Friday, 22nd November 2019

Recent News

ಬ್ರಹ್ಮಚಾರಿ ಸತೀಶ ವಸಿ ಹಿಡ್ಕ ವಸಿ ತಡ್ಕ ಅಂದಿದ್ದೇಕೆ?

ಬೆಂಗಳೂರು: ಕನ್ನಡ ಚಿತ್ರರಂಗದ ಅದ್ಧೂರಿ ನಿರ್ಮಾಪಕರೆಂದೇ ಹೆಸರಾಗಿರುವವರು ಉದಯ್ ಮೆಹ್ತಾ. ಅವರು ನಿರ್ಮಾಣ ಮಾಡುತ್ತಿರುವ ಬ್ರಹ್ಮಚಾರಿ ಚಿತ್ರಕ್ಕೀಗ ವೇಗವಾಗಿ ಚಿತ್ರೀಕರಣ ನಡೆಯುತ್ತಿದೆ. ಒಂದರ ಹಿಂದೊಂದರಂತೆ ಹಿಟ್ ಚಿತ್ರಗಳ ರೂವಾರಿಯಾಗಿರೋ ನೀನಾಸಂ ಸತೀಶ್ ನಟಿಸುತ್ತಿರೋ ಮಹತ್ವಾಕಾಂಕ್ಷೆಯ ಚಿತ್ರ ಬ್ರಹ್ಮಚಾರಿ. ಚಂದ್ರಮೋಹನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ಮಜಬೂತಾಗಿರೋ ಹಾಡೊಂದರ ಚಿತ್ರೀಕರಣವೀಗ ಮಜವಾಗಿಯೇ ನಡೆಯುತ್ತಿದೆ.

ಹಿಡ್ಕ ಹಿಡ್ಕ ಒಸಿ ತಡ್ಕ ತಡ್ಕ ಎಂಬ ಹಾಡಿನ ಚಿತ್ರೀಕರಣವೀಗ ನಡೆಯುತ್ತಿದೆ. ಈ ಹಾಡನ್ನು ತಿಂಗಳ ಹಿಂದೆಯೇ ನವೀನ್ ಸಜ್ಜು ಹಾಡಿದ್ದರು. ತನ್ನ ವಿಶಿಷ್ಟವಾದ ಸಾಹಿತ್ಯದ ಕಾರಣದಿಂದಲೇ ಬ್ರಹ್ಮಚಾರಿಯ ಈ ಹಾಡಿನ ಬಗ್ಗೆ ಆವಾಗಲೇ ಒಂದಷ್ಟು ಚರ್ಚೆಗಳಾಗಿದ್ದವು. ಇದೀಗ ಅದರ ಚಿತ್ರೀಕರಣ ನಡೆಯುತ್ತಿದೆ. ಈ ಹಿಂದೆಯೂ ನೀನಾಸಂ ಸತೀಶ್ ಅಭಿನಯದ ಹಲವಾರು ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದ ಮುರಳಿ ಈ ಹಾಡಿಗೂ ನೀನಾಸಂ ಸತೀಶ್ ಅವರನ್ನು ಕುಣಿಸಿದ್ದಾರೆ.

ಈ ಹಾಡು ಬ್ರಹ್ಮಚಾರಿ ಚಿತ್ರದ ಹೈಲೈಟ್‍ಗಳಲ್ಲೊಂದಾಗಿ ಮೂಡಿ ಬರಲಿದೆಯಂತೆ. ಬಾಂಬೆ ಮಿಠಾಯಿ ಮತ್ತು ಡಬಲ್ ಎಂಜಿನ್ ಎಂಬೆರಡು ಹಾಸ್ಯ ಪ್ರಧಾನ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಚಂದ್ರಮೋಹನ್ ಬ್ರಹ್ಮಚಾರಿಯನ್ನೂ ಕೂಡಾ ಅದೇ ಜಾಡಿನಲ್ಲಿ ರೂಪಿಸಿದ್ದಾರೆ. ಚಂಬಲ್ ಎಂಬ ಚಿತ್ರದಲ್ಲಿ ಘನ ಗಂಭೀರವಾಗಿ ನಟಿಸಿದ್ದ ನೀನಾಸಂ ಸತೀಶ್ ಈ ಮೂಲಕ ಮತ್ತು ಹಾಸ್ಯದ ಗುಂಗಿಗೆ ಜಾರಿದ್ದಾರೆ. ಈವರೆಗೂ ಹಲವಾರು ಹಿಟ್ ಸಿನಿಮಾ ನಿರ್ಮಾಣ ಮಾಡಿರೋ ಉದಯ್ ಮೆಹ್ತಾ ಕಥೆಯ ಸೊಗಸು ಮತ್ತು ನೀನಾಸಂ ಸತೀಶ್ ಅಭಿನಯ ಚಾತುರ್ಯದ ಬಗೆಗಿನ ಪ್ರೀತಿಯಿಂದಲೇ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

Leave a Reply

Your email address will not be published. Required fields are marked *