ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಯಶ್ (Yash) ಕನಸಿನ ಕೂಸು ಟಾಕ್ಸಿಕ್ ಬಗ್ಗೆ ನಟ ಕಿಚ್ಚ ಸುದೀಪ್ (Kichcha Sudeep) ಮೆಚ್ಚುಗೆಯ ಮಾತನಾಡಿದ್ದಾರೆ. ಸಾಮಾನ್ಯವಾಗಿ ಓರ್ವ ದೊಡ್ಡ ನಟ ಇನ್ನೋರ್ವ ಬಿಗ್‌ಸ್ಟಾರ್ ಚಿತ್ರವನ್ನ ಸ್ಪರ್ಧಾತ್ಮಕವಾಗಿ ಹಾಗೂ ಪೈಪೋಟಿ ರೀತಿಯಲ್ಲಿ ನೋಡುವ ವಾಡಿಕೆ ಇರುವಾಗ, ಕಿಚ್ಚ ಸುದೀಪ್ `ಟಾಕ್ಸಿಕ್’ (Toxic) ಸಿನಿಮಾವನ್ನು ಕೊಂಡಾಡಿದ್ದಾರೆ.
`ಟಾಕ್ಸಿಕ್’ ಚಿತ್ರ ವೀಕ್ಷಿಸಿ ಉತ್ತಮ ವಿಮರ್ಶೆ ಮಾಡಿರುವ ಸುದೀಪ್ ತಮ್ಮ ಮನದ ಮಾತನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಯಶ್ ಹೊಸ ಪ್ರಯತ್ನವನ್ನು ಶ್ಲಾಘಿಸಿದ ಸುದೀಪ್, ಈ ಸಿನಿಮಾದಿಂದ ಕಲಿಕೆ ಹಾಗೂ ಆರೋಗ್ಯಕರ ಚರ್ಚೆಗೆ ಅವಕಾಶವಿದೆ ಎಂದು ಹೊಗಳಿಕೆಯ ಪದಗಳನ್ನ ಬರೆಯುವ ಮೂಲಕ `ಟಾಕ್ಸಿಕ್’ಗೆ ಬಲ ತುಂಬಿದ್ದಾರೆ. ಇದನ್ನೂ ಓದಿ: ರಾಕಿಂಗ್ ಸ್ಟಾರ್ ಅಬ್ಬರ – ಮೊದಲ ದಿನವೇ 140 ಕೋಟಿ ಬಾಚಿದ ಟಾಕ್ಸಿಕ್
ಇದೊಂದು ಮಾತನ್ನು ಹೇಳಬೇಕು ಅನಿಸುತ್ತಿದೆ ಎನ್ನುವ ಮೂಲಕ ಯಶ್ ಅವರ ಸಿನಿಮಾವನ್ನು ಹಾಡಿಹೊಗಳಿದ್ದಾರೆ.
Just want to say this, @TheNameIsYash — you’ve genuinely tried something out of the box rather than taking the predictable route of making another regular, expected, formulaic follow-up to your previous commercial blockbuster.
It takes a different mindset, conviction, and most…
— Kichcha Sudeepa (@KicchaSudeep) August 28, 2026
ಸುದೀಪ್ ರಿಯಾಕ್ಷನ್ ಏನು?
ಯಶ್ ನಿಮ್ಮ ಹಿಂದಿನ ಕಮರ್ಷಿಯಲ್ ಬ್ಲಾಕ್‌ಬಸ್ಟರ್‌ನ ಯಶಸ್ಸಿನ ಹಾದಿಯ ಸಿದ್ಧಸೂತ್ರವನ್ನ ಬ್ರೇಕ್ ಮಾಡಿದ್ದೀರಿ. ಅದೇ ರೀತಿಯ ಮತ್ತೊಂದು ಸಾಮಾನ್ಯ, ನಿರೀಕ್ಷಿತ ಹಾಗೂ ಫಾರ್ಮುಲಾ ಸಿನಿಮಾವನ್ನು ಮಾಡುವ ಬದಲು, ನೀವು ನಿಜವಾಗಿಯೂ ವಿಭಿನ್ನವಾದ, ಹೊಸ ರೀತಿಯ ಪ್ರಯತ್ನಕ್ಕೆ ಕೈ ಹಾಕಿದ್ದೀರಿ. ಇಂತಹ ವಿಭಿನ್ನ ಹಾಗೂ ವಿನೂತನ ಕಥಾಹಂದರವನ್ನು ಕೈಗೆತ್ತಿಕೊಳ್ಳಲು ವಿಶೇಷ ಮನಸ್ಥಿತಿ, ಬದ್ಧತೆ ಮತ್ತು ಅಪಾರ ಧೈರ್ಯ ಬೇಕು. `ಟಾಕ್ಸಿಕ್’ ಒಂದು ಶ್ಲಾಘನೀಯ ಪ್ರಯತ್ನ. ಇದರಲ್ಲಿ ಕುತೂಹಲ ಕೆರಳಿಸುವ, ಆರೋಗ್ಯಕರ ಚರ್ಚೆ ಹಾಗೂ ಕಲಿಕೆಯ ಅವಕಾಶ ಮಾಡಿಕೊಡುವ ಹಲವು ಅಂಶಗಳಿವೆ. ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬಂದು, ವಿಭಿನ್ನವಾಗಿ ಪ್ರಯೋಗ ಮಾಡುವ ಧೈರ್ಯ ತೋರಿದ್ದಕ್ಕೆ ನಿಮಗೆ ಅಭಿನಂದನೆಗಳು. ಸ್ನೇಹಿತ.. ನಿಮ್ಮ ಮುಂದಿನ ಹಾದಿಗೆ ಪ್ರೀತಿ ತುಂಬಿದ ಶುಭ ಹಾರೈಕೆಗಳು.
– ನಿಮ್ಮ ಕಿಚ್ಚ
ಹೀಗೆ ಯಶ್ ಟಾಕ್ಸಿಕ್ ಚಿತ್ರದ ಕುರಿತು ಕಿಚ್ಚ ಸುದೀಪ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಶ್ ಹೊಸ ಪ್ರಯತ್ನ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಹೀಗೆ ಖುದ್ದು ಸುದೀಪ್ ಟಾಕ್ಸಿಕ್ ಸಿನಿಮಾ ವೀಕ್ಷಿಸಿ ಉತ್ತಮವಾಗಿ ವಿಮರ್ಶೆ ಮಾಡಿರೋದು ಇಬ್ಬರ ನಡುವಿನ ಉತ್ತಮ ಬಾಂಡಿಗ್‌ಗೆ ಎಕ್ಸಾಂಪಲ್ ಆಗಿದೆ. ಇದನ್ನೂ ಓದಿ: ತಮ್ಮ ಫೇವರೇಟ್ ಪರ್ಸನ್‌ನಿಂದ ರಾಖಿ ಕಟ್ಟಿಸಿಕೊಂಡ ರಾಕಿಭಾಯ್
