– ಇಬ್ಬರಿಗೂ ಪ್ರತ್ಯೇಕ ಸಮಯ – ಜಾಲತಾಣದಲ್ಲಿ ಆಕ್ರೋಶ
ತಿರುವನಂತಪುರಂ: ಕೇರಳಂನ ಪಾಲಕ್ಕಾಡ್ (Kerala’s Palakkad) ಜಿಲ್ಲೆಯ ಫಿಟ್ನೆಸ್ ಸೆಂಟರ್‌ನ ಹೆಸರೊಂದು ಈಗ ದೊಡ್ಡ ವಿವಾದ ಸೃಷ್ಟಿಸಿದೆ.
ಪುತ್ತುನಗರದಲ್ಲಿರುವ ಜಿಮ್‌ವೊಂದಕ್ಕೆ `ಇಸ್ಲಾಮಿಕ್ ಫ್ರೆಂಡ್ಲಿ ಜಿಮ್’ (Islam Friendly Gym) ಎಂದು ಹೆಸರಿಡಲಾಗಿದೆ. ಜಿಮ್ ತನ್ನ ಪ್ರಮೋಷನಲ್ ವಿಡಿಯೋವನ್ನ ರಿಲೀಸ್ ಮಾಡಿದ ಬೆನ್ನಲ್ಲಿಯೇ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಬಿಹಾರದ ಆಸ್ಪತ್ರೆಯೊಂದರ ICUನಲ್ಲಿ ಬೆಂಕಿ ಅವಘಡ – ಐವರು ದುರ್ಮರಣ

ಜಿಮ್‌ನಲ್ಲಿ ಜೋರಾದ ಸಂಗೀತ ಇರಲ್ಲ, ಮಹಿಳೆಯರು ಹಾಗೂ ಪುರುಷರು ಒಟ್ಟಾಗಿ ಜಿಮ್ ಮಾಡುವಂತಿಲ್ಲ, ಇಬ್ಬರಿಗೂ ಪ್ರತ್ಯೇಕ ಸಮಯ, ಮಹಿಳೆಯರು ಹಿಜಬ್ ಧರಿಸಿ ಜಿಮ್ ಮಾಡುತ್ತಾರೆ. ನಿಮಗೆ ಒಪ್ಪಿಗೆ ಆದ್ದಲ್ಲಿ ಜಿಮ್‌ಗೆ ಸೇರಬಹುದು ಅಂತ ಜಿಮ್ ಮಾಲೀಕ ನವಾಜ್ ಮುತ್ತು ಟ್ವೀಟ್ ಮಾಡಿದ್ದರು.
ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಈ ಜಿಮ್‌ಗೆ ಟೀಕೆ ವ್ಯಕ್ತವಾಗಿದ್ದು, ಇದಕ್ಕೆ ಈ ರೀತಿಯ ಹೆಸರು ಇಡುವ ಅಗತ್ಯ ಇತ್ತಾ ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕೇಂದ್ರ ಗೃಹ ಸಚಿವಾಲಯದ ವಿರುದ್ಧ ಪ್ರಚೋದನಕಾರಿ ಹೇಳಿಕೆ – ದೀದಿ ವಿರುದ್ಧ ಎಫ್‌ಐಆರ್













