ಬರ್ಮಿಂಗ್‌ಹ್ಯಾಮ್: ಭಾರತ(India) ಈ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ದೀಪ್ತಿ ಶರ್ಮಾ(Deepti Sharma) ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ (T20 Cricket) ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಟಿ20 ವಿಶ್ವಕಪ್‌ನ ಲೀಗ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಕೇವಲ 10 ರನ್ ನೀಡಿ 5 ವಿಕೆಟ್ ಉರುಳಿಸುವ ಮೂಲಕ ವಿಶ್ವ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವಿಶ್ವದ ನಂಬರ್ 1 ಬೌಲರ್ ಎಂಬ ಹೆಗ್ಗಳಿಕೆಗೆ ದೀಪ್ತಿ ಪಾತ್ರರಾಗಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ದೀಪ್ತಿ ಶರ್ಮಾ ಈ ವಿಶ್ವದಾಖಲೆಯ ಹೊಸ್ತಿಲಲ್ಲಿದ್ದರು. ಕರಾರುವಾಕ್ ಬೌಲಿಂಗ್ ದಾಳಿ ನಡೆಸಿದ ಅವರು ಪಾಕ್ ಪಡೆಯನ್ನು ಧೂಳೀಪಟ ಮಾಡಿದ್ದಲ್ಲದೆ, ಥೈಲ್ಯಾಂಡ್‌ನ ತಿಪಚ್ಚ ಪುಟ್ಟವಾಂಗ್ ಅವರ ಹೆಸರಲ್ಲಿದ್ದ ವಿಶ್ವದಾಖಲೆಯನ್ನು ಮುರಿದರು.
ತಿಪಚ್ಚ ಪುಟ್ಟವಾಂಗ್ 105 ಪಂದ್ಯಗಳಿಂದ 165 ವಿಕೆಟ್ ಪಡೆದು ಇದುವರೆಗೆ ಮೊದಲ ಸ್ಥಾನದಲ್ಲಿದ್ದರು. ಈಗ ದೀಪ್ತಿ ಶರ್ಮಾ ತಮ್ಮ 145ನೇ ಪಂದ್ಯದಲ್ಲಿ 166ನೇ ವಿಕೆಟ್ ಕಡಿಯುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ.
Champions play like champions.🔥#DeeptiSharma shines with a brilliant 5-fer as the World Champions begin their campaign with a commanding victory over Pakistan. 🇮🇳👊🏻
[ #T20WorldCup, #INDvsPAK, #TeamIndiaWomen, #RichaGhosh, #SmritiMandhana ] pic.twitter.com/hhbgLCpyjA
— Star Sports (@StarSportsIndia) June 14, 2026
ಅತಿ ಹೆಚ್ಚು ವಿಕೆಟ್ ಪಡೆದ ಜಾಗತಿಕ ಬೌಲರ್‌ಗಳು:
ದೀಪ್ತಿ ಶರ್ಮಾ (ಭಾರತ): 166 ವಿಕೆಟ್‌ಗಳು (145 ಪಂದ್ಯ)
ತಿಪಚ್ಚ ಪುಟ್ಟವಾಂಗ್ (ಥೈಲ್ಯಾಂಡ್): 165 ವಿಕೆಟ್‌ಗಳು (105 ಪಂದ್ಯ)
ಹೆನ್ರಿಯೆಟ್ ಇಶಿಮ್ವೆ (ರುವಾಂಡಾ): 160 ವಿಕೆಟ್‌ಗಳು
ಮೇಗನ್ ಶುಟ್ (ಆಸ್ಟ್ರೇಲಿಯಾ): 152 ವಿಕೆಟ್‌ಗಳು
That’s exactly what India were looking for! 🔥#DeeptiSharma removes the batter and hands #TeamIndia their first wicket.👊🏻
ICC Women’s #T20WorldCup 2026 | #INDvPAK | LIVE NOW 👉 https://t.co/njSue0M5uR pic.twitter.com/Fqry6ywy74
— Star Sports (@StarSportsIndia) June 14, 2026
ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ದೀಪ್ತಿ ಶರ್ಮಾ ಕೇವಲ 4 ಓವರ್‌ಗಳನ್ನು ಎಸೆದು, ಕೇವಲ 10 ರನ್‌ಗಳನ್ನು ನೀಡಿ 5 ಪ್ರಮುಖ ವಿಕೆಟ್‌ಗಳನ್ನು ಕಿತ್ತರು. ಇದು ಅವರ ಅಂತಾರಾಷ್ಟ್ರೀಯ ಟಿ20 ವೃತ್ತಿಜೀವನದ ಅತ್ಯುತ್ತಮ ವೈಯಕ್ತಿಕ ಬೌಲಿಂಗ್ ಪ್ರದರ್ಶನವಾಗಿದೆ. ಭಾರತದ ಈ ಭರ್ಜರಿ ಗೆಲುವು ಮತ್ತು ಐತಿಹಾಸಿಕ ವಿಶ್ವದಾಖಲೆಯ ಸಾಧನೆಗಾಗಿ ದೀಪ್ತಿ ಶರ್ಮಾ ಅವರಿಗೆ ‘ಪಂದ್ಯ ಶ್ರೇಷ್ಠ’ (Player of the Match) ಪ್ರಶಸ್ತಿ ನೀಡಿ ಗೌರವಿಸಲಾಯಿತು.

