ಶಂಭುಕನ ಹತ್ಯೆ ಮಾಡಿದ ರೀತಿ ಈಗ ಆಗಲ್ಲ.. ಸಂವಿಧಾನ ನಮ್ಮ ರಕ್ಷಣೆಗಿದೆ
– ಮನುವಾದಿಗಳಿಗೆ ನಾವು ಬಗ್ಗಲ್ಲ ಅಂತ ವಾಗ್ದಾಳಿ
ಬೆಂಗಳೂರು: ಸಿಎಂ ಡಿ.ಕೆ.ಶಿವಕುಮಾರ್ ಸಂಪುಟದ ಮೊದಲ ವಿಕೆಟ್ ಉರುಳಿಬಿದ್ದಿದೆ. ಕಣ್ಣೀರಿಟ್ಟು ಬಿ.ನಾಗೇಂದ್ರ (B.Nagendra) ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು.
ದೆಹಲಿಯಿಂದ ವಾಪಾಸಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಾಗೇಂದ್ರ, ಸದನ ನಡೆಯೋಕೆ ವಿಪಕ್ಷಗಳು ಬಿಡಲಿಲ್ಲ. ಸದನವನ್ನು ಹಾಳು ಮಾಡಿದರು. ಸಂವಿಧಾನ ವಿರೋಧಿಗಳು ವಿಪಕ್ಷಗಳು. ವಿಪಕ್ಷಗಳು ಈಗಲೂ ಮನುಸ್ಮೃತಿ ಜಾರಿಗೆ ಪ್ರಯತ್ನ ಮಾಡ್ತಾ ಇದ್ದಾರೆ. ಇದು ವೇದ ಕಾಲ ಅಲ್ಲ. ಪುರಾಣ ಕಾಲ ಅಲ್ಲ. ಸಂವಿಧಾನ ಕಾಲ, ಅಂಬೇಡ್ಕರ್ ಯುಗ ಇದು. ಉತ್ತರಕಾಂಡದಲ್ಲಿ ಶಂಭುಕ ಹತ್ಯೆಯಾಯ್ತು. ಇವತ್ತು ಶಂಭುಕ ಹತ್ಯೆ ಆಗಲ್ಲ. ರಕ್ಷಣೆಗೆ ಸಂವಿಧಾನ ಇದೆ. ಮನುಸ್ಮೃತಿಗಳು ಶಂಭುಕ ಹತ್ಯೆ ಮಾಡಿದ ರೀತಿ ಆಗಲ್ಲ. ದಲಿತರು, ಕ್ಷುದ್ರರು, ಆದಿವಾಸಿಗಳು, ಅಲ್ಪಸಂಖ್ಯಾತರು ಬದುಕ ಬಾರದು ಅನ್ನೋದು ಮನುಸ್ಮೃತಿ ಬಿಜೆಪಿ ಅವರ ಮನಸ್ಥಿತಿ. ಆದರೆ, ಸಂವಿಧಾನ ನಮ್ಮ ರಕ್ಷಣೆ ಮಾಡುತ್ತದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ನಿಗಮ ಮಂಡಳಿಯಲ್ಲಿ ಅವಕಾಶ ನೀಡಲು ಸಚಿವ ಸ್ಥಾನ ವಂಚಿತ ಶಾಸಕರ ಮನವಿ
ವಿಪಕ್ಷಗಳ ಕುತಂತ್ರ ರಾಜಕೀಯದಿಂದ ಸದನದಲ್ಲಿ ಮನವಿ ಮಾಡಿದ್ವಿ. ನೋಟಿಸ್ ಕೊಡಿ ಚರ್ಚೆಗೆ ಬನ್ನಿ ಅಂತ ಸಿಎಂ ಆದಿಯಾಗಿ ಸಚಿವರು ಮನವಿ ಮಾಡಿದ್ರು. ವಿಪಕ್ಷಗಳು ಕೇಳೋ ಕೆಲಸ ಮಾಡಿಲ್ಲ. ರಾಜ್ಯದಲ್ಲಿ ಬರಗಾಲ ಇದೆ. KPSC ಹಗರಣ ನಡೆಯುತ್ತಿದೆ. ಕಾವೇರಿ ವಿಚಾರ, ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆಗೆ ಅವಕಾಶ ಕೊಡಲಿಲ್ಲ. ಶಾಸಕರ ಸಮಸ್ಯೆ ಹೇಳಲು ಅವಕಾಶ ಕೊಡಲಿಲ್ಲ. ಅಜೆಂಡಾ ಇಲ್ಲದೆ ವಿಷಯ ಇಲ್ಲದೆ ಹೋರಾಟ ಮಾಡಿದ್ರು. ವಿಷಯ ಇಲ್ಲದೆ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಉತ್ತರ ಕರ್ನಾಟಕ ಜನರಿಗೆ ಹಗರಣ ಆಗಿದೆ ಅಂತ ಸುಳ್ಳು ಬಿತ್ತಿಸಲು ಮುಂದಾಗಿದ್ದಾರೆ. ರಾಜ್ಯದ ಜನ ಇದನ್ನ ನೋಡ್ತಾ ಇದ್ದಾರೆ. ಇವರಿಗೆ ಒಳ್ಳೆಯದು ಆಗಲ್ಲ. ಒಂದು ಸುಳ್ಳನ್ನು ಜನರ ತಲೆಯಲ್ಲಿ ಬಿತ್ತಲು ಹೊರಟಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ದಲಿತರು ಮೇಲೆ ಬರಬಾರರದು, ಆದಿವಾಸಿಗಳು ಮಂತ್ರಿ ಆಗಬಾರದು ಅಂತ ಮಾಡಿದ್ದಾರೆ. ಹಿಂದೆಯೂ ನಮ್ಮ ಪಕ್ಷಕ್ಕೆ ಮುಜುಗರ ಆಗಬಾರದು ಅಂತ ರಾಜೀನಾಮೆ ಕೊಟ್ಟಿದ್ದೆ. SIT ನಮ್ಮ ಪೊಲೀಸರ ಮೇಲೆ ಗೌರವ ಇದೆ. ಇ.ಡಿ ಅಂತಹ ಸಂಸ್ಥೆ ನಮ್ಮದು ಅಲ್ಲ. SIT, ಸಿಓಡಿ ತನಿಖೆಗೆ ಸರಿಯಾಗಿ ಮಾಡಿದ್ದಾರೆ. ಇ.ಡಿ, ಸಿಬಿಐ ತಂದು ಅರೆಸ್ಟ್ ಮಾಡಿದ್ರು. ನಾನು ಬೇಲ್ ತಂದೆ. ಮೊದಲ ಬಾರಿಗೆ ಸಿಬಿಐ ನನ್ನ ಹೆಸರು ಹೇಳಿಲ್ಲ. ನಾನು ಮಂತ್ರಿ ಆದ ಮೇಲೆ ಎರಡನೇ ಜಾರ್ಜ್ಶೀಟ್‌ನಲ್ಲಿ ಹೆಸರು ಸೇರಿಸ್ತಾರೆ. ರಾಜ್ಯದ ಜನರ ದಿಕ್ಕು ತಪ್ಪಿಸೋ ಕೆಲಸ ಆಗ್ತಿದೆ. ಮನುವಾದಿಗಳಿಗೆ ನಾವು ಬಗ್ಗಲ್ಲ. ಸಂವಿಧಾನಕ್ಕೆ ಗೌರವ ಕೊಡ್ತಾ ಇದ್ದೇವೆ. ರಾಜ್ಯಪಾಲರು ಪ್ರಮಾಣ ಬೋಧನೆ ಮಾಡಿದ್ದಾರೆ. ರಾಜ್ಯಪಾಲರಿಂದ ಪ್ರಾಸಿಕ್ಯೂಷನ್‌ಗೆ ಕೊಡಿಸ್ತಾರೆ, ಸ್ವಾಗತ ಮಾಡ್ತೀನಿ. ಬಿಜೆಪಿ ಅವರ ಮೇಲಿನ ಕೇಸ್ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಬೇಕು. ಅದರ ಬಗ್ಗೆ ಚರ್ಚೆ ಆಗಲಿ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಕೇಳಿರೋದಕ್ಕೆ ಸ್ವಾಗತ ಮಾಡ್ತೀನಿ. ಪಿಕ್ & ಚ್ಯೂಸ್ ಮಾಡಿದ್ದಾರೆ. ಕುಮಾರಸ್ವಾಮಿದು ಯಾಕೆ ಕಳಿಸಲಿಲ್ಲ? ನನಗೆ ಹೆಸರು ಮಾತ್ರ ಹಾಕ್ತೀರಾ? ನನಗೊಂದು ನ್ಯಾಯ ಅವರಿಗೊಂದು ನ್ಯಾಯನಾ ಎಂದು ಪ್ರಶ್ನಿಸಿದರು.
ಚುನಾವಣೆಗೆ ಇದನ್ನ ಇಟ್ಟುಕೊಂಡು ಹೋಗ್ತೀವಿ. ವಾಲ್ಮೀಕಿ ಹಗರಣದಲ್ಲಿ ನನ್ನ ಪಾತ್ರ ಇಲ್ಲ… ಇಲ್ಲ.. ಇಲ್ಲ ಅನ್ನೋದು ಜಗಜ್ಜಾಹೀರು ಮಾಡಿದ್ದೇನೆ. ನಾನು ಆದೇಶ ಮಾಡಿದ್ನಾ? ನನ್ನ ನೋಟ್‌ಶೀಟ್ ಇದೆಯಾ? ಯಾಕೆ ದಲಿತರ ಮೇಲೆ ಇಷ್ಟು ದ್ವೇಷ. ಅದಕ್ಕೆ ನೀವು ಮನುವಾದಿಗಳು. ದೇಶದ ಜನರು ನೋಡ್ತಾ ಇದ್ದಾರೆ. 100% ಹಣ ರಿಕವರಿ ಆಗಿದೆ. ಕೇಂದ್ರ ಹಣಕಾಸು ಸಚಿವರ ಅಧೀನದಲ್ಲಿ ಬ್ಯಾಂಕ್ ಬರುತ್ತೆ. ನಿರ್ಮಲಾ ಸೀತಾರಾಮ್ ರಾಜೀನಾಮೆ ಕೊಡಬೇಕು ಅಲ್ಲವಾ? ನಾನು ದಲಿತ, ಆದಿವಾಸಿ ಅಂತ ರಾಜೀನಾಮೆ ಕೇಳ್ತೀರಾ? ನಿರಪರಾಧಿ ಬಗ್ಗೆ ಸುಳ್ಳನ್ನು ಹೇಳಿ ಹೇಳಿ ನಿಜ ಮಾಡೋಕೆ ಹೊರಟಿದ್ದೀರಾ ಎಂದು ನಾಗೇಂದ್ರ ಕಣ್ಣೀರಿಟ್ಟರು. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ – ಸಿಎಂ ಅಂಗಳದಲ್ಲಿ ಚೆಂಡು
ತೋರಿಸ್ತೀನಿ. ನಮ್ಮ ಪಕ್ಷ 100 ಹಾರ್ಸ್ ಪವರ್‌ನಲ್ಲಿ ಓಡುತ್ತಿದೆ. ಸಿಎಂ ಅಭಿವೃದ್ಧಿ ಕುಂಠಿತ ಆಗಬಾರದು. ಜನರ ಅಭಿವೃದ್ಧಿ ಮಾಡ್ತಾ ಇದ್ದಾರೆ. ಖರ್ಗೆ ಅವರಿಗೆ ಮುಜುಗರ ಆಗಬಾರದು. ಖರ್ಗೆ ಅವರನ್ನೇ ಬಿಟ್ಟಿಲ್ಲ ನನ್ನನ್ನ ಮನುವಾದಿಗಳು ಬಿಡ್ತಾರಾ? ನಾನು ಹೋರಾಡ್ತೀನಿ. ಅನ್ಯಾಯ ಎತ್ತಿ ಹಿಡಿಯುತ್ತೇನೆ. 15 ST ಸ್ಥಾನದಲ್ಲಿ ಓಡಾಡ್ತೀನಿ. ಕೋಮುವಾದಿಗಳು ಹಗರಣ ತಂದು ತಲೆದಂಡ ಮಾಡ್ತೀರಾ ನೀವು? ಶಂಭುಕ ಅಲ್ಲ ನಾನು. ಹಿಂಬಾಗಿಲಿಂದ ಬರ್ತೀರಾ ನೀವು? ಬಿಜೆಪಿ ಸರ್ಕಾರ ಹಿಂಬಾಗಿಲಿಂದ ಮಾಡಿರೋದು. ನಮ್ಮ ರಾಜ್ಯ ಬುದ್ದಿವಂತರ ನಾಡಾಗಿದೆ. ಬೇರೆ ಪಕ್ಷದವರನ್ನ ಕರೆದುಕೊಂಡು ಸರ್ಕಾರ ಮಾಡಿದ್ರಿ. 40% ಲೂಟಿ ಮಾಡಿದ್ದೀರಾ ನೀವು? ಸಿಎಂ ಅವರು CLP ಯಿಂದ ದೆಹಲಿಯಿಂದ ಗಲ್ಲಿವರೆಗೂ ನಾಗೇಂದ್ರ ತಪ್ಪು ಮಾಡಿಲ್ಲ ಅಂದ್ರು. ವರಿಷ್ಠರ ಗಮನಕ್ಕೆ ತಂದ್ರು. ವರಿಷ್ಠರಿಗೆ ಮುಜುಗರ ಆಗಬಾರದು ಅಂತ ನನ್ನ ಸ್ವಇಚ್ಛೆಯಿಂದ ರಾಜೀನಾಮೆ ಕೊಡ್ತಾ ಇದ್ದೀನಿ ಎಂದು ಘೋಷಿಸಿದರು.
