ಚಿಕ್ಕಬಳ್ಳಾಪುರ: ಯುವತಿಯೊಬ್ಬಳ ಮನೆಗೆ ನುಗ್ಗಿ ಆಕೆಗೆ ಚಾಕು ಇರಿದಿದ್ದ ಮೂವರು ದುಷ್ಕರ್ಮಿಗಳನ್ನು ಚಿಂತಾಮಣಿ (Chintamani) ನಗರ ಪೊಲೀಸರು (Police) ಬಂಧಿಸಿದ್ದಾರೆ.
ಲಕ್ಷ್ಮೀ, ಮಂಜುನಾಥ ಹಾಗೂ ಜಬಿವುಲ್ಲಾ ಬಂಧಿತ ಆರೋಪಿಗಳು. ಪ್ರಮುಖ ಆರೋಪಿಗಳಾದ ಕಾರ್ತಿಕ್ ಹಾಗೂ ವಿನೋದ್ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಪ್ರಿಯತಮೆ ಹಿಂದೂ… ನಾನು ಮುಸ್ಲಿಂ ಆಗಿ ಹುಟ್ಟಿದ್ದೇ ತಪ್ಪಾ? – ಸಂಜೀತ್ ಆಲಿ ಡೆತ್ ನೋಟ್
ಚಿಂತಾಮಣಿ ನಗರದ ಆಶ್ರಯ ಬಡಾವಣೆಯಲ್ಲಿ ಮೇಘನಾ ಎಂಬ ಯುವತಿಗೆ ಆರೋಪಿಗಳು ಚುಡಾಯಿಸಿದ್ದರು. ಈ ವೇಳೆ ಸಿಟ್ಟಿಗೆದ್ದ ಯುವತಿ ಆರೋಪಿಗಳ ಕೆನ್ನೆಗೆ ಬಾರಿಸಿದ್ದಳು. ಇದೇ ಕಾರಣಕ್ಕೆ ಆರೋಪಿಗಳು, ಯುವತಿಯ ಮನೆಗೆ ನುಗ್ಗಿ ಚಾಕು ಇರಿದಿದ್ದರು.
ಬಂಧಿತ ಮೂವರು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಹೋಂಸ್ಟೇನಲ್ಲಿ ಯುವತಿ ಸಾವು; ಸಂಜೀತ್ ಅಲಿ ಸಹವಾಸ ಮಾಡಿ ತಪ್ಪು ಮಾಡಿಬಿಟ್ಟೆ ಹೊಸ ಬದುಕು ಕಟ್ಟಿಕೊಳ್ತೀನಿ ಎಂದಿದ್ದ ಸುರಭಿ
