ನಟನೆಗಿಂತಲೂ ಬಾಯ್‌ಫ್ರೆಂಡ್ಸ್ ವಿಚಾರಕ್ಕೆ ಹೆಚ್ಚು ಸುದ್ದಿಯಾಗುವ ನಟಿ ಅಂದ್ರೆ ಅದು (Ananya Panday) ಅನನ್ಯಾ ಪಾಂಡೆ.
ಕಳೆದ ಎರಡು ವರ್ಷಗಳ ಹಿಂದೆ ಬಾಲಿವುಡ್ ನಟ ಆದಿತ್ಯಾ ರಾಯ್ ಕಪೂರ್ ಜೊತೆ ಅನನ್ಯಾ ಪ್ರೀತಿಯಲ್ಲಿರೋದು ಜಗಜ್ಜಾಹೀರಾಗಿತ್ತು. ಎರಡೇ ವರ್ಷದಲ್ಲಿ ಸಂಬಂಧ ಹಳಸಿತ್ತು. ಬಳಿಕ ಅಮೆರಿಕ ಮೂಲದ ಮಾಡೆಲ್ ವಾಕರ್ ಬ್ಲಾಂಕೊ ಜೊತೆ ಅನನ್ಯಾ ಪ್ರೀತಿ ಶುರುವಾಗಿತ್ತು. ಇದೀಗ ಆತನೊಂದಿಗೂ ಅನನ್ಯಾ ಬ್ರೇಕಪ್ (Love Breakup) ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಇದನ್ನೂ ಓದಿ: ತಮ್ಮ ಫೇವರೇಟ್ ಪರ್ಸನ್‌ನಿಂದ ರಾಖಿ ಕಟ್ಟಿಸಿಕೊಂಡ ರಾಕಿಭಾಯ್
ಬಾಲಿವುಡ್ ಅಂಗಳದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ. ಕಳೆದ ವಾರವೇ ವಾಕರ್ ಬ್ಲಾಂಕೊ ಜೊತೆ ಸಂಬಂಧ ಅಂತ್ಯಗೊಳಿಸಿದ್ದಾರಂತೆ ಅನನ್ಯಾ ಪಾಂಡೆ. ಪರಸ್ಪರ ಒಪ್ಪಿಗೆಯಿಂದಲೇ ಇಬ್ಬರೂ ಬೇರಾಗಿದ್ದಾರೆ ಎನ್ನಲಾಗಿದೆ. ಅಲ್ಲಿಗೆ ಎರಡನೇ ಬಾರಿ ಅನನ್ಯಾಗೆ ಲವ್ ಬ್ರೇಕಪ್ ಆಗಿದೆ.
ಕಳೆದ ಬಾರಿ ಅನನ್ಯಾ ಹುಟ್ಟುಹಬ್ಬದಂದು ಇದೇ ವಾಕರ್ “ ಆನೀ.. ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಪೋಸ್ಟ್ ಹಾಕಿದ್ದು ಚರ್ಚೆಗೆ ಕಾರಣವಾಗಿತ್ತು. ಇಬ್ಬರ ಮಧ್ಯದ ಸಂಬಂಧವನ್ನ ಈ ಪೋಸ್ಟ್ ಭದ್ರವಾಗಿಸಿತ್ತು. ಅಲ್ಲಿಂದ ವದಂತಿಗೆ ರೆಕ್ಕೆಪುಕ್ಕ ಜೋರಾಗಿತ್ತು. ಸುಮಾರು ಎರಡು ವರ್ಷಗಳ ಕಾಲ ಇಬ್ಬರ ನಡುವೆ ಪ್ರೀತಿ ಇತ್ತು ಎನ್ನಲಾಗುತ್ತೆ. ಇದೀಗ ಅನನ್ಯಾ ಕಟ್ಟಿರೋ ಎರಡನೇ ಪ್ರೀತಿ ಸೌಧವೂ ಕುಸಿದುಬಿದ್ದಿರುವ ವದಂತಿ ಹಬ್ಬಿದೆ. ಇದನ್ನೂ ಓದಿ: ಪರಸ್ಪರ ರಾಖಿ ಕಟ್ಟಿ ಸಹೋದರಿಯೊಂದಿಗೆ ರಕ್ಷಾಬಂಧನ ಸೆಲೆಬ್ರೇಷನ್; ಟ್ರೋಲ್‌ಗಳಿಗೆ ಕೃತಿ ಟಾಂಗ್
