-ಬೇಬಿ ಕೇರ್‌ನಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದಕ್ಕಾಗಿ ಗೃಹ ಇಲಾಖೆಯಿಂದ ನೋಟಿಸ್
ಬೆಂಗಳೂರು: SIR ಪ್ರಕ್ರಿಯೆಯಲ್ಲಿ ಲೋಪ ಆಗಿದ್ದರೆ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಲಿ ಅಂತ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
ಸಿಎಂ ಪ್ರೇರಣೆಯಿಂದ ಆಗ್ತಿದೆ ಎಂಬ ಹೆಚ್‌ಡಿಕೆ (HD Kumaraswamy) ಆರೋಪ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಅವರು ಪ್ರತಿ ಬೂತ್ ನೋಡಲು ಆಗುತ್ತಾ? ಲೋಕಲ್ ಲೀಡರ್ಸ್ ಯಾರೋ ಪ್ರಕ್ರಿಯೆ ಬೇಗ ಆಗುತ್ತದೆ ಅಂತ ಹಾಗೆ ಮಾಡಿರಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿ ಬಂದಿಲ್ಲ. ಚುನಾವಣಾ ಆಯೋಗ (Election Commission) ಇದೆ. ಅದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತದೆ. ಎಲೆಕ್ಷನ್ ಕಮೀಷನ್ ಮಾಡುವ ಕೆಲಸ ಬಿಜೆಪಿ-ಜೆಡಿಎಸ್ ಮಾಡುತ್ತಾ? ಚುನಾವಣಾ ಆಯೋಗ BLOಗಳಿಂದ ವಿವರಣೆ ಕೇಳುತ್ತೆ ಎಂದು ಹೇಳದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ಸಮುದಾಯ ಭವನ, ಅಗನವಾಡಿಗಳಲ್ಲೇ ಕುಳಿತು ಮತಪಟ್ಟಿ ಪರಿಷ್ಕರಣೆ!
ರಾಮನಗರದಲ್ಲಿ SIR ಲೋಪ:
ಅದು ಹೆಚ್‌ಡಿಕೆ, ಡಿಕೆಶಿ ಅಂತ ಇಲ್ಲ. SIR ಮಾಡೋಕೆ ಮಾನದಂಡ, ಪ್ರಕ್ರಿಯೆ ಇದೆ. ಅದರ ಪ್ರಕಾರ ಆಗಬೇಕು. ನಿಯಮದ ಪ್ರಕಾರ ಆಗದೇ ಇಲ್ಲದೆ ಹೋದ್ರೆ ಶಿಸ್ತು ಕ್ರಮ ತಗೋಬೇಕು. ನಿಯಮ ಉಲ್ಲಂಘನೆ ಅದ್ರೆ ಕಾನೂನು ಪ್ರಕಾರ ಕ್ರಮ ಆಗುತ್ತದೆ. SIRನಲ್ಲಿ ಮನೆ ಮನೆಗೆ ಹೋಗಬೇಕು. ಅದು ಬಿಟ್ಟು ಬೇರೆ ಕಡೆ ಆಗ್ತಿದ್ದರೆ ಕ್ರಮ ಆಗಬೇಕು ಎಂದಿದ್ದಾರೆ.
ಮೊದಲು ನಮ್ಮ 12 ಪ್ರಶ್ನೆಗೆ ಉತ್ತರ ಇನ್ನು ಬಂದಿಲ್ಲ. ವಿಪಕ್ಷಗಳು ಮಾತಾಡಬೇಕು. ಯಾವ ನಾಗರಕರ ಮತ ಕಸಿಯುವ ಹಕ್ಕು ಯಾರಿಗೂ ಇಲ್ಲ. ಚುನಾವಣಾ ಆಯೋಗ ನಮ್ಮ ಪ್ರಶ್ನೆಗೆ ಉತ್ತರ ಕೊಡಲಿ ಎಂದು ಪ್ರಶ್ನೆ ಮಾಡಿದ್ದಾರೆ.ಇದನ್ನೂ ಓದಿ: ಕಲ್ಯಾಣ ಮಂಟಪದಲ್ಲಿ ಎಸ್‌ಐಆರ್ – ಮುಖ್ಯ ಚುನಾವಣಾಧಿಕಾರಿಯಿಂದ ಬಿಎಲ್‌ಒಗಳಿಗೆ ನೋಟಿಸ್ ಜಾರಿ
ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಗೃಹ ಇಲಾಖೆಯಿಂದ ನೋಟಿಸ್:
ಬೇಬಿ ಕೇರ್‌ನಲ್ಲಿ (Baby Care) ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣದಲ್ಲಿ ಕಂಪನಿಗೆ ಗೃಹ ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಈ ಘಟನೆಯನ್ನ ನಾವು ಸಹಿಸೋಕೆ ಆಗಲ್ಲ. ನಮ್ಮ ಇಲಾಖೆಯಿಂದ ಆ ಕಂಪನಿಗೆ ಕ್ಲಾರಿಫಿಕೇಶನ್ ಕೇಳಿದ್ದೇವೆ. ದೊಡ್ದ ದೊಡ್ಡ ಪ್ರತಿಷ್ಠಿತ ಕಂಪನಿಗಳಿವೆ. ಅದಕ್ಕೆ ಅವರದ್ದೇ ಆದ ಪಾಲಿಸಿ ಇರುತ್ತದೆ. ಈ ಪಾಲಿಸಿ ಇಂಡಿಯಾಗೆ ಮಾತ್ರ ಸೀಮಿತ ಇರಲ್ಲ. ಗ್ಲೋಬಲ್ ಪಾಲಿಸಿ ಇರುತ್ತದೆ. ಅದರ ಪ್ರಕಾರ ನಡೆಸಬೇಕು. SOP ಇರುತ್ತೆ ಅದರ ಬಗ್ಗೆ ಚೆಕ್ ಮಾಡಬೇಕಿತ್ತು. ಆದ್ರೆ ಅದು ಆಗಿಲ್ಲ ಅನ್ನಿಸುತ್ತೆ ಎಂದು ತಿಳಿಸಿದ್ದಾರೆ.
ನಾವು ಕೇಳಿರುವ ಕ್ಲಾರಿಫಿಕೇಷನ್‌ಗೆ ಲಿಖಿತವಾಗಿ ಉತ್ತರಸಲಿ. ಯಾವುದೇ ಕಂಪನಿ ಹೀಗೆ ಮಾಡಬಾರದು. ಮಕ್ಕಳಿಗೆ ಹೀಗೆ ಮಾಡೋದು ಸರಿಯಲ್ಲ. ಗ್ಲೋಬಲ್ ಕಂಪನಿಗಳಲ್ಲಿ ಹೀಗೆ ಮಾಡೋದು ಸರಿಯಲ್ಲ. ಇದು ತಲೆ ತಗ್ಗಿಸೋ ವಿಚಾರ. ಡೇ ಕೇರ್ ನಿರ್ವಹಣೆಗೆ ಈಗಾಗಲೇ ನಿಯಮ ಇದೆ. ಆದರೆ ಅದು ನಡೆದಿಲ್ಲ. ಈ ಘಟನೆಯಿಂದ ಬ್ರ್ಯಾಂಡ್ ಬೆಂಗಳೂರಿಗೂ ಧಕ್ಕೆ ಬರುತ್ತದೆ. ರಿಪೋರ್ಟ್ ಬರಲಿ ನಂತರ ಕ್ರಮ ತೆಗೆದುಕೊಳ್ಳುತ್ತೇವೆ. ನಿಯಮದ ಪ್ರಕಾರ ಆಕ್ಷನ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಬೇಬಿ ಕೇರ್‌ನಲ್ಲಿ ಮಕ್ಕಳ ಮೇಲೆ ದೈಹಿಕ ಹಿಂಸೆ ಕೇಸ್ – ಇಬ್ಬರು ಅರೆಸ್ಟ್
