ನವದೆಹಲಿ: ನೇಪಾಳದ (Nepal Flood) ಭೀಕರ ಜಲಪ್ರಳಯದ ಬಳಿಕ ನಾಪತ್ತೆಯಾಗಿರುವ ಅಪ್ಪ-ಅಮ್ಮನನ್ನು ನೆನೆದು ಮಗಳು ಕಣ್ಣೀರಿಟ್ಟಿದ್ದಾರೆ.
ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹ ಮತ್ತು ಭೂಕುಸಿತದ ನಂತರ ಕಾಣೆಯಾದ ಸುಮಾರು 1,400 ಜನರಲ್ಲಿ ದೀಪಕ್ ಮತ್ತು ಅವರ ಪತ್ನಿ ಮಧು ಅಹುಜಾ ಕೂಡ ಸೇರಿದ್ದಾರೆ. ಇವರು ಅಮೆರಿಕದ ನಾಗರಿಕರು ಮತ್ತು ಭಾರತದ ಸಾಗರೋತ್ತರ ನಾಗರಿಕರು (OCI) ಕಾರ್ಡ್ ಹೊಂದಿದ್ದರು. ಇದನ್ನೂ ಓದಿ: ಟಿಬೆಟ್ ಗಡಿಯಲ್ಲಿ ಒಡೆದ ಸರೋವರ, ಮತ್ತೆ ಪ್ರವಾಹ ಭೀತಿ: ನೇಪಾಳದಲ್ಲಿ ಹೈ ಅಲರ್ಟ್, ರಕ್ಷಣಾ ಕಾರ್ಯಾಚರಣೆ ಸ್ಥಗಿತ
ದೀಪಕ್ ಅವರ 60 ನೇ ಹುಟ್ಟುಹಬ್ಬದಂದು ಪವಿತ್ರ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಅವರ ಬಹುನಿರೀಕ್ಷಿತ ಆಸೆಯನ್ನು ಪೂರೈಸಲು ಈ ದಂಪತಿ ಅಮೆರಿಕದಿಂದ ಪ್ರಯಾಣ ಬೆಳೆಸಿದ್ದರು. ಇಶಾ ಸೇಕ್ರೆಡ್ ವಾಕ್ಸ್ ಮತ್ತು ಟ್ರೆಕ್ಕರ್ಸ್ ಸೊಸೈಟಿಯೊಂದಿಗೆ ಗ್ರೂಪ್ ಎಸ್ 3 ಅಡಿಯಲ್ಲಿ ಟಿಬೆಟ್‌ನ ಸಾಗಾ ತಲುಪಿದ್ದರು. ಅಲ್ಲಿ ಅವರು ತಮ್ಮ ಗ್ರೂಪ್‌ನೊಂದಿಗೆ ಸದ್ಗುರುಗಳನ್ನು ಭೇಟಿಯಾದರು. ನಂತರ ಅಮೆರಿಕಗೆ ವಾಪಸ್ ಆಗಲು ಗಡಿಯ ಕಡೆಗೆ ದಕ್ಷಿಣಕ್ಕೆ ಹೋಗುತ್ತಿದ್ದಾಗ, ಹವಾಮಾನ ಪರಿಸ್ಥಿತಿಯು ಅವರ ಪ್ರಯಾಣಕ್ಕೆ ಅಡ್ಡಿಪಡಿಸಿತು.
ಗೈರಾಂಗ್ ಬಂದರಿನ ವಲಸೆ ಪೋಸ್ಟ್‌ನಲ್ಲಿ ಸ್ಥಳೀಯ ಸಮಯ ಬೆಳಗ್ಗೆ 9 ರ ಸುಮಾರಿಗೆ ಅಹುಜಾ ಕುಟುಂಬವನ್ನು ಕೊನೆಯದಾಗಿ ಪತ್ತೆಹಚ್ಚಲಾಯಿತು. ಕೆಲವು ನಿಮಿಷಗಳ ನಂತರ, ಧಾರಾಕಾರ ಮಳೆ ಮತ್ತು ಹಿಮನದಿ ಸರೋವರದ ಸ್ಫೋಟದಿಂದ ಉಂಟಾದ ಬೃಹತ್ ಪ್ರವಾಹವು ಆ ಪ್ರದೇಶವನ್ನು ಆವರಿಸಿತು. ರಸ್ತೆಗಳು, ವಿದ್ಯುತ್ ಮತ್ತು ದೂರಸಂಪರ್ಕ ಕಡಿತಗೊಂಡಿತು.
ತಮ್ಮ ಪೋಷಕರು ಗಡಿ ಠಾಣೆಯ ಚೀನಾದ ಬದಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಭಾವಿಸಿರುವ ಪುತ್ರಿಯರಾದ ಶ್ರೇಯಾ ಮತ್ತು ಆಶ್ನಾ, ಅಂತರರಾಷ್ಟ್ರೀಯ ರಾಯಭಾರ ಕಚೇರಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ. ಇದನ್ನೂ ಓದಿ: ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ ದುರಂತದ ಪ್ರಭಾವ – ನೇಪಾಳ ಜಲಪ್ರಳಯದಲ್ಲಿ ಬಲಿಯಾದವರ ಸಂಖ್ಯೆ 469ಕ್ಕೆ ಏರಿಕೆ
ಅಪ್ಪ-ಅಮ್ಮ ಕೈಲಾಸ ಯಾತ್ರೆಯ ಕೊನೆಯಲ್ಲಿದ್ದರು. ಮನೆಗೆ ಮರಳಲು ಸಾಗಾವನ್ನು ಬಿಡುತ್ತಿದ್ದರು. ಇಶಾ ಫೌಂಡೇಶನ್ ಪ್ರಕಾರ ಅವರು ನೇಪಾಳದ ಸ್ಥಳೀಯ ಸಮಯ ಬೆಳಗ್ಗೆ 9 ಗಂಟೆಗೆ ಟಿಬೆಟ್ ಮತ್ತು ನೇಪಾಳದ ಗಡಿಯನ್ನು ತಲುಪಿದರು. ಅವರು ಕೊನೆಯದಾಗಿ ಗೈರಾಂಗ್ ಬಂದರು ಗಡಿ ದಾಟುವ ಕಚೇರಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಅವರು ಅಲ್ಲಿಗೆ ಬಂದ ಕೆಲವೇ ನಿಮಿಷಗಳ ನಂತರ ಬಂದರು ಕಚೇರಿಗೆ ಪ್ರವಾಹ ಅಪ್ಪಳಿಸಿದೆ ಎಂದು ಹೇಳಲಾಗುತ್ತದೆ ಎಂದು ಶ್ರೇಯಾ ಕಣ್ಣೀರಿಟ್ಟಿದ್ದಾರೆ.
ಅಂದು ನಾವು ನಮ್ಮ ಪೋಷಕರೊಂದಿಗೆ ಮಾತನಾಡಿ ನಿದ್ರೆಗೆ ಜಾರಿದೆವು. ಪ್ರವಾಹದ ಸುದ್ದಿ ಕೇಳಿ ಎಚ್ಚರವಾದೆವು. ಅವರು ಇಶಾ ಫೌಂಡೇಶನ್‌ನೊಂದಿಗೆ ಇರುವುದರಿಂದ, ಅವರು ಪ್ರವಾಹಕ್ಕೆ ಸಿಲುಕಿದ ಗುಂಪಿನ ಭಾಗವಾಗಿದ್ದಾರೆ ಎಂದು ಫೌಂಡೇಶನ್ ಇಮೇಲ್ ಮೂಲಕ ನಮಗೆ ತಿಳಿಸಿತು ಎಂದು ಶ್ರೇಯಾ ಹೇಳಿದ್ದಾರೆ.
