ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾಡಾನೆ – ಮಾನವ ಸಂಘರ್ಷ ತೀವ್ರಗೊಳ್ಳುತ್ತಿದೆ. ಈ ಮಧ್ಯೆ ಕಾಡಾನೆಗಳ ಹಿಂಡು ಕಾಣಿಸಿಕೊಂಡಿರುವುದು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿರಾಜಪೇಟೆ ತಾಲೂಕಿನ ಕುಕ್ಲೂರು ಗ್ರಾಮದಲ್ಲಿ ಕಾಡಾನೆಗಳ (Wile Elephant) ಹಿಂಡು ಪ್ರತ್ಯಕ್ಷವಾಗಿದೆ.
ಈ ಸುಂದರ ದೃಶ್ಯ ಪ್ರಕೃತಿ ಹಾಗೂ ಪ್ರಾಣಿಪ್ರಿಯರಿಗೆ ಮುದ ನೀಡಿದ್ರೂ, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ. ಇದನ್ನೂ ಓದಿ: SIR ಪ್ರಕ್ರಿಯೆಯಲ್ಲಿ ಲೋಪ ಆಗಿದ್ದರೆ ಚುನಾವಣೆ ಆಯೋಗ ಕ್ರಮ ತೆಗೆದುಕೊಳ್ಳಲಿ: ಪ್ರಿಯಾಂಕ್ ಖರ್ಗೆ

ಪಾಳುಬಿದ್ದ ಗದ್ದೆಯ ಮಧ್ಯೆ ಸಂಚರಿಸುತ್ತಿದ್ದ ಕಾಡಾನೆಗಳ ವಿಡಿಯೋವನ್ನ ಸ್ಥಳೀಯರು ಡ್ರೋನ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದ್ದು, ಜನರು ಎಚ್ಚರಿಕೆಯಿಂದ ಓಡಾಡುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.
ವಿರಾಜಪೇಟೆ–ಮಡಿಕೇರಿ ಮುಖ್ಯ ರಸ್ತೆ ಸಮೀಪವೇ ಕಾಡಾನೆಗಳ ಹಿಂಡು ಕಾಣಿಸಿಕೊಂಡಿರುವುದರಿಂದ ವಾಹನ ಸವಾರರು, ರಾತ್ರಿ ವೇಳೆ ಎಚ್ಚರಿಕೆಯಿಂದ ಸಂಚರಿಸಬೇಕು. ಕಾಡಾನೆಗಳು ಕಂಡರೆ ಅವುಗಳ ಬಳಿ ತೆರಳದೇ, ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆಯೂ ಕೋರಿದೆ. ಇದನ್ನೂ ಓದಿ: ಅಪ್ರಾಪ್ತ ಬಾಲಕನ ಅಪಹರಣ ಕೇಸ್ – ಇಬ್ಬರು ಆರೋಪಿಗಳ ಬಂಧನ
