CricketLatestLeading NewsMain PostSports

T20 ವಿಶ್ವಕಪ್ ಸೋಲಿನ ಬಳಿಕ ದ್ರಾವಿಡ್‌ಗೆ ವಿಶ್ರಾಂತಿ – ಲಕ್ಷ್ಮಣ್‌ ಕೋಚ್

ಮುಂಬೈ: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ (VVS Laxman) ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾದ (Team India) ಹಂಗಾಮಿ ಕೋಚ್ ಆಗಿರಲಿದ್ದಾರೆ.

ಟಿ20 ವಿಶ್ವಕಪ್‌ನಿಂದ ಮರಳಿದ ಬಳಿಕ ರಾಹುಲ್ ದ್ರಾವಿಡ್ (Rahul Dravid) ನೇತೃತ್ವದ ಕೋಚಿಂಗ್ ತಂಡಕ್ಕೆ ವಿಶ್ರಾಂತಿ ನೀಡಲಾಗಿದೆ. ಇದೇ ನವೆಂಬರ್ 18 ರಿಂದ ವೆಲ್ಲಿಂಗ್ಟನ್‌ನಲ್ಲಿ ಮೂರು ಅಂತಾರಾ‌ಷ್ಟ್ರೀಯ ಟಿ20 (T20I) ಹಾಗೂ ಏಕದಿನ ಪಂದ್ಯಗಳು ನಡೆಯಲಿವೆ. ಇದನ್ನೂ ಓದಿ: ಹಾರ್ದಿಕ್ ಪಾಂಡ್ಯಗೆ ಟೀಂ ಇಂಡಿಯಾದ T20 ನಾಯಕತ್ವ

ವಿಶ್ವಕಪ್ ಬಳಿಕ ನಾಯಕ ರೋಹಿತ್ ಶರ್ಮಾ (Rohit Sharma), ವಿರಾಟ್‌ಕೊಹ್ಲಿ (Virat Kohli), ಕೆ.ಎಲ್. ರಾಹುಲ್ (KL Rahul) ಹಾಗೂ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಂತಹ ಹಿರಿಯ ಆಟಗಾರರಿಗೆ ಪ್ರವಾಸದಲ್ಲಿ ವಿಶ್ರಾಂತಿ ನೀಡಲಾಗುತ್ತಿದೆ. ಇದರೊಂದಿಗೆ ಟಿ20 ವಿಶ್ವಕಪ್‌ನ (T20 WorldCup) ಇಡೀ ಕೋಚಿಂಗ್ ಸಿಬ್ಬಂದಿಗೂ ವಿಶ್ರಾಂತಿ ನೀಡಲಾಗಿದೆ. ಇದನ್ನೂ ಓದಿ: ಭಯಂಕರವಾಗಿ ಆಡಿದ್ರೂ ಭಾರತ ಸೋಲೋದಕ್ಕೆ ಅರ್ಹವಾಗಿತ್ತು- ಅಖ್ತರ್ ಟೀಕೆ

ವಿವಿಎಸ್ ಲಕ್ಷ್ಮಣ್‌ ನೇತೃತ್ವದ ಎನ್‌ಸಿಎ ತಂಡವು ಹೃಷಿಕೇಶ್ ಕಾನಿಟ್ಕರ್ (ಬ್ಯಾಟಿಂಗ್) ಮತ್ತು ಸಾಯಿರಾಜ್ ಬಹುತುಲೆ (ಬೌಲಿಂಗ್) ನ್ಯೂಜಿಲೆಂಡ್ ತಂಡವನ್ನು ಸೇರಿಕೊಳ್ಳಲಿದೆ ಎಂದು ಬಿಸಿಸಿಐ (BCCI) ಮೂಲಗಳು ತಿಳಿಸಿವೆ. ಲಕ್ಷ್ಮಣ್ ಈ ಹಿಂದೆ ಜಿಂಬಾಬ್ವೆ, ಐರ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾದ ಪ್ರವಾಸಗಳಲ್ಲೂ ಟೀಂ ಇಂಡಿಯಾಕ್ಕೆ ತರಬೇತಿ ನೀಡಿದ್ದರು. ಇದನ್ನೂ ಓದಿ: ಪಾಂಡ್ಯ ವ್ಯರ್ಥ ಹೋರಾಟ – ಭಾರತಕ್ಕೆ ಹೀನಾಯ ಸೋಲು, ಇಂಗ್ಲೆಂಡ್ ಫೈನಲ್‍ಗೆ

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಹಾಗೂ ಏಕದಿನ ಸರಣಿಗೆ ಶಿಖರ್ ಧವನ್ ನನ್ನು ಆಯ್ಕೆ ಮಾಡಲಾಗಿದೆ.

Live Tv

Leave a Reply

Your email address will not be published. Required fields are marked *

Back to top button