ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ (Parappana Agrahara) ಕೈದಿಗಳ ಸನ್ಮಾರ್ಗ ಮತ್ತು ಪುನರ್ವಸತಿಯ ಉದ್ದೇಶದಿಂದ ಅತ್ಯಂತ ಮಹತ್ವದ ಹಾಗೂ (Bengaluru) ವಿನೂತನ ಯೋಜನೆಯೊಂದನ್ನು ಜಾರಿಗೆ ತರಲಾಗಿದೆ.
ಕಾರಾಗೃಹದ ಸಜಾ ಬಂಧಿಗಳ ಸ್ವಾವಲಂಬನೆಗಾಗಿ ಆರಂಭಿಸಲಾಗಿರುವ ‘ನವ ಸಂಕಲ್ಪ ಬೇಕರಿ’ಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ಕುಮಾರ್ ಅವರು ಅಧಿಕೃತವಾಗಿ ಉದ್ಘಾಟಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬೇಕರಿ ಉತ್ಪನ್ನಗಳನ್ನು ಸಾರ್ವಜನಿಕರಿಗೆ ತಲುಪಿಸುವ ‘ನವ ಸಂಕಲ್ಪ ಬೇಕರಿ ಆನ್ ವೀಲ್ಸ್’ ಎಂಬ ವಿಶೇಷ ಸಂಚಾರಿ ವಾಹನಕ್ಕೂ ಚಾಲನೆ ನೀಡಲಾಯಿತು.

ಕೈದಿಗಳಿಗೆ ವೃತ್ತಿಪರ ತರಬೇತಿ ಮತ್ತು ಪ್ರಮಾಣ ಪತ್ರ ವಿತರಣೆ
ಈ ವಿನೂತನ ಯೋಜನೆಯಡಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸಜಾ ಬಂಧಿಗಳಿಗೆ ಉತ್ತಮ ಗುಣಮಟ್ಟದ ಬೇಕರಿ ಉತ್ಪನ್ನಗಳನ್ನು ತಯಾರಿಸುವ ಕುರಿತು ವೃತ್ತಿಪರ ತರಬೇತಿ ನೀಡಲಾಗುತ್ತಿದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಂಧಿಗಳಿಗೆ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಇದನ್ನೂಓದಿ: ಗದಗ | ಗಣೇಶನಿಗೆ ʻನಾನ್-ವೆಜ್ʼ ನೈವೇದ್ಯ – ಸಾವಜಿ ಕುಟುಂಬದ ವಿಶೇಷ ಪದ್ದತಿ
ನಗರದ ಪ್ರಮುಖ ಸ್ಥಳಗಳಲ್ಲಿ ಮಾರಾಟ:
‘ನವ ಸಂಕಲ್ಪ ಬೇಕರಿ ಆನ್ ವೀಲ್ಸ್’ ಸಂಚಾರಿ ವಾಹನಗಳ ಮೂಲಕ ಬೆಂಗಳೂರಿನ ಪ್ರಮುಖ ನ್ಯಾಯಾಲಯಗಳ ಆವರಣ ಹಾಗೂ ಸಾರ್ವಜನಿಕರು ಹೆಚ್ಚಾಗಿ ಓಡಾಡುವ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಈ ಬೇಕರಿ ಉತ್ಪನ್ನಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಗ್ರಾಹಕರು ಇಲ್ಲಿ ನೇರವಾಗಿ ಕೈದಿಗಳು ತಯಾರಿಸಿದ ಶುಚಿ-ರುಚಿಯಾದ ಬೇಕರಿ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.

ಸ್ವಾವಲಂಬಿ ಜೀವನಕ್ಕೆ ದಾರಿದೀಪ
ಈ ಯೋಜನೆಯು ಜೈಲಿನಿಂದ ಬಿಡುಗಡೆಯಾದ ನಂತರ ಬಂಧಿಗಳು ಯಾವುದೇ ಅಪರಾಧ ಮುಕ್ತರಾಗಿ, ಸಮಾಜದ ಮುಖ್ಯವಾಹಿನಿಗೆ ಮರಳಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಅತ್ಯಂತ ನೆರವಾಗಲಿದೆ. ಇದರ ಜೊತೆಗೆ ಬೇಕರಿ ಉತ್ಪನ್ನಗಳ ಮಾರಾಟದಿಂದ ಬರುವ ಆದಾಯವು ಸರ್ಕಾರದ ಖಜಾನೆಗೆ ಆಸರೆಯಾಗಲಿದ್ದು, ಬಂಧಿಗಳ ಪುನರ್ವಸತಿ ಇತಿಹಾಸದಲ್ಲೇ ಈ ‘ನವ ಸಂಕಲ್ಪ ಬೇಕರಿ’ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. ಇದನ್ನೂಓದಿ: ರೆಸಾರ್ಟ್ನಲ್ಲಿ ಬಾರ್ಬಿಕ್ಯೂ ಮಾಡುವಾಗ ಯಡವಟ್ಟು – ಹನಿಮೂನ್ಗೆ ಬಂದಿದ್ದ ಮಹಿಳೆಗೆ ಹೊತ್ತಿಕೊಂಡ ಬೆಂಕಿ

