ಬೆಂಗಳೂರು: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆಯಲ್ಲಿ ʻ66/11 ಕೆ.ವಿ ಶೋಭಾ ಸಿಟಿ ಉಪ-ಕೇಂದ್ರʼ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಜು.04 (ಶನಿವಾರ) ರಂದು ವಿದ್ಯುತ್ ವ್ಯತ್ಯಯ (Power Outage) ಆಗಲಿದೆ.
ಅಂದು ಬೆಳಗ್ಗೆ 11 ರಿಂದ ಸಂಜೆ 05 ಗಂಟೆ ವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದನ್ನೂ ಓದಿ: ದೆಹಲಿಯಲ್ಲಿ ರಾಹುಲ್ ಗಾಂಧಿಗೆ ಅರ್ಥವಾಗುವಂತೆ ಇಂಗ್ಲಿಷ್‌ನಲ್ಲೇ ಪ್ರೆಸ್‌ಮೀಟ್ ಮಾಡ್ತೀನಿ: ನಿಖಿಲ್ ಕಿಡಿ
ಶನಿವಾರ ಎಲ್ಲೆಲ್ಲಿ ವ್ಯತ್ಯಯ?
ಶೋಭಾ ಸಿಟಿ, ಚೊಕ್ಕನಹಳ್ಳಿ, ಡೊಮಿನೋಸ್ ಪಿಜ್ಜಾ (ಡಿವ್ ಇನ್ ಪ್ಯಾರಡೈಸ್), ನೂರ್ ನಗರ, ಮಾಜಿ ಸೈನಿಕರ ಲೇಔಟ್, ಪೊಲೀಸ್ ಕ್ವಾಟ್ರಸ್, ಆರ್. ಕೆ. ಹೆಗಡೆ ನಗರ, ಶಬರಿ ನಗರ, ನ್ಯೂ ಶಾಂತಿನಗರ, ಕೆಂಪೇಗೌಡ ಲೇಔಟ್, ನಾಗೇನಹಳ್ಳಿ ಗ್ರಾಮ, ರೀಜೆನ್ಸಿ ಪಾರ್ಕ್, ಈಸ್ಟರ್ ಹಾರ್ಮೊನಿ ಲೇಔಟ್, ಬಾಲಾಜಿ ಲೇಔಟ್, ನಾಗೇನಹಳ್ಳಿ ಜಿಮ್, ಸ್ಲಂ ಬೋರ್ಡ್, ಬೆಂಚ್ ರಾಯಲ್ ಲೇಔಟ್, ತಿರುಮೇನಹಳ್ಳಿ ಗ್ರಾಮ, ಮಿಟ್ಟಗನಹಳ್ಳಿ, ಕೋಗಿಲು ಗ್ರಾಮ, ಬೆಳ್ಳಹಳ್ಳಿ, ವಿಧಾನಸೌಧ ಲೇಔಟ್, ಕರ್ನಾಟಕ ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

ಅದೇ ರೀತಿ ʻ66/11 ಕೆ.ವಿ ಕಂಠೀರವ ಉಪ-ಕೇಂದ್ರʼ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಿನ್ನೆಲೆ ಜು.05 ರ ಭಾನುವಾರ ವಿವಿಧ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ. ಅಂದು ಬೆಳಗ್ಗೆ 10 ಗಂಟೆಯಿಂದ 05 ಗಂಟೆ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇದನ್ನೂ ಓದಿ: ಗುಂಪು-ಗುಂಪಾಗಿ ಕಾಣಿಸಿಕೊಂಡ ಕಾಡಾನೆ ಹಿಂಡು – ಡ್ರೋನ್ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಭಾನುವಾರ ಎಲ್ಲೆಲ್ಲಿ ವ್ಯತ್ಯಯ?
ಕಬ್ಬನ್‌ಪೇಟೆ 3ನೇ ಕ್ರಾಸ್, 4ನೇ ಕ್ರಾಸ್, 5ನೇ ಕ್ರಾಸ್ ಹಾಗೂ 6ನೇ ಕ್ರಾಸ್, ಚೌಲಗಲ್ಲಿ ಎ, ಬಿ, ಸಿ ಹಾಗೂ ಡಿ ಗಲ್ಲಿ, ಆರ್‌ಬಿಐ, ನೃಪತುಂಗ ರಸ್ತೆ, ಯು.ವಿ.ಸಿ.ಇ., ಕೃಷಿ ಕಚೇರಿ, ಸರ್ಕಾರಿ ಕಲಾ ಮಹಾವಿದ್ಯಾಲಯ, ಮಾರ್ಥಾಸ್ ಆಸ್ಪತ್ರೆ, ಸುಂಕಲ್ಪೇಟೆ, ನಾಗರ್ತಪೇಟೆ ಮುಖ್ಯ ರಸ್ತೆ, ಕೆ.ಎ.ಎಸ್. ಲೇನ್, ಎ ಲೇನ್, ಸಿ ಲೇನ್ ಹಾಗೂ ಡಿ ಲೇನ್, ಪಿ.ಆರ್.ಎಸ್. ಲೇನ್, ಕಬ್ಬನ್ಪೇಟೆ 13ನೇ ಕ್ರಾಸ್, 14ನೇ ಕ್ರಾಸ್ ಹಾಗೂ 15ನೇ ಕ್ರಾಸ್, ಕೆ.ಜಿ. ರಸ್ತೆಯ ಭಾಗ, ಓ.ಟಿ.ಸಿ. ರಸ್ತೆ, ಶಾರದಾ ಥಿಯೇಟರ್ ಹಿಂಭಾಗ, ಎಸ್.ಪಿ. ರಸ್ತೆ, ಎಸ್.ಜೆ.ಪಿ. ರಸ್ತೆ, ಧರ್ಮರಾಯಸ್ವಾಮಿ ದೇವಸ್ಥಾನ ರಸ್ತೆ, ಆದರ್ಶ್ ಶಾಂಗ್ರಿ-ಲಾ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
