Belgaum

ಡಿಕೆಶಿ, ಸಿದ್ದರಾಮಯ್ಯ ಇನ್ನು 20 ವರ್ಷ ನಿರುದ್ಯೋಗಿಗಳು: ಕಟೀಲ್

Published

on

Share this

-ಬಿಜೆಪಿಯಿಂದಲೇ ಕರ್ನಾಟಕ ಕಲ್ಯಾಣವಾಗಿ ಮಾರ್ಪಾಡುತ್ತಿದೆ

ಬೆಳಗಾವಿ: ಕಾಂಗ್ರೆಸ್‍ನ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇನ್ನು 20 ವರ್ಷ ನಿರುದ್ಯೋಗಿಗಳಾಗಿರಬೇಕು. ರಾಜ್ಯದ ಮೂರು ಪಾಲಿಕೆ ಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಬಿಜೆಪಿಯಿಂದಲೇ ಕರ್ನಾಟಕ ಕಲ್ಯಾಣವಾಗಿ ಮಾರ್ಪಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಬೆಳಗಾವಿಯಲ್ಲಿ ಪಾಲಿಕೆ ನೂತನ ಬಿಜೆಪಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ ಬಗ್ಗೆ ರಾಜ್ಯದ ಜನರಲ್ಲಿ ಅಭಿಮಾನ, ನಂಬಿಕೆ ಹೆಚ್ಚುತ್ತಿದೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿದ ಮತದಾರ ಪ್ರಭುಗಳಿಗೆ ಪಕ್ಷದಿಂದ ಅಭಿನಂದನೆ. ಪಾಲಿಕೆಯಲ್ಲಿ ಚುಕ್ಕಾಣಿ ಹಿಡಿಯಲು ಶ್ರಮಿಸಿದ ಕಾರ್ಯಕರ್ತರು, ಪಕ್ಷದ ನಾಯಕರನ್ನೂ ಅಭಿನಂದಿಸುತ್ತೇವೆ. ರಾಷ್ಟ್ರದ ಅಭಿವೃದ್ಧಿ ಚಿಂತನೆಯ ಆಡಳಿತ ಶಿವಾಜಿ ಮಹಾರಾಜರು ಹೊಂದಿದ್ದರು. ಅದೇ ರೀತಿ ಬಿಜೆಪಿ ನಗರಸೇವಕರು ಕಾರ್ಯನಿರ್ವಹಿಸಬೇಕು. ಸರ್ವರ ಏಳಿಗೆ ಬಯಸುವ ಹಿಂದೂ ಸಮಾಜದ ಗೆಲುವು ಇದಾಗಿದೆ. ಬೆಳಗಾವಿ ರಾಜ್ಯದ ಮಾದರಿ ನಗರವಾಗಿ ರೂಪಗೊಳ್ಳಲಿದೆ. ಮೂರು ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಸಾಧನೆ ಮಾಡಿದೆ. ಕಾರ್ಯಕರ್ತರನ್ನು ನಾಯಕರನ್ನಾಗಿಸಲು ಎದುರಿಸಿದ ಚುನಾವಣೆ ಇದು ಎಂದರು.

ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ ಕಟ್ಟಕಡೆಯ ವ್ಯಕ್ತಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಜನರ ಸೇವಕರಾಗಿ ಬೊಮ್ಮಾಯಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳಗಾವಿ ಜನ ನಮ್ಮ ನಿರೀಕ್ಷೆ ಮೀರಿ ಅದ್ಭುತ ಫಲಿತಾಂಶ ನೀಡಿದ್ದಾರೆ. ಸ್ವಚ್ಛ, ದಕ್ಷ ಆಡಳಿತಕ್ಕೆ ನಮ್ಮನ್ನು ಬೆಳಗಾವಿ ನಗರವಾಸಿಗಳು ಗೆಲ್ಲಿಸಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ನಗರವಾಸಿಗಳಿಗೆ ನೀಡಬೇಕು ಎಂದು ನೂತನ ಸದಸ್ಯರಿಗೆ ಕರೆ ನೀಡಿದರು. ಇದನ್ನೂ ಓದಿ: ಒಳ್ಳೆಯ ಕೆಲಸ ಮಾಡಿದ್ದರೆ ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಇಳಿಸುತ್ತಿರಲಿಲ್ಲ: ಡಿಕೆಶಿ

ನಾಳೆ ಭಾರತ್ ಬಂದ್ ವಿಚಾರವಾಗಿ ಮಾತನಾಡಿ, ಇವತ್ತು ರೈತರ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ. ಕಳೆದ ಎರಡು ವರ್ಷದಿಂದ ಇಂತಹ ಹತ್ತಾರು ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ ಇಂದು ರೈತರು, ಜನರು ಸರ್ಕಾರದ ಪರವಾಗಿದ್ದಾರೆ. ಈಗ ಮಾಡುತ್ತಿರುವುದು ರೈತ ವಿರೋಧಿ ಪ್ರತಿಭಟನೆ ಅನಿಸುತ್ತಿದೆ. ನಮ್ಮ ಸರ್ಕಾರ ರೈತರ ಪರವಾಗಿದೆ, ಹತ್ತಾರು ಬಾರಿ ಕೇಂದ್ರ ಸರ್ಕಾರ ಚರ್ಚೆಗೆ ಕರೆದಿದೆ. ಎಲ್ಲಾ ರೈತರೊಂದಿಗೆ ಚರ್ಚೆ ಮಾಡಲು ಕೇಂದ್ರ ಸರ್ಕಾರ ಸಿದ್ಧವಿದೆ ಇದರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು. ಇದನ್ನೂ ಓದಿ: ನಾನು ಕಾಂಗ್ರೆಸ್‍ಗೆ ಹೋಗ್ತೀನೆಂದು ಹೇಳಿಕೆ ಕೊಡುವವರಿಗೆಲ್ಲಾ ತಲೆ ಕೆಟ್ಟಿದೆ: ಶಿವಲಿಂಗೇಗೌಡ

ಸಮಾರಂಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್, ಸಚಿವರಾದ ಗೋವಿಂದ ಕಾರಜೋಳ, ಉಮೇಶ್ ಕತ್ತಿ, ಭೈರತಿ ಬಸವರಾಜ್, ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಮಾಜಿ ಸಂಸದ ಪ್ರಭಾಕರ್ ಕೋರೆ ಸೇರಿ ಹಲವರು ಉಪಸ್ಥಿತಿರಿದ್ದರು. ಇದನ್ನೂ ಓದಿ: ಶಾಲಾ ಶುಲ್ಕ ಪಾವತಿ- ಸರ್ಕಾರದ ನೆರವಿಗೆ ಪೋಷಕರ ಆಗ್ರಹ

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications