ರಕ್ಷಾಬಂಧನದಂದು ತಮ್ಮ ಪ್ರೀತಿಯ ಅಣ್ಣ ಯಶ್‌ಗೆ (Yash) ತಂಗಿ ನಂದಿನಿ ರಾಖಿ ಕಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಮುದ್ದಾಗಿ ಹಬ್ಬ (Nandini Rahul) ಸೆಲೆಬ್ರೇಟ್ ಮಾಡಿದ್ದಾರೆ.
ಇತ್ತೀಚೆಗೆ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ನಟ ಯಶ್ ಭಾಗಿಯಾಗಿದ್ದರು. ಈ ವೇಳೆ ನಂದಿನಿ ಹೆಸರನ್ನು ಕೇಳುತ್ತಿದ್ದಂತೆ, ʼನನ್ನ ತಂಗಿಯ ಹೆಸರು ನಂದಿನಿ. ಆಕೆ ಈ ಜಗತ್ತಿನಲ್ಲೇ ನನ್ನ ಫೇವರೇಟ್ ಪರ್ಸನ್ʼ ಎಂದು ಯಶ್ ಹೇಳಿದ್ದರು. ಈ ಮಾತಿನ ಬಳಿಕ ಬಾಲಿವುಡ್‌ನಲ್ಲೂ ನಂದಿನಿ ಯಾರು ಎಂಬ ಕುತೂಹಲ ಶುರುವಾಗಿತ್ತು.
ಹೌದು, ನಂದಿನಿ ಯಶ್ ಅವರ ಮುದ್ದಿನ ತಂಗಿ. ಪ್ರತಿ ವರ್ಷ ರಕ್ಷಾಬಂಧನದಂದು ಅಣ್ಣನಿಗೆ ರಾಖಿ ಕಟ್ಟುವುದನ್ನು ನಂದಿನಿ ಮಿಸ್ ಮಾಡೋದಿಲ್ಲ. ಯಶ್ ಕೂಡ ಎಷ್ಟೇ ಬ್ಯುಸಿಯಾಗಿದ್ದರೂ ತಂಗಿಯಿಂದ ರಾಖಿ ಕಟ್ಟಿಸಿಕೊಳ್ಳುವುದನ್ನು ತಪ್ಪಿಸುವುದಿಲ್ಲ.
ಅದರಂತೆ ಈ ವರ್ಷವೂ ರಕ್ಷಾಬಂಧನದ ಪ್ರಯುಕ್ತ ನಂದಿನಿ ತಮ್ಮ ಅಣ್ಣ ರಾಕಿಭಾಯ್‌ಗೆ ರಾಖಿ ಕಟ್ಟಿದ್ದಾರೆ. ಈ ವಿಶೇಷ ಕ್ಷಣದ ಫೋಟೋಗಳನ್ನು ನಂದಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಧಾರವಾಡ | ಪತ್ನಿ ಕೊಂದು ತಾನೂ ನೇಣಿಗೆ ಶರಣಾದ ಪತಿ

ಅಣ್ಣನ ಮೇಲಿನ ಪ್ರೀತಿಯನ್ನು ಬರಹದ ಮೂಲಕ ಹಂಚಿಕೊಂಡಿರುವ ನಂದಿನಿ, ತಮ್ಮಿಬ್ಬರ ಬಂಧ ಜೀವನದ ಅತ್ಯಂತ ಅಮೂಲ್ಯವಾದ ಸಂಬಂಧಗಳಲ್ಲಿ ಒಂದು ಎಂದು ಹೇಳಿದ್ದಾರೆ.
ʼನಮ್ಮ ನಡುವೆ ಎಷ್ಟೇ ದೂರವಿದ್ದರೂ, ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ, ಯಾವುದೇ ಪರಿಸ್ಥಿತಿ ಬಂದರೂ ನಾವು ಹಂಚಿಕೊಂಡಿರುವ ಈ ಬಂಧವನ್ನು ಯಾವುದೂ ಬದಲಾಯಿಸಲು ಸಾಧ್ಯವಿಲ್ಲʼ ಎಂದು ನಂದಿನಿ ಭಾವುಕರಾಗಿದ್ದಾರೆ.
ಅಣ್ಣನ ಕುರಿತು ನಂದಿನಿ ಮಾತು
ಕೆಲವು ಸಂಬಂಧಗಳು ಕೇವಲ ರಕ್ತ ಸಂಬಂಧದಿಂದ ಮಾತ್ರ ರೂಪುಗೊಳ್ಳುವುದಿಲ್ಲ. ಜೀವನಪರ್ಯಂತ ಜೊತೆಗಿರುವ ನೆನಪುಗಳು, ಪ್ರೀತಿ, ಪರಸ್ಪರ ಅರ್ಥ ಮಾಡಿಕೊಳ್ಳುವಿಕೆ ಮತ್ತು ಯಾವುದೇ ಸಂದರ್ಭದಲ್ಲೂ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುವುದರಿಂದ ಆ ಬಂಧ ಮತ್ತಷ್ಟು ಗಟ್ಟಿಯಾಗುತ್ತದೆ. ಇದನ್ನೂ ಓದಿ: ಪಾಕ್‌ನ ಐಎಸ್‌ಐಗೆ ಸೂಕ್ಷ್ಮ ಮಾಹಿತಿ, ಸಿಮ್‌ಗಳನ್ನು ರವಾನಿಸುತ್ತಿದ್ದ ದಂಪತಿ ಅರೆಸ್ಟ್
ನಮ್ಮ ಬಂಧವೂ ನನ್ನ ಜೀವನದ ಅತ್ಯಂತ ಅಮೂಲ್ಯವಾದ ಸಂಬಂಧಗಳಲ್ಲಿ ಒಂದಾಗಿದೆ. ನಿನ್ನನ್ನು ತುಂಬಾ ಪ್ರೀತಿಸುವ ಮತ್ತು ಜೀವನದ ಪ್ರತಿಯೊಂದು ಹಂತದಲ್ಲೂ ನಿನ್ನ ಬೆನ್ನಿಗೆ ನಿಲ್ಲುವ ಒಬ್ಬ ಸಹೋದರಿ ಯಾವಾಗಲೂ ನಿನಗಿರುತ್ತಾಳೆ. ಹ್ಯಾಪಿ ರಕ್ಷಾ ಬಂಧನ ಭಯ್ಯಾ ಎಂದು ನಂದಿನಿ ಯಶ್‌ಗೆ ಶುಭ ಹಾರೈಸಿದ್ದಾರೆ.
ಅಣ್ಣ-ತಂಗಿಯ ಈ ಮುದ್ದಾದ ಬಾಂಧವ್ಯದ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
