ಕಾರವಾರ: ರೀಲ್ಸ್ (Reels) ಮಾಡಲು ಹೋಗಿ ಐಟಿ ಉದ್ಯೋಗಿಯೊಬ್ಬ (IT Employee) ಸಮುದ್ರಪಾಲಾದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ (Kumta) ತಾಲೂಕಿನ ಕಡ್ಲೆ ಸಮುದ್ರ (Kadle Beach) ತೀರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಪುಣೆ ಮೂಲದ ಐಟಿ ಕಂಪನಿಯ ಉದ್ಯೋಗಿ ಜೀವನ್ ಭಟ್ಟರಾಯಿ (26) ರೀಲ್ಸ್ ಮಾಡಲು ಹೋಗಿ ಸಮುದ್ರದಲ್ಲಿ ಕಾಣೆಯಾಗಿದ್ದಾರೆ. ಇದನ್ನೂ ಓದಿ: ಶಾಸಕ ಇಕ್ಬಾಲ್ ಹುಸೇನ್‌ಗೆ ಎದೆನೋವು; ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಿಎಂ
ಐದು ಜನ ಸ್ನೇಹಿತರೊಂದಿಗೆ ಕುಮಟಾ ಭಾಗಕ್ಕೆ ಪ್ರವಾಸ ಬಂದಿದ್ದ ಯುವಕ ಖಾಸಗಿ ರೆಸಾರ್ಟ್ನಲ್ಲಿ ಮೂರು ದಿನದಿಂದ ತಂಗಿದ್ದರು. ಇಂದು ಚಕ್ ಔಟ್ ಮಾಡಬೇಕಿದ್ದ ಯುವಕ ಸ್ಬೇಹಿತರ ಜೊತೆ ಕಡ್ಲೆ ಸಮುದ್ರತೀರದಲ್ಲಿ ರೀಲ್ಸ್ ಮಾಡಲು ಹೋಗಿದ್ದಾರೆ. ಈ ವೇಳೆ ಜೀವನ್ ಸಮುದ್ರದಲ್ಲಿ ಇಳಿದಾಗ ಅಲೆಗಳ ಹೊಡೆತಕ್ಕೆ ಕೊಚ್ಚಿಹೋಗಿದ್ದಾನೆ. ಇದನ್ನೂ ಓದಿ: ʻಪ್ರಿಯದರ್ಶಿನಿʼ ಯೋಜನೆ ಉದ್ಘಾಟನೆ ವೇಳೆ ಸಚಿವೆ ಬಿಂದು ಕೃಷ್ಣ ತಲೆ ಮೇಲೆ ಬಿದ್ದ ಬಿಸಿ ಬಿಸಿ ಪಾಯಸ
ಇನ್ನು ಕರಾವಳಿ ಕಾವಲುಪಡೆ, ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದು, ಈವರೆಗೂ ಜೀವನ್ ಪತ್ತೆಯಾಗಿಲ್ಲ. ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಇಂದಿರಾ ಗಾಂಧಿ ಇದ್ದಿದ್ರೆ ಬಿಜೆಪಿ ಬ್ಯಾನ್ ಮಾಡ್ತಿದ್ರು: ವಿವಾದ ಸೃಷ್ಟಿಸಿದ ಅಶೋಕ್ ಗೆಹ್ಲೋಟ್ ಹೇಳಿಕೆ
