ಬೆಂಗಳೂರು: ರಾಜ್ಯದಲ್ಲಿ ಸಿಎಂ (CM) ಬದಲಾವಣೆ, ನಾಯಕತ್ವ ಬದಲಾವಣೆ ಇಲ್ಲ ಎಂದು ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ (RV Deshpande) ತಿಳಿಸಿದ್ದಾರೆ.
ಸಿಎಂ-ಡಿಸಿಎಂ ದೆಹಲಿ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ದೆಹಲಿಗೆ ಸಿಎಂ ಹೋಗಿರೋದು ರಾಜ್ಯಸಭೆ ಎಲೆಕ್ಷನ್ ಅಭ್ಯರ್ಥಿಯ ಆಯ್ಕೆ ವಿಚಾರಕ್ಕೆ. ಎಂಎಲ್‌ಸಿ ಎಲೆಕ್ಷನ್ ಬಗ್ಗೆ ಚರ್ಚೆ, ಕೇಂದ್ರದ ವಿಷಯಗಳ ಕುರಿತು ಕೇಂದ್ರ ಸಚಿವರ ಭೇಟಿಗೆ ಹೋಗಿದ್ದಾರೆ. ಸರ್ಕಾರ ಮತ್ತು ಪಕ್ಷದ ಕೆಲಸದ ಹಿನ್ನೆಲೆ ದೆಹಲಿಗೆ ಹೋಗಿದ್ದಾರೆ ಎಂದರು. ಇದನ್ನೂ ಓದಿ: ನಿಷ್ಕ್ರಿಯವಾಗಿರೋ ಸರ್ಕಾರದ ಆಡಳಿತ ಯಂತ್ರ ದೆಹಲಿಗೆ ಶಿಫ್ಟ್ ಆಗಿದೆ: ಸಿ.ಟಿ.ರವಿ
ಬಿಜೆಪಿ (BJP) ಅವರು ಸುಮ್ಮನೆ ಟೀಕೆ ಮಾಡೋದು ಬೇಡ. ಬಿಜೆಪಿ ಸರ್ಕಾರ ಇದ್ದಾಗ ಬಿಜೆಪಿ ಮಂತ್ರಿಗಳು ದೆಹಲಿಗೆ ಹೋಗಿಲ್ಲವಾ? ಬಿಜೆಪಿಯವರು ಹಾಗೆ ಮಾತಾಡಬಾರದು. ಟೀಕೆ ಟಿಪ್ಪಣಿ ಮಾಡೋವಾಗ ಜವಾಬ್ದಾರಿಯಿಂದ ಮಾಡಬೇಕು. ಪಕ್ಷದ ಆಂತರಿಕ ವಿಚಾರದ ಬಗ್ಗೆ ಯಾರೂ ಮಾತಾಡಬಾರದು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ರಾಜ್ಯ ಸರ್ಕಾರವೇ ಇಲ್ಲ: ಅರಗ ಜ್ಞಾನೇಂದ್ರ
ಸಿಎಂ-ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತಾಡೋದು ನನಗೆ ಗೊತ್ತಿಲ್ಲ. ಸಿಎಂ ಬದಲಾವಣೆ ವಿಚಾರ ಇಲ್ಲ. ಸಿಎಂ ಬದಲಾವಣೆ ಅಂತ ಯಾರು ಹೇಳಿದ್ದಾರೆ? ನೀವೆ ಸೃಷ್ಟಿ ಮಾಡೋದು. ಶಾಸಕರಿಗೆ ಅಭಿಪ್ರಾಯ ಇದೆ, ಆದ್ರೆ ಭಿನ್ನಾಭಿಪ್ರಾಯ ಇಲ್ಲ. ಸಿಎಂ ಬದಲಾವಣೆ ವಿಚಾರ ಇಲ್ಲ. ಸಂಪುಟ ಪುನರ್ ರಚನೆ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಸಿಎಂ ಹೋಗಿದ್ದಾರೋ ಗೊತ್ತಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ನಾನು ಎಲ್ಲಾ ಮುಗಿಸಿದ್ದೇನೆ. 1983ರಿಂದ ಶಾಸಕ ಆಗಿದ್ದೇನೆ. 8 ಜನ ಸಿಎಂ ಜೊತೆ ಕೆಲಸ ಮಾಡಿದ್ದೇನೆ. ನಾನು ಯಾವುದರ ಆಕಾಂಕ್ಷಿ ಅಲ್ಲ. ಪಕ್ಷದ ಸಂಘಟನೆ ವಿಚಾರಕ್ಕೆ ಹೈಕಮಾಂಡ್ ಕರೆದಿರಬಹುದು. ಸಿಎಂ ಬದಲಾವಣೆ ವಿಷಯ ಆದ್ರೆ ನಮಗೆ ಗೊತ್ತಾಗುತ್ತಿರಲಿಲ್ಲವಾ? ಆ ರೀತಿ ಯಾವುದು ಇಲ್ಲ. ಸಿಎಂ ಬದಲಾವಣೆ ನನ್ನ ದೃಷ್ಟಿಯಲ್ಲಿ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಹೇಳಿಕೆಗೆ ವಿರೋಧ – ಮೋದಿಗೆ ಪತ್ರ ಬರೆದು ಮೇಕೆದಾಟು DPR ತಿರಸ್ಕರಿಸುವಂತೆ ವಿಜಯ್ ಒತ್ತಾಯ
