ಬರ್ಮಿಂಗ್‌ಹ್ಯಾಮ್: ಟಿ20 ವಿಶ್ವಕಪ್‌ನ (T20 World Cup) ಹೈ-ವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು (Pakistan) ಧೂಳೀಪಟ ಮಾಡಿದ ಭಾರತ (India) ಮಹಿಳಾ ತಂಡ 64 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಸ್ಮೃತಿ ಮಂಧಾನ(Smriti Mandhana) ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ದೀಪ್ತಿ ಶರ್ಮಾ(Deepti Sharma) ಅವರ ಮಾರಕ ಬೌಲಿಂಗ್ ನೆರವಿನಿಂದ ಭಾರತ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 6 ವಿಕೆಟ್ ನಷ್ಟಕ್ಕೆ 170 ರನ್‌ಗಳಿಸಿತು. 171 ರನ್‌ಗಳ ಕಠಿಣ ಸವಾಲು ಬೆನ್ನಟ್ಟಿದ ಪಾಕಿಸ್ತಾನ ಒಂದು ಹಂತದಲ್ಲಿ 6.2 ಓವರ್‌ಗಳಲ್ಲಿ 53 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಇಲ್ಲಿಂದ ಆರಂಭವಾಗಿದ್ದೇ ದೀಪ್ತಿ ಶರ್ಮಾ ಅವರ ಸ್ಪಿನ್ ಜಾದೂ. ಪಾಕ್ ತಂಡ 53 ರನ್ ಅಂತರದಲ್ಲಿ ತನ್ನ ಉಳಿದ 9 ವಿಕೆಟ್‌ಗಳನ್ನು ಕಳೆದುಕೊಂಡು 106 ರನ್‌ಗಳಿಗೆ ಆಲೌಟ್ ಆಯಿತು.
Champions play like champions.🔥#DeeptiSharma shines with a brilliant 5-fer as the World Champions begin their campaign with a commanding victory over Pakistan. 🇮🇳👊🏻
[ #T20WorldCup, #INDvsPAK, #TeamIndiaWomen, #RichaGhosh, #SmritiMandhana ] pic.twitter.com/hhbgLCpyjA
— Star Sports (@StarSportsIndia) June 14, 2026
ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ದೀಪ್ತಿ ಶರ್ಮಾ 4 ಓವರ್‌ಗಳಲ್ಲಿ ಕೇವಲ 10 ರನ್ ನೀಡಿ 5 ಪ್ರಮುಖ ವಿಕೆಟ್ ಕೀಳುವ ಮೂಲಕ ಪಾಕ್ ಬೆನ್ನೆಲುಬು ಮುರಿದರು. ಅಷ್ಟೇ ಅಲ್ಲದೆ ಪಾಕ್ ಪರ 41 ರನ್(35 ಎಸೆತ, 5 ಬೌಂಡರಿ) ಹೊಡೆದು ಹೋರಾಟ ನಡೆಸುತ್ತಿದ್ದ ಮುನೀಬಾ ಅಲಿ ಅವರನ್ನು ರನೌಟ್ ಮಾಡುವ ಮೂಲಕ ಭಾರತದ ಗೆಲುವನ್ನು ಸುಲಭಗೊಳಿಸಿದರು. ಉಳಿದಂತೆ ಶ್ರೀ ಚರಣಿ 3 ವಿಕೆಟ್ ಹಾಗೂ ಶಫಾಲಿ ವರ್ಮಾ 1 ವಿಕೆಟ್ ಪಡೆದು ದೀಪ್ತಿಗೆ ಉತ್ತಮ ಸಾಥ್ ನೀಡಿದರು.
That’s an absolute blinder! 🤯#ShreyankaPatil pulls off a stunning catch at backward point as India tighten their grip on the match.🇮🇳
ICC Women’s #T20WorldCup 2026 | #INDvPAK | LIVE NOW 👉 https://t.co/njSue0M5uR pic.twitter.com/7mbJXIu3uY
— Star Sports (@StarSportsIndia) June 14, 2026
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆರಂಭದಲ್ಲೇ ಶಫಾಲಿ ವರ್ಮಾ 6 ರನ್, ಹಾಗೂ ಜೆಮಿಮಾ 1 ರನ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ 3ನೇ ವಿಕೆಟ್‌ಗೆ ಜೊತೆಯಾದ ಸ್ಮೃತಿ ಮಂಧನಾ ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ ಜೋಡಿ 61 ಎಸೆತಗಳಲ್ಲಿ 91 ರನ್‌ಗಳ ಅಮೂಲ್ಯ ಜೊತೆಯಾಟವಾಡಿ ತಂಡಕ್ಕೆ ಆಸರೆಯಾಯಿತು. ಜವಾಬ್ದಾರಿಯುತ ಆಟವಾಡಿದ ಹರ್ಮನ್ 36 ರನ್ ಗಳಿಸಿದರೆ, ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಸ್ಮೃತಿ ಮಂಧನಾ 44 ಎಸೆತಗಳಲ್ಲಿ 68 ರನ್ (9 ಬೌಂಡರಿ, 2 ಸಿಕ್ಸರ್) ಚಚ್ಚಿದರು.
The finishing touch comes courtesy of #RichaGhosh. 💥
India close out their innings in style. 🇮🇳
ICC Women’s #T20WorldCup 2026 | #INDvPAK | LIVE NOW 👉 https://t.co/njSue0M5uR pic.twitter.com/BnlrdVlT4h
— Star Sports (@StarSportsIndia) June 14, 2026
ಮಧ್ಯಮ ಕ್ರಮಾಂಕದಲ್ಲಿ ರಿಚಾ ಘೋಷ್ ಮತ್ತು ದೀಪ್ತಿ ಶರ್ಮಾ ಜೋಡಿ ಕೇವಲ 21 ಎಸೆತಗಳಲ್ಲಿ 45 ರನ್‌ಗಳನ್ನು ಚಚ್ಚುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿತು. ಅದರಲ್ಲೂ ರಿಚಾ ಘೋಷ್ ಕೇವಲ 17 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 34 ರನ್ ಸಿಡಿಸಿದ್ದರಿಂದ ಭಾರತ 6 ವಿಕೆಟ್ ನಷ್ಟಕ್ಕೆ 170 ರನ್‌ಗಳ ಮೊತ್ತ ಪೇರಿಸಿತು. ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಅತ್ಯುತ್ತುಮ ಪ್ರದರ್ಶನ ನೀಡಿದ ದೀಪ್ತಿ ಶರ್ಮಾ ಅವರು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
#SmritiMandhana dances down the track and puts that away for a maximum! 💪#TeamIndia are turning up the heat. 🇮🇳🔥
ICC Women’s #T20WorldCup 2026 | #INDvPAK | LIVE NOW 👉 https://t.co/njSue0M5uR pic.twitter.com/gTyi8hdM6I
— Star Sports (@StarSportsIndia) June 14, 2026
