ನವದೆಹಲಿ: ನೀವು ಯಶವಂತ್ ಸಿನ್ಹಾ ಅವರ ಧ್ವನಿಯನ್ನು ಕೇಳಿರಬೇಕು. ಆದರೆ ಆಡಳಿತ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿಯ ಧ್ವನಿಯನ್ನು ನಾವು ಎಂದಿಗೂ ಕೇಳಿಲ್ಲ ಎಂದು ರಾಷ್ಟ್ರೀಯ ಜನತಾ ದಳ(RJD) ನಾಯಕ ತೇಜಸ್ವಿ ಯಾದವ್, ದ್ರೌಪದಿ ಮುರ್ಮು ಅವರನ್ನು ತರಾಟೆಗೆ ತೆಗೆದುಕೊಂಡರು.
Advertisement
ರಾಷ್ಟ್ರಪತಿ ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೆ ರಾಷ್ಟ್ರಪತಿ ಭವನದಲ್ಲಿ ಯಾವುದೇ ಪ್ರತಿಮೆ ಬೇಡ. ರಾಷ್ಟ್ರಪತಿಯನ್ನು ಆಯ್ಕೆ ಮಾಡುತ್ತಿದ್ದೇವೆ. ನೀವು ಯಾವಾಗಲೂ ಯಶವಂತ್ ಸಿನ್ಹಾ ಅವರ ಧ್ವನಿಯನ್ನು ಕೇಳಿರಬೇಕು. ಆದರೆ ಆಡಳಿತ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿಯ ಧ್ವನಿಯನ್ನು ನಾವು ಎಂದಿಗೂ ಕೇಳಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ದ್ರೌಪದಿ ಮುರ್ಮು ಗೌರವಿಸುತ್ತೇವೆ, ಸಿನ್ಹಾರನ್ನು ಬೆಂಬಲಿಸುತ್ತೇವೆ: ಎಎಪಿ
Advertisement
Advertisement
ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್‍ಡಿಎ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ದ್ರೌಪದಿ ಮುರ್ಮು ಅವರು ಒಂದೇ ಒಂದು ಸುದ್ದಿಗೋಷ್ಠಿ ನಡೆಸಿಲ್ಲ. ನನ್ನ ಪ್ರಕಾರ ನೀವು ಕೂಡ ಅವರ ಧ್ವನಿಯನ್ನು ಕೇಳಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಮಾಧ್ಯಮದವರಿಗೆ ಪ್ರಶ್ನೆ ಕೇಳಿದರು.
Advertisement
ರಾಷ್ಟ್ರಪತಿ ಚುನಾವಣೆಗೆ ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ RJD ಬೆಂಬಲ ಘೋಷಿಸಿದೆ. ಬಿಹಾರದ ಎಡಪಕ್ಷಗಳು ಮತ್ತು ಕಾಂಗ್ರೆಸ್ ಕೂಡ ಅವರಿಗೆ ಬೆಂಬಲ ನೀಡಿವೆ. RJDಯ ಮಿತ್ರ ಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ), ಚುನಾವಣೆಯಲ್ಲಿ ಮುರ್ಮು ಅವರನ್ನು ಬೆಂಬಲಿಸುವುದಾಗಿ ಹೇಳಿದೆ. ಇದನ್ನೂ ಓದಿ: ಭಾರೀ ಮಳೆಗೆ ಬೆಳಗಾವಿಯ 13 ಸೇತುವೆಗಳು ಜಲಾವೃತ – ಮತ್ತೆ ಪ್ರವಾಹ ಭೀತಿ