– ಯುವಕನೊಂದಿಗೆ ಹೋಟೆಲ್‌ಗೆ ಬಂದಿದ್ದ ಮಹಿಳೆ
ಹೈದರಾಬಾದ್: ಸ್ನೇಹಿತೆಯೊಂದಿಗೆ ವಿಡಿಯೋ ಕಾಲ್‌ನಲ್ಲಿ(Video call) ಮಾತನಾಡುತ್ತಿದ್ದ ವೇಳೆ ಮಹಿಳೆಯೊಬ್ಬರು ಹೋಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ( Hyderabad woman Suicide) ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನ ಲಂಗರ್ ಹೌಸ್ ಪ್ರದೇಶದಲ್ಲಿ ನಡೆದಿದೆ.
26 ವರ್ಷದ ರೇಣುಕಾ ಮೃತ ಮಹಿಳೆ. ಅಲ್ವಾಲ್ ನಿವಾಸಿಯಾಗಿದ್ದ ಆಕೆಗೆ ಮದುವೆಯಾಗಿದ್ದು, ಒಂದು ಮಗು ಇದೆ. ಈಕೆ ನಗರದ ರೆಸ್ಟೋ-ಪಬ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಬುಧವಾರ ಬೆಳಗಿನ ಜಾವ ಸುಮಾರು 3 ಗಂಟೆಗೆ ರೇಣುಕಾ ಯುವಕನೊಬ್ಬನೊಂದಿಗೆ ಲಂಗರ್ ಹೌಸ್‌ನ ಹೋಟೆಲ್‌ಗೆ ತೆರಳಿದ್ದರು. ಗುರುವಾರ ರಾತ್ರಿ ಸುಮಾರು 10:30ಕ್ಕೆ ಯುವಕ ಹೋಟೆಲ್‌ನಿಂದ ತೆರಳಿದ್ದು, ರೇಣುಕಾ ಮಾತ್ರ ಕೊಠಡಿಯಲ್ಲೇ ಉಳಿದಿದ್ದರು. ರಾತ್ರಿ 11:56ರ ಸುಮಾರಿಗೆ ಮಹಿಳೆ ಹೋಟೆಲ್‌ನಲ್ಲೇ ಊಟ ಆರ್ಡರ್ ಮಾಡಿ, ಬಳಿಕ ಸ್ನೇಹಿತೆ ಸತ್ಯಾಗೆ ವಿಡಿಯೋ ಕಾಲ್ ಮಾಡಿದ್ದಾರೆ. ಕರೆಯಲ್ಲಿ ಮಾತನಾಡುತ್ತಿರುವಾಗಲೇ ರಾತ್ರಿ ಸುಮಾರು 12:24ಕ್ಕೆ ರೇಣುಕಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಗಣೇಶ್ ನಟನೆಯ ಬೃಂದಾ ವಿಹಾರಿ ಪೋಸ್ಟರ್ ರಿಲೀಸ್
ಘಟನೆ ತಿಳಿದ ಹೋಟೆಲ್ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೋಟೆಲ್‌ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ರೇಣುಕಾ ಮೊಬೈಲ್‌ನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ. ಅವರೊಂದಿಗೆ ಹೋಟೆಲ್‌ಗೆ ಬಂದಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಮಹಿಳೆ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆ ಹಾಗೂ ತನಿಖೆ ಪೂರ್ಣಗೊಂಡ ಬಳಿಕವೇ ತಿಳಿಯಲಿದೆ.ಇದನ್ನೂ ಓದಿ: ಚಾ.ನಗರ | ಗಲ್ಲಿಯಲ್ಲಿ ನವಜಾತ ಶಿಶು ದೇಹ ಪತ್ತೆ

