ಚಿಕ್ಕೋಡಿ: ಯುವಕರ ಗುಂಪೊಂದು ಹಳೆ ವೈಷಮ್ಯಕ್ಕೆ ಹಾಗೂ ರೌಡಿಸಂನಲ್ಲಿ ಹವಾ ಮೆಂಟೇನ್ ಮಾಡಬೇಕು ಎಂದು ಯುವಕನೋರ್ವನನ್ನು ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ.
ಬೆಳಗಾವಿ(Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿನ ಸರ್ವಿಸ್ ರೋಡ್ ಬಳಸಿಕೊಂಡು ತನ್ನ ಬೈಕ್ ಮೇಲೆ ಮನೆಗೆ ತೆರಳುತ್ತಿದ್ದ ವಿನಾಯಕ ಹರಕೇರಿ(28) ಎಂಬ ಯುವಕನನ್ನು ಗುಂಪೊಂದು ಅಡ್ಡಗಟ್ಟಿದೆ. ಬಳಿಕ ಅವನ ಮೇಲೆ ಐವರ ತಂಡ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿತ್ತು. ತೀವ್ರವಾಗಿ ಹಲ್ಲೆ ಆಗಿದ್ದರಿಂದ ವಿನಾಯಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದ ಯಮಕನಮರಡಿ ಪೊಲೀಸರು ಸ್ಥಳ ಮಹಜರು ಹಾಗೂ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
Advertisement
Advertisement
ಘಟನೆಗೆ ಸಂಬಂಧಿಸಿ ಕೇವಲ 5 ದಿನಗಳಲ್ಲಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಮಕನಮರಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಗುರವ್, ಈರಣ್ಣ ಹಿನ್ನಕ್ಕನವರ್, ಆದಿತ್ಯ ಗಣಾಚಾರಿ, ಮಹಾಂತೇಶ್ ಕರಗುಪ್ಪಿ, ಶಾನೂರ ನದಾಫ್ ಎಂಬ ಐವರು ಯುವಕರನ್ನು ಪೊಲೀಸರು(Police) ಬಂಧಿಸಿದ್ದಾರೆ. ಇದನ್ನೂ ಓದಿ: ಎಎಪಿ ಅಧಿಕಾರಕ್ಕೇರಿದ ರಾಜ್ಯಗಳಲ್ಲಿ ಗುತ್ತಿಗೆ ನೌಕರರ ಹುದ್ದೆ ಖಾಯಂ: ಕೇಜ್ರಿವಾಲ್
Advertisement
Advertisement
ಕೊಲೆಯಾದ ವಿನಾಯಕ ಸಹ ಕಳೆದ 2 ವರ್ಷದ ಹಿಂದೆ ನಾಡಪಿಸ್ತೂಲಿನಿಂದ ಸತೀಶ್ ಜಾರಕಿಹೊಳಿ ಆಪ್ತ ಭರಮಾ ಧುಪದಾಳೆ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ. ಆದರೆ ಅದೇ ಪ್ರಕರಣದಲ್ಲಿ ಪೊಲೀಸರಿಂದ ಬಂಧಿತನಾಗಿ ಬೇಲ್ ಮೇಲೆ ಹೊರಗಿದ್ದ. ಸದ್ಯ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದ್ದು, ಐವರನ್ನು ಯಮಕನಮರಡಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಪರೀಕ್ಷೆ ಬರೆಯಲು ಈಜಿ ಚಂಪಾವತಿ ನದಿ ದಾಟಿದ ಯುವತಿ