ಕೊಪ್ಪಳ: ತುಂಗಭದ್ರಾ ಜಲಾಶಯದ ಹೊಸ ಕ್ರಸ್ಟ್ ಗೇಟ್‌ಗಳನ್ನು ಇದೇ ಜೂನ್ 25ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದ್ದಾರೆ.
ಕೊಪ್ಪಳ ತಾಲೂಕಿನ ಮುನಿರಾಬಾದ್‌ಗೆ ಭೇಟಿ ನೀಡಿ, ಜಲಾಶಯದ ಮೇಲ್ಭಾಗ ಹಾಗೂ ಕಾಯ೯ಕ್ರಮ ನಡೆಸುವ ಮೈದಾನವನ್ನು ಪರಿಶೀಲನೆ ನಡೆಸಿ, ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ಹೊಸ ಕ್ರಸ್ಟ್ ಗೇಟಗಳ ಲೋಕಾಪ೯ಣೆ ಕಾಯ೯ಕ್ರಮಕ್ಕೆ ಆಂಧ್ರಪ್ರದೇಶ, ತಮಿಳುನಾಡಿನ ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಸಚಿವರು ಆಗಮಿಸಲಿದ್ದಾರೆ. ಕೇಂದ್ರ ಜಲಸಂಪನ್ಮೂಲ ಸಚಿವರು, ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಸಿದ್ಧತೆಯ ಕುರಿತು ಪರಿಶೀಲನೆ ನಡೆಸಲಾಗಿದ್ದು, ಅದ್ದೂರಿಯಾಗಿ ಕಾಯ೯ಕ್ರಮ ಆಯೋಜಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆಗೆ 18 ಶಾಸಕರನ್ನು ವಿಶ್ವಾಸದಲ್ಲಿ ಇಟ್ಟುಕೊಳ್ಳೋಕೆ ಆಗ್ಲಿಲ್ಲ – ಮಾಗಡಿ ಬಾಲಕೃಷ್ಣ ಟಾಂಗ್

ಇನ್ನೂ ಪರಿಷತ್ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಈಗಾಗಲೇ ಮತದಾನ ಮಾಡಿದ್ದೇವೆ. ನಾವು ಅಥವಾ ವಿರೋಧ ಪಕ್ಷದವರು ಯಾವುದೇ ರೀತಿಯ ಆಪರೇಷನ್ ನಡೆಸಿಲ್ಲ. ಎಲ್ಲವೂ ಸರಿಯಾಗಿ ನಡೆದಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಗೇಟ್‌ಗಳ ತಾಂತ್ರಿಕ ಸಾಮರ್ಥ್ಯ ಹಾಗೂ ಮುಂಬರುವ ಭವ್ಯ ಲೋಕಾರ್ಪಣೆ ಸಮಾರಂಭದ ಪೂರ್ವಸಿದ್ಧತೆಗಳನ್ನು ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲಿಸಿದೆನು.
ಕಳೆದ ವರ್ಷದ ತಾಂತ್ರಿಕ ಅಡಚಣೆಯನ್ನು ಸವಾಲಾಗಿ ಸ್ವೀಕರಿಸಿ, ಮುಂದಿನ 55 ರಿಂದ 60 ವರ್ಷಗಳ ಕಾಲ ಸುದೀರ್ಘ ಬಾಳಿಕೆ ಬರುವ ಅತ್ಯಾಧುನಿಕ ಹೊಸ… pic.twitter.com/nrEJzsS7jZ
— Ramalinga Reddy (@RLR_BTM) June 18, 2026
ಬಿಡದಿ ಟೌನ್‌ಶಿಪ್ ವಿಚಾರಕ್ಕೆ ಸಂಬಂಧಿಸಿದಂತೆ, 2006ರಲ್ಲೇ ಸಮ್ಮಿಶ್ರ ಸರ್ಕಾರ ಈ ಯೋಜನೆ ಕುರಿತು ಕ್ರಮ ಕೈಗೊಂಡಿತ್ತು. ಕ್ರೆಡಿಟ್ ವಾರ್ ಬಗ್ಗೆ ಜನರೇ ತೀರ್ಮಾನಿಸಲಿ ಎಂದಿದ್ದಾರೆ.
ಖಾತೆ ಬದಲಾವಣೆ ಹಾಗೂ ರಾಜಕೀಯ ಬೆಳವಣಿಗೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾನು ಎಂದಿಗೂ ಖಾತೆಗಾಗಿ ಹಂಬಲಿಸಿದವನಲ್ಲ. ನನಗೆ ನೀರಾವರಿ ಖಾತೆ ನೀಡಿದ್ದು, ರೈತರ ಪರವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಸಂತಸದ ವಿಷಯ. ನಾನು ರಾಜೀನಾಮೆ ನೀಡಿ ಯಾರಿಗೂ ಚೆಕ್‌ಮೇಟ್ ಕೊಟ್ಟಿಲ್ಲ. ಮಂತ್ರಿಗಿರಿಯ ಹಿಂದೆ ಬಿದ್ದವನೂ ಅಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಭಟ್ಕಳದಲ್ಲಿ ಲವ್ ಜಿಹಾದ್ ಆರೋಪ – ಅಪಹರಿಸಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ, ಯುವಕ ಅರೆಸ್ಟ್
