ಟಾಲಿವುಡ್ ಚಿತ್ರರಂಗದ ಯುವ ಪ್ರತಿಭಾನ್ವಿತ ನಟ ನಿಖಿಲ್ ಸಿದ್ಧಾರ್ಥ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಕಾರ್ತಿಕೇಯ-2 ಚಿತ್ರದ ಟೀಸರ್ ರಿಲೀಸ್ ಆಗಿದೆ. ಎಪಿಕ್ ಅಡ್ವೆಂಚರ್ಸ್ ಜರ್ನಿಯ ಕಥಾನಕದ ಈ ಚಿತ್ರದಲ್ಲಿ ನಿಖಿಲ್ ಕಾರ್ತಿಕೇಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತೆಲುಗು, ತಮಿಳು, ಹಿಂದಿ, ಮಲಯಾಳಂ ಜೊತೆಗೆ ಕನ್ನಡದಲ್ಲಿಯೂ ಟೀಸರ್ ಬಿಡುಗಡೆಯಾಗಿದೆ.
Advertisement
ಅನುಪಮ ಪರಮೇಶ್ವರನ್, ಅನುಪಮ್ ಖೇರ್, ಶ್ರೀನಿವಾಸ್ ರೆಡ್ಡಿ, ಹರ್ಷ, ಆದಿತ್ಯ ಮೆನನ್ ಸೇರಿದಂತೆ ಹಲವರು ನಟಿಸಿದ್ದಾರೆ. ಕಾರ್ತಿಕೇಯ 2 ಚಂದೂ ಮೊಂಡೇಟಿ ನಿರ್ದೇಶಿಸಿದ್ದು, ಪೀಪಲ್ ಮೀಡಿಯಾ ಫ್ಯಾಕ್ಟರಿ ಮತ್ತು ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಬ್ಯಾನರ್ ನಡಿ ಸಿನಿಮಾ ನಿರ್ಮಿಸಲಾಗಿದೆ. ಟೀಸರ್ ಮೂಲಕ ಸಖತ್ ಸದ್ದು ಮಾಡ್ತಿರುವ ಕಾರ್ತಿಕೇಯ-2 ಸಿನಿಮಾ ಆಗಸ್ಟ್ 12ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯ ಚಿತ್ರತೆರೆಗೆ ಬರ್ತಿದೆ. ಇದನ್ನೂ ಓದಿ:ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ
Advertisement
Advertisement
ಕಾಲ ಭೈರವ ಸಂಗೀತವಿರುವ ಕಾರ್ತಿಕೇಯ-2 ಸಿನಿಮಾ ಇದೇ ತಿಂಗಳ 22ಕ್ಕೆ ವರ್ಲ್ಡ್ ವೈಡ್ ರಿಲೀಸ್ ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ ಇದೇ ದಿನ ನಾಗ ಚೈತನ್ಯ ನಟನೆಯ ಥ್ಯಾಂಕೂ ಸಿನಿಮಾ ಬರ್ತಿರುವುದರಿಂದ ಚಿತ್ರತಂಡ ಸಿನಿಮಾ ಪೋಸ್ಟ್ ಪೋನ್ ಮಾಡಿದೆ. ಈ ಬಗ್ಗೆ ಕೆಲ ದಿನಗಳ ಹಿಂದಷ್ಟೇ ನಿಖಿಲ್ ಸಿದ್ಧಾರ್ಥ್ ಮಾಹಿತಿ ನೀಡಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದರು.