂ, ಕದ್ರಿ ದೇವಸ್ಥಾನದ ಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ದುರ್ಗಾಪರಮೇಶ್ವರಿ ಗುಡಿಯಲ್ಲೂ ಪೂಜೆ ಸಲ್ಲಿಸಿದ್ದಾರೆ. ನಂತರ ಕದ್ರಿ ಮಂಜುನಾಥನ ದರ್ಶನ ಪಡೆದು ಸಚಿವ ಸಂಪುಟ ಸಭೆ ನಿರ್ವಿಘ್ಞವಾಗಿ ನಡೆಯುವಂತೆ ಪ್ರಾರ್ಥಿಸಿದ್ದಾರೆ. ಈ ಫೋಟೋಗಳನ್ನ ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.
ತಣ್ಣೀರುಬಾವಿ ಬೀಚ್ ಔತಣ ಕೂಟದಲ್ಲಿ ಸಿಎಂ
ಕದ್ರಿ ಸನ್ನಿಧಾನಕ್ಕೆ ಭೇಟಿ ನೀಡುವ ಮುಮ್ಮ ಸಿಎಂ ಡಿಕೆಶಿ ತಣ್ಣೀರುಬಾವಿ ಬೀಚ್ ಔತಣ ಕೂಟದಲ್ಲಿ ಭಾಗಿಯಾದರು. ತುಳುನಾಡಿನ ದೈವಾರಾಧನೆ ಹಾಗೂ ಕಂಬಳದ ಪರಿಕರಗಳ ಪ್ರದರ್ಶನ ವೀಕ್ಷಿಸಿ ಸಂತಸಪಟ್ಟರು. ಕೊಂಬು ಊದಿ, ದೈವದ ಗಗ್ಗರ ಕೈಯಲ್ಲಿ ಹಿಡಿದು ಸದ್ದು ಕೇಳಿ ಸಂತಸಪಟ್ಟರು. ಕಂಬಳದ ನೇಗಿಲು ಹಾಗೂ ಪಾರಂಪರಿಕ ವಸ್ತುಗಳನ್ನ ವೀಕ್ಷಣೆ ಮಾಡಿದರು. ಸಮುದ್ರದ ಸೌಂದರ್ಯ ವೀಕ್ಷಿಸುತ್ತಾ ಔತಣ ಸವಿದರು.

