ಹಾವೇರಿ: ಗ್ರೂಪ್ ಇನ್ಶೂರೆನ್ಸ್ (Group Insurance) ಮಂಜೂರು ಮಾಡಿಕೊಡಲು 3 ಸಾವಿರ ರೂ. ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು (Lokayukta Police) ಸಹಕಾರ ಸಂಘಗಳ ಉಪಬಂಧಕರ ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ (Second Division Assistant) ಬಂಧನ ಮಾಡಿದ್ದಾರೆ.
ಹಾವೇರಿಯ ದೇವಗಿರಿ ಗ್ರಾಮದ ಬಳಿ ಇರುವ ಜಿಲ್ಲಾಧಿಕಾರಿ ಕಚೇರಿಯ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯಲ್ಲಿ ಬಂಧನ ಮಾಡಿದ್ದಾರೆ. ಅಕ್ಕಮ್ಮ ಬಿದರೇರ್ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇದನ್ನೂ ಓದಿ: ರೀಲ್ಸ್ ಮಾಡಲು ಹೋಗಿ ಐಟಿ ಉದ್ಯೋಗಿ ಸಮುದ್ರಪಾಲು
ಮಹದೇವ ಜೇಕಿನಕಟ್ಟಿ ಎಂಬುವರ ವಯೋ ನಿವೃತ್ತಿಯಾಗಿದ್ದು, ಗುಂಪು ವಿಮೆ ಮೊತ್ತ ಬಿಲ್ ಮಾಡಿಕೊಡಲು 3 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಸ್ವೀಕಾರ ಮಾಡುತ್ತಿದ್ದ ವೇಳೆ ಹಾವೇರಿ ಲೋಕಾಯುಕ್ತ ಡಿವೈಎಸ್ಪಿ ಮಧುಸೂದನ್ ನೇತೃತ್ವದಲ್ಲಿ ಟ್ರ‍್ಯಾಪ್ ಮಾಡಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಲೋಕಾಯುಕ್ತ ಪೊಲೀಸರು ಒಪ್ಪಿಸಿದ್ದಾರೆ. ಇದನ್ನೂ ಓದಿ: ಶಾಸಕ ಇಕ್ಬಾಲ್ ಹುಸೇನ್‌ಗೆ ಎದೆನೋವು; ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಿಎಂ
