ಬೆಂಗಳೂರು: ಚಲಿಸುತ್ತಿದ್ದ ರೈಲು (Moving Train) ಹತ್ತಲು ಹೋಗಿ ಕಾಲು ಜಾರಿ ರೈಲಿನಡಿ ಸಿಲುಕಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ಜ್ಞಾನಭಾರತಿ ನಿಲ್ದಾಣದಲ್ಲಿ ನಡೆದಿದೆ.
ಮೆಜೆಸ್ಟಿಕ್‌ನಿಂದ (Majestic) ಮೈಸೂರು (Mysuru) ಕಡೆ ತೆರಳುತ್ತಿದ್ದ ಬೆಂಗಳೂರು – ಮೈಸೂರು ಪ್ಯಾಸೆಂಜರ್ ರೈಲಿನಲ್ಲಿ ಘಟನೆ ನಡೆದಿದೆ. ಮೃತ ವ್ಯಕ್ತಿ ರಾಮನಗರದ ಕೂಟಗಲ್ ಗ್ರಾಮದ ನಿವಾಸಿ ಹರೀಶ್ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನೂತನ ಸಚಿವರಿಗೆ ಖಾತೆ ಹಂಚಿಕೆ ಫೈನಲ್ ಆಗಿದೆ: ಸಿಎಂ ಡಿಕೆಶಿ
ನಿಧಾನಕ್ಕೆ ಚಲಿಸುತ್ತಿದ್ದ ವೇಳೆ ರೈಲು ಹತ್ತಲು ವ್ಯಕ್ತಿ ಯತ್ನಿಸಿದ್ದಾನೆ. ಈ ವೇಳೆ ಕಾಲು ಜಾರಿ ರೈಲಿನ ಚಕ್ರದಡಿ ಬಿದ್ದಿದ್ದಾನೆ. ವ್ಯಕ್ತಿ ಬಿದ್ದಿರೋದನ್ನ ಗಮನಿಸಿದ ಪ್ರಯಾಣಿಕರು ರೈಲಿನ ಚೈನ್ ಎಳೆದು ರೈಲು ನಿಲ್ಲಿಸಿದ್ದಾರೆ. ಇದನ್ನೂ ಓದಿ: ಕೇರಳದ ಪಾಲಕ್ಕಾಡ್‌ನಲ್ಲಿ `ಇಸ್ಲಾಮಿಕ್ ಫ್ರೆಂಡ್ಲಿ ಜಿಮ್’ – ಜಿಮ್‌ನಲ್ಲಿ ಸಂಗೀತ ನಿಷೇಧ













