ಹಾಸನ: ಟೀ ಕುಡಿಯುವಾಗಲೇ ಟ್ರಕ್ ಚಾಲಕನೊಬ್ಬ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಕಲೇಶಪುರದ (Sakleshpura) ಬಾಳುಪೇಟೆಯಲ್ಲಿ ನಡೆದಿದೆ.
ಉತ್ತರಪ್ರದೇಶದ ಬರೇಲಿ ಮೂಲದ ಅಮರ್ ಸಿಂಗ್ ಪೈ (50) ಸಾವನ್ನಪ್ಪಿದ ಟ್ರಕ್ ಚಾಲಕ. ಟ್ರಕ್ ಮಂಗಳೂರು ಕಡೆಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಟೀ ಕುಡಿಯಲು ಚಾಲಕ ಟ್ರಕ್ ನಿಲ್ಲಿಸಿದ್ದರು. ಈ ವೇಳೆ ಟೀ ಕುಡಿಯುವಾಗಲೇ ಕುಸಿದುಬಿದ್ದು ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮನೆಗೆ ನುಗ್ಗಿ ಯುವತಿಗೆ ಚಾಕು ಇರಿತ – ಮೂವರು ಅರೆಸ್ಟ್, ಪ್ರಮುಖ ಆರೋಪಿಗಳಿಗಾಗಿ ಶೋಧ
ಅಮರ್ ಸಿಂಗ್ ಕುಸಿದು ಬೀಳುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹೃದಯಾಘಾತದಿಂದ (Heart Attack) ಅವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ:ವಿಜಯಪುರದಲ್ಲಿ ಅಮಾನವೀಯ ಘಟನೆ – ಓಟದ ಸ್ಪರ್ಧೆಯಲ್ಲಿದ್ದ ಎತ್ತು, ಕುದುರೆಗಳಿಗೆ ಕರೆಂಟ್ ಶಾಕ್
