– NRI ಗಳ ನೆರವಿಗೆ ಪ್ರತ್ಯೇಕ ಸಚಿವಾಲಯ
– `SIR’ ಮೇಲೆ ನಿಗಾಕ್ಕೆ ಸಿಎಂ ಸೂಚನೆ
ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಪೊಲೀಸ್ ಇಲಾಖೆ ಸೇರಿ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ಮಾಡಿ ಖಡಕ್ ಸಂದೇಶ ರವಾನೆ ಮಾಡಿದ್ದಾರೆ.
ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ಕೊಡ್ತೀವಿ. ನನ್ನ ಕಚೇರಿ, ಶಾಸಕರು, ಮಂತ್ರಿಗಳು ಯಾರದ್ದೇ ಒತ್ತಡಕ್ಕೆ ಮಣಿಯದೇ ಕಾನೂನು ಅಡಿಯಲ್ಲಿ ಕೆಲಸ ಮಾಡಿ. ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿ. ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು. ನಮ್ಮ ಸರ್ಕಾರ ಜಾತಿ, ಧರ್ಮ, ಪ್ರೆಷರ್‌ಗೆ ಬಗ್ಗಲ್ಲ. ಪಾರದರ್ಶಕತೆ ನಮ್ಮ ಸರ್ಕಾರದ ಧ್ಯೇಯವಾಕ್ಯ. ಜನರ ಸಮಸ್ಯೆ ಬಗೆಹರಿಸುತ್ತಾರೆ. ಧನಾತ್ಮಕ ಅಂಶ ಇಟ್ಟುಕೊಂಡು ಕೆಲಸ ಮಾಡಬೇಕು ಅಂತ ಸೂಚನೆ ನೀಡಿದ್ದಾರೆ. ಇದೇ ವೇಳೆ, ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳ ಪರಿಷ್ಕರಣೆ ಸುಳಿವು ಕೊಟ್ಟಿದ್ದಾರೆ.

ಹಾಗಾದ್ರೆ ಸಿಎಂ ಮೊದಲ ಸಭೆಯ ಹೈಲೈಟ್ಸ್ ಮತ್ತು ಸೂಚನೆಗಳೇನು ಅಂತ ನೋಡೋದಾದ್ರೆ.
ಸಿಎಂ ಮೊದಲ ಸಭೆಯ ಹೈಲೈಟ್ಸ್?
> 15 ದಿನಗಳಲ್ಲಿ ಇಲಾಖಾವಾರು ಕಾರ್ಯ ಯೋಜನೆ ಕೊಡಬೇಕು.
> ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಾಲೂಕಿಗೆ ಹೋಗಿ ರಿವ್ಯೂ ಮಾಡಬೇಕು.
> SIR ವಿಚಾರದಲ್ಲಿ ಬೇರೆ ರಾಜ್ಯದಲ್ಲಿ ಆದಂತೆ ಲೋಪಗಳು ನಮ್ಮಲ್ಲಿ ಆಗಬಾರದು. ಮತದಾರರಿಗೆ ಜಾಗೃತಿ ಮೂಡಿಸಿ. SIR ವಿಚಾರದಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪನೆ ಮಾಡಬೇಕು.
> ಸಾರ್ವಜನಿಕರ ಕುಂದುಕೊರತೆ ಕೇಳಲು ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು, ಇದಕ್ಕೆ ಪ್ರತ್ಯೇಕ ಮಂತ್ರಿ ನೇಮಕ.
> ಹೊಸ ಸರ್ಕಾರ ಘೋಷಣೆ ಮಾಡಿದ 6 ಯೋಜನೆ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಬೇಕು.
> CSR ನಿಧಿ ಸಮರ್ಪಕ ಬಳಕೆಗೆ ನೀತಿ ಬಿಡುಗಡೆ. ಶೀಘ್ರವೇ ಮಾರ್ಗಸೂಚಿ ಪ್ರಕಟ. ಸಿಎಸ್‌ಆರ್ ಬಳಕೆ ಉತ್ತಮ ರೀತಿಯಲ್ಲಿ ಆಗಬೇಕು. ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೆ ಇದರ ಬಳಕೆ ಆಗಬೇಕು.
> NRI ಗಳಿಗೆ ಸಹಾಯ ಮಾಡಲು ಪ್ರತ್ಯೇಕ ಸಚಿವಾಲಯ ಸ್ಥಾಪನೆ.
> ರೌಡಿಗಳನ್ನ ಮಟ್ಟ ಹಾಕಲು ತಾಲೂಕಿಗೆ ಸ್ಕ್ವಾಡ್ ನಿರ್ಮಾಣ ಮಾಡಬೇಕು, ಸ್ಪೆಷಲ್ ಫೋರ್ಸ್ ರಚನೆ ಮಾಡಬೇಕು.
> ದೆಹಲಿ ಕರ್ನಾಟಕ ಭವನದ ವ್ಯವಸ್ಥೆ ಸರಿ ಮಾಡಲು ಶೀಘ್ರವೇ ಸಭೆ ಮಾಡಿ ಕ್ರಮ.
> ಗ್ಯಾರಂಟಿಗಳ ಅಕ್ರಮ ತಡೆಗೆ ಫಲಾನುಭವಿಗಳ ಸಂಪೂರ್ಣ ಮಾಹಿತಿ ಸಂಗ್ರಹಕ್ಕೆ ಸೂಚನೆ ನೀಡಿದ್ದಾರೆ.













