– ಆಸ್ಪತ್ರೆಗೆ ತಲುಪುವುದಕ್ಕೆ ಟೈಮ್‌ಲೈನ್; ಸಮಯ ಮೀರಿದ್ರೆ ಕಂಪನಿಗೆ ದಂಡ
ಬೆಂಗಳೂರು: 108 ಅಂಬುಲೆನ್ಸ್ (108 Ambulance) ನಿರ್ವಹಣೆ ಮತ್ತೆ ಖಾಸಗಿ ಅವರಿಗೆ ನೀಡೋದಕ್ಕೆ ಸರ್ಕಾರ ನಿರ್ಧರಿಸಿದೆ. ಅಂಬುಲೆನ್ಸ್ ಸಂಬಂಧ ಆರೋಗ್ಯ ಇಲಾಖೆ ಹೊಸ ಪಾಲಿಸಿ ಮಾಡಿದೆ. ಆಸ್ಪತ್ರೆ ತಲುಪೋದಕ್ಕೆ ಸಮಯ ಫಿಕ್ಸ್ ಮಾಡಿದ್ದು, ಸಮಯ ಮೀರಿದ್ರೆ ಗುತ್ತಿಗೆ ಪಡೆದ ಕಂಪನಿಗೆ ದಂಡ ಹಾಕೋದಕ್ಕೆ ನಿರ್ಧಾರ ಮಾಡಲಾಗಿದೆ.
108 ಅಂಬುಲೆನ್ಸ್ ನಿರ್ವಹಣೆಗೆ ಹೊಸ ಪಾಲಿಸಿ ಮಾಡೋದಕ್ಕೆ ಸರ್ಕಾರ ಮುಂದಾಗಿದೆ. ಹೊಸ ಪಾಲಿಸಿಯಲ್ಲಿ 108 ಅಂಬುಲೆನ್ಸ್ ಅನ್ನು ಖಾಸಗಿ ಅವರಿಗೆ ನೀಡೋದಕ್ಕೆ ನಿರ್ಧಾರ ಮಾಡಲಾಗಿದೆಯಂತೆ. ಶೀಘ್ರದಲ್ಲೇ ಟೆಂಡರ್ ಕರೆಯಲಿದ್ದು, ಟೆಂಡರ್‌ನಲ್ಲಿ ಯಾವ ಕಂಪನಿಯಾದರೂ ಭಾಗವಹಿಸಬಹುದು ಅಂತಾ ಸಚಿವ ಖಾದರ್ ತಿಳಿಸಿದ್ದಾರೆ. 75 ಅಂಬುಲೆನ್ಸ್‌ಗಳು ಇದ್ದು, 450 ಹೊಸದಾಗಿ ಅಂಬುಲೆನ್ಸ್ ಖರೀದಿ ಮಾಡಲಿದ್ದಾರಂತೆ. ಇದನ್ನೂ ಓದಿ: ಕಣ್ಣೀರಿಟ್ಟು ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಾಗೇಂದ್ರ
ಕಳೆದ ಬಾರಿ ಆರೋಗ್ಯ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಜಿವಿಕೆ ಸಂಸ್ಥೆಗೆ ಕೊಡಲ್ಲ. ಸರ್ಕಾರವೇ 108 ಅಂಬುಲೆನ್ಸ್ ನಿರ್ವಹಣೆ ಮಾಡುತ್ತೇವೆ ಅಂದಿದ್ದರು. ಈಗ ಖಾದರ್ ನೂತನ ಆರೋಗ್ಯ ಸಚಿವರು ಆದ ಮೇಲೆ ಟೆಂಡರ್ ನೀಡೋದಕ್ಕೆ ಮುಂದಾಗಿದ್ದಾರೆ.
ಅಂಬುಲೆನ್ಸ್ ಚಾಲಕರಿಗೆ ಟೈಮ್‌ಲೈನ್ ನೀಡಲಿದ್ದು, ಗ್ರಾಮೀಣ ಭಾಗದಲ್ಲಿ 10 ನಿಮಿಷಕ್ಕೆ ಆಸ್ಪತ್ರೆ ತಲುಪಬೇಕು. ನಗರ ಪ್ರದೇಶದಲ್ಲಿ 15 ರಿಂದ 20 ನಿಮಿಷದಲ್ಲಿ ಆಸ್ಪತ್ರೆ ತಲುಪಬೇಕು. ಸಮಯ ಮೀರಿದರೆ ಟೆಂಡರ್ ಪಡೆದ ಕಂಪನಿಗೆ 5 ರಿಂದ 10 ಸಾವಿರ ದಂಡ ಹಾಕೋದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ನಿಗಮ ಮಂಡಳಿಯಲ್ಲಿ ಅವಕಾಶ ನೀಡಲು ಸಚಿವ ಸ್ಥಾನ ವಂಚಿತ ಶಾಸಕರ ಮನವಿ
