– ವಿವೇಕ ಸ್ಮಾರಕ ಸಾಧಕರಿಗೆ ಒಂದು ಧ್ಯಾನ ಕೇಂದ್ರ
– ಯುವಜನತೆಯೇ ಈ ದೇಶದ ಶಕ್ತಿ ಎಂದ ಪ್ರಧಾನಿ
ಮೈಸೂರು: ಮೈಸೂರಿನ ಕಣ ಕಣದಲ್ಲೂ ಕಲೆ, ಸಂಸ್ಕೃತಿ ಮೇಳೈಸಿದೆ. ಮೈಸೂರು ಸಾಂಸ್ಕೃತಿಕ ಮತ್ತು ಐತಿಹಾಸಿಕ ಕೇಂದ್ರ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬಣ್ಣಿಸಿದರು.
ನಗರದ ಶ್ರೀರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿ ಮಾತನಾಡಿದ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿದರು. ‘ಎಲ್ಲರಿಗೂ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಹೇಳಿದರು. ಭಾಷಣದ ಆರಂಭದಲ್ಲಿ ಚಾಮುಂಡೇಶ್ವರಿ ತಾಯಿಗೆ ನಮನ ಸಲ್ಲಿಸಿದರು. ಇದನ್ನೂ ಓದಿ: ಕರ್ನಾಟಕಕ್ಕೆ ಸಹಾಯ ಮಾಡಿ, ರಾಜ್ಯವನ್ನು ರಕ್ಷಿಸಿ – ಮೋದಿಗೆ ಡಿಕೆಶಿ ಮನವಿ
ನನ್ನ ಬೆಳವಣಿಗೆಯಲ್ಲಿ ರಾಮಕೃಷ್ಣ ಆಶ್ರಮದ ಪ್ರಭಾವ ಬಹಳ ಹೆಚ್ಚಿದೆ. ಮೈಸೂರು ಪವಿತ್ರ ಭೂಮಿ. ಇಲ್ಲಿನ ಎಲ್ಲಾ ಸಂತರಿಗೂ ನನ್ನ ಪ್ರಣಾಮ. ಮೈಸೂರು ಸಾಂಸ್ಕೃತಿಕ, ಐತಿಹಾಸಿಕ ಕೇಂದ್ರ. ದಸರಾ, ಸಂಗೀತ, ಕಲೆ ಬಹಳ ಪ್ರಸಿದ್ಧಿ. ಮೈಸೂರಿನ ಕಣ ಕಣದಲ್ಲೂ ಕಲೆ, ಸಂಸ್ಕೃತಿ ಇದೆ. ರಾಷ್ಟ್ರಕವಿ ಕುವೆಂಪು ಮೈಸೂರಿನಲ್ಲಿದ್ದರು. ಕುವೆಂಪು ಅವರಿಗೂ ರಾಮಕೃಷ್ಣ ಆಶ್ರಮಕ್ಕೂ ಸಂಪರ್ಕ ಇತ್ತು. ಜೀವನದಲ್ಲಿ ಪರೀಕ್ಷೆಗಳು ದಿನವೂ ಬರುತ್ತವೆ. ಪರೀಕ್ಷೆ ಎದುರಿಸಿಕೊಂಡೇ ಸಾಧನೆ ಮಾಡಬೇಕು. ಈ ಸಾಧನೆಗೆ ಸಂತರ ಆಶೀರ್ವಾದ, ಪ್ರೇರಣೆ ಬಹಳ ಮುಖ್ಯ. ಸ್ವಾಮಿ ವಿವೇಕಾನಂದರನ್ನು ಮೈಸೂರು ಮಹಾರಾಜರು ಮೈಸೂರಿಗೆ ಕರೆಸಿದ್ದರು. ಸ್ವಾಮಿ ವಿವೇಕಾನಂದರು ಭಾರತೀಯ ಯುವಜನರ ಚೇತನ ಎಂದು ತಿಳಿಸಿದರು.
ವಿವೇಕ ಸ್ಮಾರಕ ಸಾಧಕರಿಗೆ ಒಂದು ಧಾನ್ಯ ಕೇಂದ್ರ. ಯುವಕರಿಗೆ ರಾಷ್ಟ್ರವೇ ಪ್ರಥಮ. ದೇಶ ಕಟ್ಟುವ ಕೆಲಸ ಚಿಂತನೆ. ಭಾರತೀಯ ಯುವಕರು ಹಿಂದೆ ಗುಲಾಮಿ ಮನಃಸ್ಥಿತಿಯಲ್ಲಿದ್ದರು. ಈಗ ಯುವಕರು ಮನಸ್ಥಿತಿಯಿಂದ ಹೊರ ಬಂದಿದ್ದಾರೆ. ಯುವಕರ ಮನಃಸ್ಥಿತಿ ಬದಲಾದ ಕಾರಣ ಇಡೀ ದೇಶದ ಪ್ರಗತಿ ಬದಲಾಗಿದೆ. ಭಾರತ ಇವತ್ತು ಎಲ್ಲಾ ಕ್ಷೇತ್ರದಲ್ಲಿ ಪ್ರಪಂಚದ ಮುಂದೆ ಬೆಳಗಲು ಕಾರಣ ಯುವಜನರು. ಎಲ್ಲಾ ವಲಯದಲ್ಲೂ ಯುವಸಮೂಹದ ಪ್ರಗತಿಯ ಹೆಜ್ಜೆ ಗುರುತು ಮೂಡಿಸಿದ್ದಾರೆ. ಯುವಸಮೂಹದ ಶಕ್ತಿಯೇ ದೇಶದ ಶಕ್ತಿ ಆಗುತ್ತದೆ ಎಂದರು. ಇದನ್ನೂ ಓದಿ: ರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಮೋದಿ
ಭಾರತದಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿವೆ. ಕಳೆದ 12 ವರ್ಷಗಳಲ್ಲಿ ದೇಶದ ಹಲವು ವಿವಿಗಳು, ಸಾವಿರಾರು ಕಾಲೇಜುಗಳು, ಹಲವು ಐಐಟಿಗಳನ್ನು ಸ್ಥಾಪಿಸಲಾಗಿದೆ. ಮೆಡಿಕಲ್ ಕಾಲೇಜ್ ಸಂಖ್ಯೆ ಹೆಚ್ಚಾಗಿವೆ. ಯುವಸಮೂಹಕ್ಕಾಗಿ ಇಡೀ ಶಿಕ್ಷಣ ವ್ಯವಸ್ಥೆಯನ್ನು ದೊಡ್ಡಮಟ್ಟದಲ್ಲಿ ಸುಧಾರಿಸಿದ್ದೇವೆ ಎಂದು ತಿಳಿಸಿದರು.

