ದಾವಣಗೆರೆ: ಮಹಿಳೆಯೊಬ್ಬಳು ಪತಿಯ (Husband) ತಲೆಗೆ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ ಘಟನೆ ಹರಿಹರ (Harihara) ತಾಲೂಕಿನ ಚಿಕ್ಕಬಿದರಿ ಗ್ರಾಮದಲ್ಲಿ ನಡೆದಿದೆ. ಜೂ.23 ರಂದು ಹತ್ಯೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಶಿವಪ್ಪ (42) ಹತ್ಯೆಯಾದ ದುರ್ದೈವಿ. ಆತನ ಪತ್ನಿ (Wife) ಸಾವಿತ್ರಿ (40) ಕೊಲೆಗೈದ ಆರೋಪಿಯಾಗಿದ್ದಾಳೆ. ಹತ್ಯೆಯಾದ ಶಿವಪ್ಪ ಪ್ರತಿದಿನ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಇದೇ ಕಾರಣಕ್ಕೆ ಮಹಿಳೆ ಆತನನ್ನು ಹತ್ಯೆ ಮಾಡಿದ್ದಳು. ಈ ವೇಳೆ ಮಗ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಅಪ್ರಾಪ್ತ ಬಾಲಕನ ಅಪಹರಣ ಕೇಸ್ – ಇಬ್ಬರು ಆರೋಪಿಗಳ ಬಂಧನ
ಕೊಲೆಯ ಬಳಿಕ ಶವವನ್ನು ಜಮೀನಿಗೆ ಸಾಗಿಸಿ, ಎಸೆಯಲು ಮಗ ಹನುಮೇಗೌಡ (20) ತಾಯಿಗೆ ಸಹಕರಿಸಿದ್ದ ಎಂದು ತಿಳಿದುಬಂದಿದೆ. ಜಮೀನಿನಲ್ಲಿ ಶವ ಪತ್ತೆಯಾದ ಬಳಿಕ ಹರಿಹರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು.
ಶಂಕೆಯ ಮೇಲೆ, ತಾಯಿ ಹಾಗೂ ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ. ಇಬ್ಬರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ 45 ಎಕರೆ ಜಾಗ, ಕೆಜಿಗಟ್ಟಲೆ ಚಿನ್ನ – ತೆಲಂಗಾಣ ಡಿಎಸ್‌ಪಿಯ 200 ಕೋಟಿ ಸಾಮ್ರಾಜ್ಯ ಬಯಲಿಗೆಳೆದ ಎಸಿಬಿ
