ವಿಜಯಪುರ: ಕಾರಹುಣ್ಣಿಮೆ (Kara Hunnime) ನಿಮಿತ್ತ ವಿಜಯಪುರದಲ್ಲಿ (Vijayapura) ಏರ್ಪಡಿಸಿದ್ದ ಎತ್ತುಗಳ ಓಟ ಸ್ಪರ್ಧೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಕಿಡಿಗೇಡಿಗಳು ಸ್ಪರ್ಧೆ ವೇಳೆ ಎತ್ತು ಮತ್ತು ಕುದುರೆಗಳನ್ನು ಕರೆಂಟ್ ಶಾಕ್ ಕೊಟ್ಟು ಓಡಿಸಿರುವ ಘಟನೆ ನಡೆದಿದೆ.
ನಗರದ ಹೊರವಲಯದ ಬೇಗಂ ತಲಾಬ್ ರಸ್ತೆಯಲ್ಲಿ ನಿನ್ನೆ ಸಂಜೆ ಕಾರ ಹುಣ್ಣಿಮೆಗೆ ಜಾನುವಾರು ಸ್ಪರ್ಧೆ ನಡೆದಿದೆ. ತಮ್ಮ ಎತ್ತು, ಕುದುರೆ ಸ್ಪರ್ಧೆಯಲ್ಲಿ ಗೆಲ್ಲಲಿ ಎಂದು ಈ ರೀತಿ ಹಿಂಸೆ ಕೊಟ್ಟಿದ್ದಾರೆ. ಇದನ್ನೂ ಓದಿ: ಪತ್ನಿಯಿಂದಲೇ ಪತಿಯ ಬರ್ಬರ ಹತ್ಯೆ – ತಾಯಿಯ ಕೃತ್ಯಕ್ಕೆ ಮಗನ ಸಾಥ್
ಸ್ಪರ್ಧೆಯಲ್ಲಿ ನಮ್ಮ ಎತ್ತುಗಳೇ ಗೆಲ್ಲಬೇಕೆಂದು ಅವುಗಳಿಗೆ ಸಿಕ್ಕ ಸಿಕ್ಕಂತೆ ಕೋಲು, ಚಾಟಿಗಳಿಂದ ಹೊಡೆದಿದ್ದಾರೆ. ಅಷ್ಟೇ ಅಲ್ಲದೇ, ಕರೆಂಟ್ ಶಾಕ್ ಕೂಡ ಕೊಟ್ಟಿದ್ದಾರೆ. ಶಾಕ್ ನೋವಿನಿಂದ ಜಾನುವಾರುಗಳು ಬೆದರಿ ಓಡಿರುವ ದೃಶ್ಯದ ವೀಡಿಯೋಗಳು ವೈರಲ್ ಆಗಿದೆ.
ಎತ್ತು, ಕುದುರೆಗೆ ಶಾಕ್ ಕೊಡ್ತಿದ್ರೆ ಚುರ್ ಎಂದು ಸೌಂಡ್ ಬರುತ್ತೆ. ವಿಕೃತ ಖುಷಿಗೆ ಕರೆಂಟ್ ಶಾಕ್ ಕೊಟ್ಟಿದ್ದಾರೆ. ಎತ್ತು ಹಾಗೂ ಕುದುರೆಗಳ ಸೂಕ್ಷ್ಮ ಭಾಗಕ್ಕೆ ಕರೆಂಟ್ ಶಾಕ್ ನೀಡಿ ಹಿಂಸೆ ನೀಡಿದ್ದಾರೆ. ಬ್ಯಾಟರಿ ಚಾಲಿತ ಟಾರ್ಚ್ ಮಾದರಿಯ ಸಾಧನ ಬಳಸಿ ಕರೆಂಟ್ ಶಾಕ್ ನೀಡಿದ್ದಾರೆ. ಇದನ್ನೂ ಓದಿ: ಹುಸಿ ಬಾಂಬ್ ಕರೆಗಳು, ಇಮೇಲ್ ಪತ್ತೆ ಹಚ್ಚೋದು ಕಷ್ಟ- ಪ್ರಿಯಾಂಕ್ ಖರ್ಗೆ
