– ಶ್ರೀರಾಮುಲು ಅಣ್ಣ ಬಳ್ಳಾರಿಯಲ್ಲಿ ನೀನು ರಿಜೆಕ್ಟ್ ಪೀಸು ಅಂತ ಟಾಂಗ್
ಬೆಂಗಳೂರು: ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡ್ತೀನಿ. ಜನತಾ ನ್ಯಾಯಾಲಯಕ್ಕೆ ಹೋಗೋಣ ಬನ್ನಿ ಎಂದು ಶ್ರೀರಾಮುಲು (Sriramulu) ಮತ್ತು ಜನಾರ್ದನ ರೆಡ್ಡಿಗೆ (Janardhan Reddy) ಬಿ.ನಾಗೇಂದ್ರ (B.Nagendra) ಸವಾಲು ಹಾಕಿದರು.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗೇಂದ್ರ ಅವರು, ಸಿಎಂ ಅವರಿಗೆ ರಾಜೀನಾಮೆ ಕೊಡ್ತಾ ಇದ್ದೀನಿ. ವರಿಷ್ಠರಲ್ಲಿ ನನ್ನ ಮನವಿ ಇದೆ. ಸಿಎಂ ಹಾದಿ ಇಟ್ಟುಕೊಂಡು ನನಗೆ ಆಗಿರೋ ಅನ್ಯಾವನ್ನು ಮನವಿ ಮಾಡ್ತೀನಿ. ಖರ್ಗೆ, ರಾಹುಲ್, ಸಿದ್ದರಾಮಯ್ಯ, ಸಿಎಂ, ವೇಣುಗೋಪಾಲ್, ಸುರ್ಜೇವಾಲ ಅವರಿಗೆ ಮನವಿ ಮಾಡ್ತೀನಿ. ನನಗೆ ಒಂದು ಅವಕಾಶ ಕೊಡಿ. ಇದು ಬ್ಲ್ಯಾಕ್‌ಮೇಲ್ ಅಲ್ಲ. ನನ್ನ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡ್ತೀನಿ. ಜನತಾ ನ್ಯಾಯಾಲಯಕ್ಕೆ ಹೋಗೋಣ. ಬನ್ನಿ ಹೋಗೋಣ. ಆರೋಪಿಗಳು ಅವರು. ತಂದೆ ಸಹಿ ನಕಲು ಮಾಡಿದವರು. ಸದನದಲ್ಲಿ 420 ಕೇಸ್ ಇದೆ. ಸೋ ಕಾಲ್ಡ್ ಲೀಡರ್‌ಗಳಿಗೆ ಸವಾಲ್ ಹಾಕ್ತೀನಿ. ಜನತಾ ನ್ಯಾಯಾಲಯಕ್ಕೆ ಹೋಗೋಣ. ನಿಮಗೆ ತಾಕತ್ತು ಇದ್ದರೆ ಕಾಂಗ್ರೆಸ್ ಎದುರಿಸಿ. ನಿಮ್ಮ ಗೊಡ್ಡು ಬೆದರಿಕೆಗೆ ಬಗ್ಗಲ್ಲ. ಇಡಿ, ಸಿಬಿಐಗೆ ಹೆದರಲ್ಲ. ನಮ್ಮ ಜೆಲ್ಲೆಯಲ್ಲಿ ನನ್ನಂತಹ ಲಕ್ಷಾಂತರ ನಾಗೇಂದ್ರ ಇದ್ದಾರೆ. ರೆಡ್ಡಿ, ರಾಮುಲು ಕುತಂತ್ರ ಅಂತೀರಾ ಬನ್ನಿ ರಾಜೀನಾಮೆ ಮಾಡ್ತೀನಿ ಎಂದು ಪಂಥಾಹ್ವಾನ ನೀಡಿದರು. ಇದನ್ನೂ ಓದಿ: ಕಣ್ಣೀರಿಟ್ಟು ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಾಗೇಂದ್ರ
ರಾಮುಲು ಅಣ್ಣ ನೀನೆ ಬಾ ಜನತಾ ನ್ಯಾಯಾಲಯಕ್ಕೆ ಹೋಗೋಣ. ನನ್ನ ಸವಾಲು ಸ್ವೀಕಾರ ಮಾಡಬೇಕು. ವರಿಷ್ಠರಿಗೆ ಮನವಿ ಮಾಡ್ತೀನಿ. ಬಳ್ಳಾರಿ ಮುಗ್ಧ ಜನರನ್ನ ಬಳಕೆ ಮಾಡಿದ್ದೀರಾ. ಬಳ್ಳಾರಿಯಲ್ಲಿ ರಿಜೆಕ್ಟ್ ಫೀಸ್ ನೀವು. ಬನ್ನಿ ಸ್ವಾಮೀ. ಪಕ್ಕದಲ್ಲಿ ನಿಂತು ಯಾರಿಗೋ ಚೀಟಿ ಕೊಡೋದು ಅಲ್ಲ ಬನ್ನಿ. ನಾನು ಅಖಾಡಕ್ಕೆ ಇಳಿಯುತ್ತೇನೆ. ಜನತಾ ನ್ಯಾಯಾಲಯಕ್ಕಿಂತ ದೊಡ್ಡದು ಯಾವುದು ಅಲ್ಲ. ಈ ಕೇಸ್‌ನಲ್ಲಿ ನಾನು ಆರೋಪ ಮುಕ್ತವಾಗಿ ಬರ್ತೀನಿ ಎಂದು ಕರೆದರು.
ಇಲ್ಲಸಲ್ಲದ ಕಾರಣದಿಂದ ನೀಚ ಕೆಲಸ ಮಾಡೋಕೆ ಹೊರಟಿದ್ದೀರಾ? ನಿಮಗೆ ಒಳ್ಳೆಯದು ಆಗೊಲ್ಲ. ನನ್ನ ಸಮುದಾಯದಲ್ಲಿ ವಿಲನ್ ಮಾಡೋಕೆ ಹೊರಟಿದ್ದೀರಾ? ಆಗೊಲ್ಲ ಸ್ವಾಮಿ. ನಮ್ಮ ಜನ ಎಚ್ಚೆತ್ತುಕೊಂಡಿದ್ದಾರೆ. ರಾಮಾಯಣ ಬರೆದಿರೋ ಸಮಾಜ. ಕುತಂತ್ರದಿಂದ ನಮ್ಮನ್ನ ಮುಗಿಸೋಕೆ ಸಾಧ್ಯವಿಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು. ಇದನ್ನೂ ಓದಿ: ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ – ಸಿಎಂ ಅಂಗಳದಲ್ಲಿ ಚೆಂಡು
ಸಿಎಂ ಅವರಿಗೆ ಧನ್ಯವಾದ. ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್, ರಾಹುಲ್ ಗಾಂಧಿ, ಸುರ್ಜೇವಾಲ, ಸಿದ್ದರಾಮಯ್ಯ, ಹರಿಪ್ರಸಾದ್, ಜಮೀರ್, ನಾಸೀನ್ ಅಹಮದ್, ಪ್ರಿಯಾಂಕ್ ಖರ್ಗೆಗೆ ಧನ್ಯವಾದ ಹೇಳ್ತೀನಿ. ಎಲ್ಲರೂ ಸದನದಲ್ಲಿ ಮಾತಾಡೋಕೆ ನನ್ನ ಪರ ಇದ್ದರು. ಅವಕಾಶ ಕೊಡಲಿಲ್ಲ. ನಮ್ಮ ಬಳ್ಳಾರಿ ಶಾಸಕರು, ಸಂಸದರು ನಮ್ಮ ಒಟ್ಟಿಗೆ ಇದ್ದಾರೆ ಎಂದು ಹೇಳಿದರು.
