ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಪಂಥಾಹ್ವಾನವನ್ನ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸ್ವೀಕಾರ ಮಾಡಿದ್ದಾರೆ. ದೇವೇಗೌಡ ಕುಟುಂಬ-ಡಿಕೆಶಿ ಕುಟುಂಬ ಯಾರ ಆಸ್ತಿ ಎಷ್ಟು ಇದೆ ಬಹಿರಂಗ ಚರ್ಚೆ ಆಗಲಿ. ಚರ್ಚೆಗೆ ದೇವೇಗೌಡರ ಕುಟುಂಬ ಸಿದ್ದ ಅಂತ ಡಿ.ಕೆ.ಶಿವಕುಮಾರ್ ಸವಾಲ್ ಹಾಕಿದ್ದಾರೆ.
ದೇವೇಗೌಡರ ಕುಟುಂಬವೇ ರಿಯಲ್ ಎಸ್ಟೇಟ್ ಮಾಡ್ತಿದೆ. ಚರ್ಚೆಗೆ ಬರಲಿ ಎಂಬ ಡಿ.ಕೆ.ಶಿವಕುಮಾರ್ ಆಹ್ವಾನಕ್ಕೆ ಜೆಪಿ ಭವನದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡ ಕುಟುಂಬ ಎಲ್ಲಿಲ್ಲಿ ಜಮೀನು ಹೊಂದಿದ್ದೇವೆ ತೆಗೆಸಲಿ. ಸರ್ಕಾರ ಅವರದ್ದೇ ಇದೆ. ಕುಮಾರಸ್ವಾಮಿ ಸಿನಿಮಾ ಹಂಚಿಕೆದಾರಾಗಿದ್ದಾಗ ಬಂದ ದುಡ್ಡಲ್ಲಿ ತಗೊಂಡ ಕೇತಗಾನಹಳ್ಳಿ ಜಮೀನಿಗೆ SIT ಮಾಡಿ ಯಾವ ಯಾವ ತನಿಖೆ ಮಾಡಿ ಎಲ್ಲವೂ ಆಗಿದೆ. SITಯನ್ನ ರಾಜಕೀಯ ದ್ವೇಷಕ್ಕೆ ಬೇರೆ ಬೇರೆ ಅವರ ಮೇಲೆ ಬಳಕೆ ಮಾಡಿಕೊಳ್ತಾ ಇದ್ದಾರೆ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಟೌನ್‌ಶಿಪ್ ಮಾಡೋಕೆ ಮುಂದಾಗಿದ್ದರು. ರೈತರು ವಿರೋಧ ಮಾಡಿದಾಗ ಅದನ್ನು ರದ್ದು ಮಾಡಿದ್ರು. ಕುಮಾರಸ್ವಾಮಿ ರಿಯಲ್ ಎಸ್ಟೇಟ್ ಅಂತ ಹೇಳ್ತಾ ಇದ್ದಾರೆ. ರಿಯಲ್ ಎಸ್ಟೇಟ್ ಮಾಫಿಯಾ, ದಂಧೆಕೋರರು ಮುಂದೊಂದು ದಿನ ಭೂಮಿ ವಶಪಡಿಸಿಕೊಂಡು ಮುಂದೆ ಜಾಸ್ತಿ ಬೆಲೆ ಬರುತ್ತೆ ಅಂತ ಬೆಂಗಳೂರು ಉಸ್ತುವಾರಿ ಸಚಿವರು, ಅವರ ಪಟಾಲಂಗಳು ನಡೆಸುತ್ತಿದ್ದಾರೆ. ಬೇನಾಮಿ ಹೆಸರಿನಲ್ಲಿ ಬೇಲಿ ಹಾಕಿಕೊಂಡು ಕೂತಿದ್ದಾರೆ. ಇದು ಕುಮಾರಸ್ವಾಮಿ ಕುಟುಂಬಕ್ಕೆ ಅನ್ವಯ ಆಗೊಲ್ಲ. ಆ ರೀತಿ ಒಂದು ಜಮೀನು ಇದ್ದರೆ ತೋರಿಸಲಿ. ತಲೆ ಬಾಗ್ತೀವಿ ಅಂತ ತಿಳಿಸಿದರು. ಇದನ್ನೂ ಓದಿ: ಜನರ ಹಣದಲ್ಲಿ ಮೋಜು-ಮಸ್ತಿ ಮಾಡಲು ಕಾಂಗ್ರೆಸ್‌ನಿಂದ ಸಮಾವೇಶ: ನಿಖಿಲ್ ಕುಮಾರಸ್ವಾಮಿ
ಕುಮಾರಸ್ವಾಮಿ ಕುಟುಂಬ ಇರೋದು ನಾನು ಒಬ್ಬನೆ. ಎಲ್ಲಿ ಎಲ್ಲಿ ಜಮೀನು ಇದೆ ಬಂದು ಚರ್ಚೆ ಮಾಡಲಿ. ನಮ್ಮದೇನಿದೆ ಅವರದ್ದೇನಿದೆ ಬಹಿರಂಗವಾಗಿ ಚರ್ಚೆ ಮಾಡೋಣ. ಡಿಕೆಶಿವಕುಮಾರ್ ಆಹ್ವಾನಕ್ಕೆ ದೇವೇಗೌಡ ಕುಟುಂಬ ಸಿದ್ದವಿದೆ. ನಾವೇನು ಕಣ್ಣು ತಪ್ಪಿಸಿ ಓಡಿ ಹೋಗೋದಿಲ್ಲ. ಬರಲಿ ಕೂತು ಚರ್ಚೆ ಮಾಡೋಣ. ಸಾರ್ವಜನಿಕವಾಗಿಯೇ ಚರ್ಚೆ ಮಾಡೋಣ ಅಂತ ಡಿಕೆಶಿ ಆಹ್ವಾನ ಸ್ವೀಕಾರ ಮಾಡಿದರು.
ಭೈರಮಂಗಳ ಸೇರಿ ಹಲವು ಕಡೆ ನಾವು ಓಡಾಡೋರೆ. ರಾಜಕೀಯವಾಗಿ ನಮ್ಮನ್ನ ಜನ ಬೆಳೆಸಿದ್ದಾರೆ. ಎಕರೆಗಟ್ಟಲೆ ಪರಿಹಾರ ಸಿಗುತ್ತೆ ಅಂತ ಹಣ ತಗೊಂಡು ಹೋಗ್ತಾರೆ. ಹೈನುಗಾರಿಕೆ ಮಾಡೋರು ಏನ್ ಮಾಡಬೇಕು. ಸಣ್ಣ ಸಣ್ಣ ಜಮೀನು ಇರೋರು ಏನ್ ಮಾಡ್ತಾರೆ. ಗುಂಟೆಗಟ್ಟಲೆ ಜಾಗ ಇರೋರು ಜಮೀನು ಮಾರಿ ವಾಚ್‌ಮ್ಯಾನ್ ಕೆಲಸ ಮಾಡಬೇಕಾ? ಹೋಟೆಲ್‌ನಲ್ಲಿ ತಟ್ಟೆ ತೊಳೆಯಬೇಕು. ರೈತರನ್ನು ಒಕ್ಕಲು ಎಬ್ಬಿಸಬೇಡಿ ಅಂತ ಬಿಡದಿ ಟೌನ್‌ಶಿಪ್‌ಗೆ ವಿರೋಧ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಯಾವತ್ತೂ ಹೆದರಿಕೊಂಡು ಓಡಿ ಹೋಗೊ ಜಾಯಮಾನ ದೇವೇಗೌಡ ಕುಟುಂಬದ್ದಲ್ಲ. ಬರಲಿ ಕೂತು ಚರ್ಚೆ ಮಾಡೋಣ. ಯಾರ್ ಯಾರ್ ಎಲ್ಲಿ ಜಮೀನು ಮಾಡಿದ್ದಾರೆ ಅಂತ ಜಗಜ್ಜಾಹೀರಾಗಲಿ. ಚರ್ಚೆ ಮಾಡೋಣ ಅಂತ ಡಿಕೆಶಿಗೆ ಸವಾಲು ಹಾಕಿದರು. ಇದನ್ನೂ ಓದಿ: ದೇಶದ ಆರ್ಥಿಕ ಬಿಕ್ಕಟ್ಟು ನಿವಾರಣೆ, ರಾಜ್ಯದಲ್ಲಿ ಉತ್ತಮ ಮಳೆಗಾಗಿ ತಿಮ್ಮಪ್ಪನ ಬಳಿ ಪ್ರಾರ್ಥನೆ: ಡಿಕೆಶಿ

