– ಉಕ್ರೇನ್ ಕೌಂಟರ್ ಅಟ್ಯಾಕ್ಗೆ ರಷ್ಯಾದ ಮೂವರು ಬಲಿ
ಕೀವ್: ಉಕ್ರೇನ್ನಾದ್ಯಂತ ರಷ್ಯಾ (Russia-Ukraine) ನಡೆಸಿದ ದಾಳಿಗಳಲ್ಲಿ 8 ಮಂದಿ ಸಾವನ್ನಪ್ಪಿದ್ದು, 30 ಜನರು ಗಾಯಗೊಂಡಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಉಕ್ರೇನ್ ನಡೆಸಿದ ಡ್ರೋನ್ ದಾಳಿಗೆ ರಷ್ಯಾದಲ್ಲಿ ಮೂವರು ಮೃತಪಟ್ಟಿದ್ದಾರೆ.
ರಷ್ಯಾದ ದಾಳಿಯಲ್ಲಿ ತಾಯಿ ಮತ್ತು ಮಗುವೊಂದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಮಗು ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ. ರಷ್ಯಾದ ಪಡೆಗಳು ಉಕ್ರೇನ್ ವಿರುದ್ಧ 138 ಡ್ರೋನ್ಗಳನ್ನು ಉಡಾಯಿಸಿವೆ. ಅವುಗಳಲ್ಲಿ 101 ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ. ಇದನ್ನೂ ಓದಿ: ಅಮೆರಿಕ ಸಂಕಷ್ಟದ ಸುಳಿಯಿಂದ ಹೊರಬರಲು ಬಯಸಿದ್ರೆ..: ಟ್ರಂಪ್ಗೆ 7 ಷರತ್ತು ವಿಧಿಸಿದ ಇರಾನ್
ಪೂರ್ವ ಡೊನೆಟ್ಸ್ಕ್ ಒಬ್ಲಾಸ್ಟ್ನಲ್ಲಿ ಕಳೆದ ಒಂದು ದಿನದಲ್ಲಿ ರಷ್ಯಾದ ದಾಳಿಗಳಿಂದ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ವಾಡಿಮ್ ಫಿಲಾಶ್ಕಿನ್ ತಿಳಿಸಿದ್ದಾರೆ.
ಈಶಾನ್ಯ ಖಾರ್ಕಿವ್ ಪ್ರದೇಶದಲ್ಲಿ ಕಳೆದ ದಿನ ನಡೆದ ರಷ್ಯಾದ ದಾಳಿಗಳಲ್ಲಿ 19 ವರ್ಷದ ಯುವಕ, 32 ವರ್ಷದ ಮಹಿಳೆ ಮತ್ತು 50 ವರ್ಷದ ವ್ಯಕ್ತಿಯೊಬ್ಬರು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ಒಲೆಹ್ ಸಿನಿಯುಬೊವ್ ತಿಳಿಸಿದ್ದಾರೆ. ಇದನ್ನೂ ಓದಿ: ಒಂದೇ ರಾತ್ರಿಯಲ್ಲಿ 1,100 ಡ್ರೋನ್ಗಳ ದಾಳಿ – ರಷ್ಯಾ ಮೇಲೆ ಉಕ್ರೇನ್ ಅತಿದೊಡ್ಡ ಅಟ್ಯಾಕ್
ಉಕ್ರೇನ್ ಭಾನುವಾರ ಮಾಸ್ಕೋ ಮೇಲೆ ನೂರಾರು ಡ್ರೋನ್ಗಳ ದಾಳಿ ನಡೆಸಿತು. ರಷ್ಯಾದ ಸಂಸದೀಯ ಚುನಾವಣೆಯ ಅಂತಿಮ ದಿನದಂದು ನಡೆದ ಈ ದಾಳಿಯಲ್ಲಿ ಮೂವರು ಮೃತಪಟ್ಟರು.

