ಬೆಂಗಳೂರು: ಕುಮಾರಸ್ವಾಮಿಗೆ (HD Kumaraswamy) 18 ಶಾಸಕರನ್ನು ವಿಶ್ವಾಸದಲ್ಲಿ ಇಟ್ಟುಕೊಳ್ಳೋಕೆ ಆಗಲಿಲ್ಲ ಇನ್ನೇನೂ ಮಾಡ್ತಾರೆ ಎಂದು ಮಾಗಡಿ ಬಾಲಕೃಷ್ಣ (Madagi Balakrishna) ಟಾಂಗ್ ಕೊಟ್ಟಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಕೇಳಿದಂತೆ ಎಲ್ಲರೂ ಆತ್ಮಸಾಕ್ಷಿಯಿಂದ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಆತ್ಮಸಾಕ್ಷಿಗೆ ಮತ ಕೇಳಿದ ಮೇಲೆ ಈಗ ಕುದುರೆ ವ್ಯಾಪಾರದ ಬಗ್ಗೆ ಮಾತನಾಡಬಾರದು. ಕುದುರೆ ವ್ಯಾಪಾರದ ಬಗ್ಗೆ ಮಾತನಾಡಿದರೆ ಅವರ ಶಾಸಕರಿಗೆ ಅವರೇ ಅವಮಾನ ಮಾಡಿದಂತೆ ಆಗುತ್ತದೆ. ಇರುವ 18 ಶಾಸಕರನ್ನು ವಿಶ್ವಾಸದಲ್ಲಿ ಇಟ್ಕೊಳ್ಳೊಕೆ ಆಗ್ಲಿಲ್ಲ ಇನ್ನೇನೂ ಮಾಡ್ತೀರಾ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಮೂವರು ಶಾಸಕರಿಂದ ಅಡ್ಡಮತದಾನ ಆಗಿದೆ, ಶಿಸ್ತುಕ್ರಮ ನಿಶ್ಚಿತ: ಆರ್.ಅಶೋಕ್
ಇಲ್ಲಿ ಯಾರದ್ದು ತಪ್ಪಿಲ್ಲ. ಕುಮಾರಸ್ವಾಮಿ ಕೇಳಿದಂತೆ ಎಲ್ಲರೂ ಆತ್ಮಸಾಕ್ಷಿಯಿಂದ ಮತ ಹಾಕಿದ್ದಾರೆ. ಶಾಸಕರು ಅವರ ಆತ್ಮಕ್ಕೆ ಅನ್ನಿಸಿದಂತೆ ಮತ ಹಾಕಿದ್ದಾರೆ. ಅದನ್ನು ಗೌರವಿಸಬೇಕು. ನಾವು ನಮ್ಮ ಶಾಸಕರನ್ನು ಭದ್ರವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ಕೊಟ್ಟಿದ್ದರು. ಅದರಂತೆ ಸರಿಯಾಗಿ ಇಟ್ಟುಕೊಂಡು ಮತ ಹಾಕಿಸಿದ್ದೀವಿ ಎಂದಿದ್ದಾರೆ.
