ಬೆಂಗಳೂರು: ಜನರ ಹಣದಲ್ಲಿ ಮೋಜು-ಮಸ್ತಿ ಮಾಡಲು ಕಾಂಗ್ರೆಸ್ ಸರ್ಕಾರ ಸಾಧನಾ ಸಮಾವೇಶ (Sadhana Samavesha) ಮಾಡುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಕಿಡಿಕಾರಿದ್ದಾರೆ.
ಸಾಧನಾ ಸಮಾವೇಶ ಕುರಿತು ಜೆಪಿ ಭವನದಲ್ಲಿ ಮಾತನಾಡಿದ ಅವರು, ಯಾವ ಪುರುಷಾರ್ಥಕ್ಕೆ ಸಾಧನೆ ಸಮಾವೇಶ ಮಾಡುತ್ತಿದ್ದಾರೆ ಗೊತ್ತಿಲ್ಲ. ಜನ ಸಾಮಾನ್ಯರೇ ವಿಪಕ್ಷಗಳಿಗಿಂದ ಹೆಚ್ಚು ಸರ್ಕಾರವನ್ನ ಪ್ರಶ್ನೆ ಮಾಡುತ್ತಿದ್ದಾರೆ. ಸಾರಿಗೆ ಇಲಾಖೆ ಹೇಗೆ ಕೆಲಸ ಮಾಡುತ್ತಿದೆ ಎಂದು ನೋಡುತ್ತಿದ್ದೇವೆ. ನೌಕರರಿಗೆ ಅರಿಯರ್ಸ್ ಬಾಕಿ ಉಳಿಸಿಕೊಂಡಿದೆ. ಸಂಧಾನ ಸಭೆ ಮಾಡಿದರೂ ಫಲ ಆಗಿಲ್ಲ. ಶಕ್ತಿ ಯೋಜನೆ ಮೂಲಕ ಫ್ರೀ ಬಸ್ ಅಂದು ಅಂದು ಇವತ್ತು ಸಾರಿಗೆ ಇಲಾಖೆ ಎಲ್ಲಿಗೆ ಬಂದು ನಿಂತಿದೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಉತ್ತರಾಖಂಡ ಮಾಜಿ ಸಿಎಂ ಭುವನ್ ಚಂದ್ರ ಖಂಡೂರಿ ನಿಧನ
ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಒಂದೇ ಒಂದು ಬಸ್ ಖರೀದಿ ಮಾಡಿಲ್ಲ. ಒಂದು ಟಯರ್ ಬದಲಾವಣೆ ಮಾಡೋಕೆ ಆಗಿಲ್ಲ ಈ ಸರ್ಕಾರಕ್ಕೆ. ಬಸ್ ಮೇಂಟೇನ್ ಮಾಡೋಕೆ ಸರ್ಕಾರದ ಬಳಿ ಬಿಡಿಗಾಸು ಹಣವಿಲ್ಲ. ಸಂಬಳ ಕೊಡೋದಕ್ಕೂ ಸರಿಯಾಗಿ ತೀರ್ಮಾನ ಮಾಡುತ್ತಿಲ್ಲ. ಕುಮಾರಸ್ವಾಮಿ ಅವರು 4,500 ಇವಿ ಬಸ್ ಬೆಂಗಳೂರಿಗೆ ಕೊಡದೇ ಹೋಗಿದ್ರೆ ಪರಿಸ್ಥಿತಿ ಎಲ್ಲಿಗೆ ಬಂದು ನಿಲ್ಲುತ್ತಿತ್ತು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಿಜಯಲಕ್ಷ್ಮಿ – ದರ್ಶನ್ ವೆಡ್ಡಿಂಗ್ ಆನಿವರ್ಸರಿ ದಿನ ʻದಾಸʼನಿಗೆ ಸಿಕ್ತು ಗುಡ್ ನ್ಯೂಸ್!
ಸಾಧನಾ ಸಮಾವೇಶ ಬಿಟ್ಟು ಬೆಂಗಳೂರಿನಲ್ಲಿ ಕಸದ ರಾಶಿ ಆಗಿದೆ. ಜನ ಒದ್ದಾಡುತ್ತಿದ್ದಾರೆ. ಬೆಂಗಳೂರು ನಗರ ಸಿಲಿಕಾನ್ ವ್ಯಾಲಿಯಾಗಿ ಉಳಿದಿಲ್ಲ. ಗಾರ್ಬೇಜ್ ನಗರವಾಗಿದೆ. ಇವೆಲ್ಲ ಮುಂದಿಟ್ಟುಕೊಂಡು ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ಪತ್ರಿಕೆಯಲ್ಲಿ ಜಾಹಿರಾತು ಕೊಟ್ಟು ಅತಿ ಹೆಚ್ಚು ಅವಧಿ ಸಿಎಂ ಆದೆ ಅಂತ ಚಾಂಪಿಯನ್ ಲೀಡರ್ ಅಂತ ಸಿಎಂ ಅವರು ಪ್ರಾಜೆಕ್ಟ್ ಮಾಡಿಕೊಳ್ಳುತ್ತಿದ್ದಾರೆ. ಎಷ್ಟು ದಿನ ಸಿಎಂ ಕುರ್ಚಿಯಲ್ಲಿ ಕೂತಿದ್ವಿ, ಎಷ್ಟು ದಿನ ಆಡಳಿತ ಮಾಡಿದ್ವಿ ಅನ್ನೋದು ಮುಖ್ಯವಲ್ಲ. ಅಧಿಕಾರ ಇದ್ದಾಗ ಎಷ್ಟು ಜನರ ಜೀವನ ಬದಲಾವಣೆ ಮಾಡಿದ್ದೀರಾ. ಎಷ್ಟು ಜನರ ಬದುಕು ಹಸನು ಮಾಡಿದ್ದೀರಾ ಅನ್ನೋದು ಮುಖ್ಯ. ಸಾಧನಾ ಸಮಾವೇಶ ಸರ್ಕಾರದ ದುಡ್ಡಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ನಾವು ಕಟ್ಟಿರೋ ಹಣದಲ್ಲಿ ಮೋಜು-ಮಸ್ತಿ ಮಾಡಿಕೊಂಡು ಕೂತಿದ್ದಾರೆ. ಇದರಿಂದ ಯಾರ ಹೊಟ್ಟೆ ತುಂಬಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ದುಬಾರೆಯಲ್ಲಿ ಭೀಕರ ಕಾದಾಟದಿಂದ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು

