ರಾಯಚೂರು: ರಸ್ತೆಬದಿ ನಿಂತಿದ್ದ ಲಾರಿಗೆ (Lorry) ಹಿಂದಿನಿಂದ ಕಾರು (Car) ಡಿಕ್ಕಿ ಹೊಡೆದ ಪರಿಣಾಮ ನಿವೃತ್ತ ಉಪನ್ಯಾಸಕ (Retired Lecturer) ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡಿರುವ ಘಟನೆ ರಾಯಚೂರು (Riachur) ಗಡಿ ತೆಲಂಗಾಣದ ಗುಡೆಬಲ್ಲೂರು ಗ್ರಾಮದ ಬಳಿ ನಡೆದಿದೆ.
ಟೈಯರ್ ರೋಡ್‌ನಲ್ಲಿ ಅಪಘಾತ ಸಂಭವಿಸಿದ್ದು, ರಾಯಚೂರಿನ ನಿವೃತ್ತ ಉಪನ್ಯಾಸಕ ಶೇಖರಪ್ಪ ಗೌಡ (70) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಯಾದಗಿರಿಯಲ್ಲಿನ ಮನೆ ದೇವರು ಕಾಳಬೆಳಗುಂದಿ ಬನದೇಶ್ವರ ದೇವಾಲಯಕ್ಕೆ ತೆರಳಿದ್ದ ಕುಟುಂಬ ವಾಪಸ್ ರಾಯಚೂರಿಗೆ ಮರಳುವಾಗ ಅಪಘಾತ ನಡೆದಿದೆ. ಇದನ್ನೂ ಓದಿ: ಗ್ರೂಪ್ ಇನ್ಶೂರೆನ್ಸ್ ಹಣ ಬಿಡುಗಡೆಗೆ 3 ಸಾವಿರ ರೂ. ಲಂಚ – ದ್ವಿತೀಯ ದರ್ಜೆ ಸಹಾಯಕಿ ಲೋಕಾ ಬಲೆಗೆ
ಅಪಘಾತದಲ್ಲಿ ಶೇಖರಪ್ಪ ಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಕೃಷ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಪ್ರಕರಣ: ಗಿರೀಶ್ ಮಟ್ಟಣ್ಣನವರ್ ವಿರುದ್ಧ ಎಸ್‌ಐಟಿಗೆ ಮಾಸ್ಕ್‌ಮ್ಯಾನ್ ದೂರು
