ಜಾಹಿರಾತು ವಿವಾದ ಮತ್ತು ಟ್ರೋಲ್‌ಗಳ ನಡುವೆ ಕೃತಿ ಸನೋನ್ (Kriti Sanon) ರಕ್ಷಾಬಂಧನದಂದು (Raksha Bandhan)ಮತ್ತೊಂದು ಪೋಸ್ಟ್ ಹಾಕಿ ಸಖತ್ ವೈರಲ್ ಆಗುತ್ತಿದ್ದಾರೆ.
ಇತ್ತೀಚೆಗೆ ಜ್ಯುವೆಲ್ಲರಿ ಬ್ರ‍್ಯಾಂಡ್ ʻಜಿವಾʼ ರಕ್ಷಾಬಂಧನ ಜಾಹೀರಾತಿನಲ್ಲಿ ಕೃತಿ ಸನೋನ್ ಧರಿಸಿದ್ದ ಉಡುಪಿನ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಬ್ರಾಲೆಟ್ ಶೈಲಿಯ ಬ್ಲೌಸ್, ಕೇಪ್ ಹಾಗೂ ಸ್ಕರ್ಟ್‌ನಲ್ಲಿ ನಟಿಯ ಲುಕ್ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಹಬ್ಬದ ಸಾಂಪ್ರದಾಯಿಕತೆಯನ್ನು ಗಮನದಲ್ಲಿಟ್ಟುಕೊಂಡು ಉಡುಪು ಇರಬೇಕಿತ್ತು ಎಂದು ಕೆಲವರು ಟೀಕಿಸಿದ್ದರು. ಈ ವಿಚಾರಕ್ಕೆ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಕೂಡ ಪ್ರತಿಕ್ರಿಯಿಸಿ ಕೃತಿ ಅವರ ಉಡುಪು ಆಯ್ಕೆಯನ್ನು ಪ್ರಶ್ನಿಸಿದ್ದರು. ಕೃತಿ ಕೂಡ ‘ನಿಜವಾದ ಸಂಸ್ಕೃತಿ ಹಾಕುವ ಬಟ್ಟೆಯಲ್ಲಲ್ಲ’ ಕಂಗನಾಗೆ ಟಕ್ಕರ್ ನೀಡಿದ್ದರು.
ಇದೀಗ ರಕ್ಷಾಬಂಧನದ ಸಂದರ್ಭದಲ್ಲಿ ಕೃತಿ ತಮ್ಮ ತಂಗಿ ನೂಪುರ್ ಸನೋನ್ ಪರಸ್ಪರ ರಾಖಿ ಕಟ್ಟಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ, ‘ಎಲ್ಲರಿಗೂ ಹ್ಯಾಪಿ ರಾಖಿ’ ಎಂದು ಬರೆದಿದ್ದಾರೆ. ಕೃತಿ ಅವರ ಈ ಪೋಸ್ಟ್ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.ಇದನ್ನೂ ಓದಿ: ಅಪ್ಪನ 60ನೇ ಬರ್ತ್‌ಡೇ ಆಚರಣೆಗೆ ನೇಪಾಳಕ್ಕೆ ಹೋಗಿದ್ದರು: ನಾಪತ್ತೆಯಾದ ತಂದೆ-ತಾಯಿ ನೆನೆದು ಪುತ್ರಿ ಕಣ್ಣೀರು
ರಕ್ಷಾಬಂಧನದ ದಿನ ಸಹೋದರಿ ನೂಪುರ್ ಜೊತೆಗಿನ ಫೋಟೋ ಹಂಚಿಕೊಂಡಿರುವ ಕೃತಿ ಸನೋನ್, ‘ರಾಖಿ ಫ್ಯಾಷನ್ ಕಮಿಟಿ’ ಎಂಬ ಸಾಲಿನ ಮೂಲಕ ತಮ್ಮದೇ ಸ್ಟೈಲ್‌ನಲ್ಲಿ ಟ್ರೋಲ್‌ಗಳಿಗೆ ಉತ್ತರ ಕೊಟ್ಟಿದ್ದಾರೆ.ಇದನ್ನೂ ಓದಿ: ಕರ್ನಾಟಕದ ಬಳಿಕ ಪಂಜಾಬ್‌ನಲ್ಲೂ ಕೃತಕ ಪನ್ನೀರ್ ಉತ್ಪಾದನೆ, ಮಾರಾಟ ಬ್ಯಾನ್
